Site icon Vistara News

Karnataka Election: ಮತಗಟ್ಟೆಗಳಲ್ಲಿ ವರ್ಲಿ ಆರ್ಟ್‌; ಕಾರವಾರದಲ್ಲಿ ಮತ ಜಾಗೃತಿಗೆ ಚಿತ್ರಕಲೆಯ ಸಾಥ್‌

#image_title

ಕಾರವಾರ: “ವಿಧಾನಸಭಾ ಸಾರ್ವತ್ರಿಕ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಮತದಾನ ದಿನದ ಪೂರ್ವಭಾವಿಯಾಗಿ ಏಪ್ರಿಲ್ 30ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳನ್ನು ತೆರೆದಿಟ್ಟು ಮತದಾರರು ಮತ ಹಾಕುವ ಮತಗಟ್ಟೆಗಳ ವೀಕ್ಷಣೆಗಾಗಿ ಅವಕಾಶ ಕಲ್ಪಿಸಲಾಗಿದೆ. ಅಂದು ಜಿಲ್ಲೆಯಾದ್ಯಂತ ಮತದಾರರ ನಡಿಗೆ ಮತಗಟ್ಟೆಯ ಕಡೆಗೆ ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲ ಮತದಾರರು ಬಂದು ತಮ್ಮ ತಮ್ಮ ಮತಗಟ್ಟೆಗಳನ್ನು ನೋಡಬಹುದಾಗಿದೆ” ಎಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತಿಳಿಸಿದ್ದಾರೆ. ಅಲ್ಲದೆ, ಹಲವು ಮತಗಳಲ್ಲಿ ವರ್ಲಿ ಆರ್ಟ್‌ಗಳು ಗಮನ ಸೆಳೆಯುತ್ತಿದ್ದು, ಮತದಾನದ ಜಾಗೃತಿಯನ್ನು ಮೂಡಿಸುತ್ತಿವೆ.

ಮತದಾನದ ಕುರಿತು ವರ್ಲಿ ಆರ್ಟ್‌ ಮೂಲಕ ಜಾಗೃತಿ ಮೂಡಿಸಿರುವುದು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಈಶ್ವರ ಕಾಂದೂ, “ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದಿಂದ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ವಿಶೇಷವಾಗಿ ಮನೆಯಿಂದಲೇ ಮತದಾನ ಮಾಡಲು ಒದಗಿಸಿದ ಅವಕಾಶ, ಮತದಾನ ಪ್ರಕ್ರಿಯೆ, ಕಡ್ಡಾಯ ಹಾಗೂ ನಿಷ್ಪಕ್ಷಪಾತ ಮತದಾನ ಕುರಿತು ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್‌ ಚಟುವಟಿಕೆಯನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ಮಾಹಿತಿ ಕೊಟ್ಟಿದ್ದಾರೆ.

ಗೋಡೆಗಳ ಮೇಲೆ ಮತದಾನದ ಮಹತ್ವಗಳ ಬಗ್ಗೆ ಚಿತ್ರಕಲೆ ಮೂಲಕ ಜಾಗೃತಿ

“ಇದರ ಮುಂದುವರಿದ ಭಾಗವಾಗಿ ಮತದಾರರಿಗೆ ಹೆಚ್ಚು ಅನುಕೂಲವಾಗುವಂತೆ ಸ್ವೀಪ್ ಚಟುವಟಿಕೆಯಡಿ ಏಪ್ರಿಲ್ 30ರಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ಸ್ಥಳ, ನಗರ, ಜಿಲ್ಲೆ, ಪಟ್ಟಣ, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅತಿ ಕಡಿಮೆ ಮತದಾನ ಪ್ರಮಾಣ ದಾಖಲಾಗಿರುವ (Low voter turnout) ಮತಗಟ್ಟೆಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಈಶ್ವರ ಕಾಂದೂ ಹೇಳಿದ್ದಾರೆ.

ಇದನ್ನೂ ಓದಿ: Karnataka Election 2023: ಸಿದ್ದರಾಮಯ್ಯಗೆ ಸನ್‌ಸ್ಟ್ರೋಕ್‌; ಕಾರಲ್ಲಿ ನಿಂತು ಕೈಬೀಸುವಾಗಲೇ ಕುಸಿದುಬಿದ್ದರು

ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಇರುವ ಚಿತ್ರಕಲಾ ಶಿಕ್ಷಕರಿಂದ ಹೆಚ್ಚಿನ ಜನ ಸೇರುವ ದಿನ ಮತ್ತು ಜಾಗಗಳಲ್ಲಿ ಮತದಾನ ದಿನಾಂಕ, ಸಮಯ, ಮತದಾನ ಮಾಡಲು ತೆಗೆದುಕೊಂಡು ಹೋಗಬಹುದಾದ ದಾಖಲೆಗಳು ಹಾಗೂ ಮತದಾನ ಕೇಂದ್ರ ಮತ್ತು ಮತದಾನ ಮಾಡುವ ಬಗೆಗಿನ ವಿವಿಧ ಮಾಹಿತಿಗಳನ್ನು ತಿಳಿಸುವ ಚಿತ್ರಗಳನ್ನು ಬರೆಸಬೇಕು. ಆ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು” ಎಂದು ಈಶ್ವರ ಕಾಂದೂ ತಿಳಿಸಿದ್ದಾರೆ.

Exit mobile version