Site icon Vistara News

Karnataka Election: ಸಚಿವರಾಗಿ, ಸ್ಪೀಕರ್‌ ಆದವರು ಕ್ಷೇತ್ರಕ್ಕೆ ಏನನ್ನೂ ಕೊಟ್ಟಿಲ್ಲ: ಭೀಮಣ್ಣ ನಾಯ್ಕ ಕಿಡಿ

ಭೀಮಣ್ಣ ನಾಯ್ಲ ಅವರಿಂದ ಪ್ರಚಾರ

ಶಿರಸಿ: “ಕಳೆದ ಮೂರು ದಶಕಗಳಿಂದ ಕ್ಷೇತ್ರದ ಜನರು ಬಿಜೆಪಿ‌ಯನ್ನು ಬೆಂಬಲಿಸಿದ್ದಾರೆ. ಇಲ್ಲಿನ ನಾಯಕರು ಶಿಕ್ಷಣ ಸಚಿವರಾದರು, ಸ್ಪೀಕರ್ ಆದರು. ಅವರು ದೊಡ್ಡ ದೊಡ್ಡ ಹುದ್ದೆಗೆ ಏರಿದರು. ಆದರೆ, ನಾಯಕರು ‌ಕ್ಷೇತ್ರದ ಜನತೆಯ ಬೆಂಬಲದಷ್ಟೇ ನ್ಯಾಯ ಕೊಟ್ಟರಾ? ಭಾಷಣದಲ್ಲಿ ಸಂಸ್ಕೃತಿ, ಕ್ರೀಡೆ ಉಳಿಸಬೇಕು ಎನ್ನುವವರು ನಿಜವಾಗಿ ನಡೆದುಕೊಳ್ಳುವುದು ಹೇಗೆ? ಎಂಬುದು ನೆನಪು‌ ಮಾಡಿಕೊಳ್ಳಬೇಕು” ಎಂದು ಕಾಂಗ್ರೆಸ್ ಅಭ್ಯರ್ಥಿ (Karnataka Election) ಭೀಮಣ್ಣ ನಾಯ್ಕ ಹೇಳಿದರು.

ಅವರು ತಾಲೂಕಿನ ಮಳಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿ ಮಾತ‌ನಾಡಿದ ಅವರು, “ಜನಪ್ರತಿನಿಧಿ ಆದವರು‌ ಸರ್ಕಾರದ ಪ್ರತಿನಿಧಿ ಆಗಬಾರದು. ಜನರು‌ ಜಿಲ್ಲಾ ಹೋರಾಟ‌ ಮಾಡಿದರು, ಇ‌ ಖಾತಾ ಸಮಸ್ಯೆ, ಫಾರಂ ನಂವರ್ 3ಕ್ಕೆ ಹೋರಾಟ‌ ಮಾಡಿದರು. ಗುತ್ತಿಗೆದಾರರು ಬಿಲ್ ಪಾವತಿ ಆಗದೇ ಇರುವ ಬಗ್ಗೆ ಹೋರಾಟ ನಡೆಸಿದರು. ಕೇಂದ್ರ ಸರ್ಕಾರದ‌‌ ಸಾಗರ‌ ಮಾಲಾ ಯೋಜನೆಯ‌ ಕುಮಟಾ ಶಿರಸಿ ಮಾರ್ಗದ ಅನುಷ್ಠಾನದಲ್ಲಿ ವಿಳಂಬ, ಜನರ ಬವಣೆ ಬಗ್ಗೆ ಪ್ರತಿಭಟನೆ ನಡೆಸಿದರು. ಜನರ ಸಮಸ್ಯೆಗೆ‌ ಧ್ವನಿಯಾಗುವ ಬದಲು ತಮ್ಮ ವಿರುದ್ಧದ ಪ್ರತಿಭಟನೆ ಎಂದೇ ಭಾವಿಸಿದರೆ ಅದು ಸರಿಯಲ್ಲ. ಜನರ ನೋವಿಗೆ ಸ್ಪಂದಿಸದ ಜನಪ್ರತಿನಿಧಿಗಳು ಯಾವ ಹುದ್ದೆಯಲ್ಲಿ ಇದ್ದರೂ ಅರ್ಥವಿಲ್ಲ ಹಾಗೂ ಜನರಿಗೆ ಹಿತವಿಲ್ಲ” ಎಂದರು.

ಇದನ್ನೂ ಓದಿ: Karnataka Election: ಶಿರಸಿ-ಸಿದ್ದಾಪುರದಲ್ಲಿ ಮನೆಯಿಂದಲೇ ಮತದಾನ ಆರಂಭ

ಪ್ರಚಾರ ನಡೆಸಿದ ಭೀಮಣ್ಣ ನಾಯ್ಕ

“ಬಡವರಿಗೆ ಕನಸಿನ ಮನೆಯ‌ ಬಗ್ಗೆ ಆಸೆ ಹುಟ್ಟಿಸಿ ಮೋಸ ಮಾಡಿದರು. ಬಂದ ಮನೆ‌ ವಾಪಸ್ ಹೋಯಿತು. ಬಡವರ ಬಗ್ಗೆ ಅಷ್ಟೆಲ್ಲ ಪ್ರೀತಿ ಇದ್ದವರು ಚುನಾವಣೆ ಮೊದಲು ಮನೆ ನಿರ್ಮಾಣ ಮಾಡಬೇಕಿತ್ತು. ಮನೆ ಅರೆಬರೆ ಆದವರಿಗೂ ಅನುದಾನ ಕೊಡಲಾಗದ ಸರ್ಕಾರ ಇದು” ಎಂದ ಭೀಮಣ್ಣ ಅವರು ಟೀಕಿಸಿದರು.

“ಕಾಂಗ್ರೆಸ್ ಶಾಸಕರು‌ ಇರುವಲ್ಲೇ ಗ್ರಾಮ ಪಂಚಾಯಿತಿಗಳಿಗೆ ಕಾಗೇರಿ ಅವರು ತಂದ ಅನುದಾನ ಹೆಚ್ಚು ಬಂದಿದೆ. ಕ್ಷೇತ್ರದ ಬಾಂಧವ್ಯ ಕೂಡ ಚೆನ್ನಾಗಿದೆ. ಈಗ ಇಲ್ಲಿ‌ ರಸ್ತೆ ದೀಪ, ಡಬಲ್ ರೋಡ್, ಆಸ್ಪತ್ರೆ ಹೇಳುತ್ತಾರೆ. ಉಳಿದ ಕ್ಷೇತ್ರ ಒಮ್ಮೆ ನೋಡಿದರೆ ಯಾರು ಮೊದಲು ಎಂಬುದು ಅರಿವಾಗುತ್ತದೆ” ಎಂದರು.

ಇದನ್ನೂ ಓದಿ: Karnataka election 2023: ಮೇ 2ರಂದು ವಿಜಯನಗರಕ್ಕೆ ಪ್ರಧಾನಿ ಮೋದಿ; 3 ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ: ಆನಂದ್‌ ಸಿಂಗ್‌

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಮಪತ್ರ ವಾಪಸ್ ಪಡೆದ ಹೊಸಬಾಳೆ ವೆಂಕಟೇಶ ಹೆಗಡೆ ಮಾತನಾಡಿ, “ಭೀಮಣ್ಣ ನಾಯ್ಕ ಅವರಿಗೆ ಈ ಬಾರಿ ಅನುಕಂಪವಿದೆ. ಒಳ್ಳೆಯ ವ್ಯಕ್ತಿಯೂ ಹೌದು. ಒಳ್ಳೆಯ ಅಂತರದಿಂದ ಗೆಲ್ಲುವುದಕ್ಕೆ ಪ್ರಯತ್ನಿಸಬೇಕಾಗಿದೆ” ಎಂದರು.

ಎಸ್.ಕೆ. ಭಾಗ್ವತ, ವೆಂಕಟೇಶ ಹೆಗಡೆ, ಅಬ್ಬಾಸ್ ತೋನ್ಸೆ, ಅರುಣ ಗೌಡ, ಆರ್ ಜಿ ನಾಯ್ಕ್ ಕಿಬ್ಬಳ್ಳಿ, ಶ್ರೀಪಾದ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.

Exit mobile version