Site icon Vistara News

Karnataka Election: ಭಟ್ಕಳದಲ್ಲಿ ಬಿಜೆಪಿ ಗೆಲುವು ಗ್ಯಾರೆಂಟಿ: ಶ್ಯಾಮ್‌ ರಾಜ್‌ ಅಭಿಮತ

Shyam Raj says bjp party will win in bhatkal

Shyam Raj in bhatkal

ಭಟ್ಕಳ: “ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಶಾಸಕ ಸುನಿಲ್ ನಾಯ್ಕ ಮತ್ತೆ ಆಯ್ಕೆ ಆಗಲಿದ್ದಾರೆ. ಜನರು ಅಭಿವೃದ್ಧಿ ನೋಡಿ ಮತ ನೀಡಲಿದ್ದಾರೆ” ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೇರಳದ ಶ್ಯಾಮ್ ರಾಜ್ ಹೇಳಿದರು.

ಭಟ್ಕಳ ಬಿಜೆಪಿಯ ಚುನಾವಣಾ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ಯಾಮ್‌ ರಾಜ್‌ ಅವರು, “ಪ್ರಧಾನಿ ಮೋದಿಯವರು ದೇಶದಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿದೆ. ಇಂದು ಭಾರತ ಎಲ್ಲ ರಂಗಗಳಲ್ಲಿಯೂ ಭಾರಿ ಅಭಿವೃದ್ಧಿ ಹೊಂದುತ್ತಿದೆ. ಈ ಎಲ್ಲ ಅಭಿವೃದ್ಧಿ ನೋಡಿ ಜನರು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಆಯ್ಕೆ ಮಾಡಲಿದ್ದಾರೆ” ಎಂದರು.

ಬಿಜೆಪಿ ಭಟ್ಕಳ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ, “ಭಟ್ಕಳ ಕ್ಷೇತ್ರದಲ್ಲಿ ಶಾಸಕ ಸುನಿಲ್ ನಾಯ್ಕ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಾಜಾಂಗಣ ನಾಗಬನ ಜೀರ್ಣೋದ್ಧಾರ, ರಿಕ್ಷಾ ಚಾಲಕರ ಸಂಘದ ಗಣೇಶೋತ್ಸವಕ್ಕೆ ಜಾಗ ಮಂಜೂರಿ ಸೇರಿದಂತೆ ಹಲವಾರು ಹಿಂದುತ್ವ ಪರವಾದ ಕೆಲಸ ಮಾಡಿದ್ದಲ್ಲದೇ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಕಡೆಗಳಲ್ಲಿ ರಿಕ್ಷಾ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಮತ್ತೊಮ್ಮೆ ಶಾಸಕರ ಗೆಲುವಿಗೆ ಕಾರಣವಾಗಲಿದೆ. ಕಾಂಗ್ರೆಸ್ ಬೋಗಸ್ ಗ್ಯಾರೆಂಟಿ ಕಾರ್ಡ್ ಹಿಡಿದುಕೊಂಡು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ” ಎಂದರು.

ಇದನ್ನೂ ಓದಿ: Karnataka Election: ಹೊನ್ನಾಳಿಯಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌; ನಾಮಪತ್ರ ಹಿಂಪಡೆದು ಅಭ್ಯರ್ಥಿ ನಾಪತ್ತೆ!

ಬಿಜೆಪಿ ಮುಖಂಡ ಎನ್. ಎಸ್. ಹೆಗಡೆ ಮಾತನಾಡಿ, “ಭಟ್ಕಳ ಸೇರಿದಂತೆ ಉತ್ತರ ಕನ್ನಡದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಲು ಮುಖಂಡರು, ಕಾರ್ಯಕರ್ತರು ಪಣತೊಟ್ಟಿದ್ದು, ಇಂದಿನಿಂದ ರಾಜ್ಯ ನಾಯಕರ ನಿರ್ದೇಶನದಂತೆ ಮನೆ ಮನೆ ಪ್ರಚಾರ ಆರಂಭಿಸುತ್ತಿದ್ದೇವೆ. ಪ್ರಚಾರಕ್ಕಾಗಿ ಕೇಂದ್ರ ಮಂತ್ರಿಗಳು, ವಿವಿಧ ರಾಜ್ಯದ ಮುಖಂಡರು, ಶಾಸಕರು, ಸಂಸದರು ಬರುವವರಿದ್ದಾರೆ. ಎಲ್ಲ ಕ್ಷೇತ್ರಗಳ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಲಿದ್ದೇವೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಕುಂದಾಪುರದ ಕಿಶೋರ ಕುಮಾರ್‌, ಪ್ರಸನ್ನ ಕೆರೆಕೈ, ಪ್ರಶಾಂತ್ ನಾಯ್ಕ, ಶಿವಾನಿ ಶಾಂತಾರಾಮ, ಸವಿತಾ ಗೊಂಡ, ಮುಂತಾದವರು ಹಾಜರಿದ್ದರು.

Exit mobile version