Site icon Vistara News

Karnataka Election: ಕಾರವಾರ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಸೈಲ್‌ ಆಸ್ತಿ ಐದು ವರ್ಷಗಳಲ್ಲಿ 9.81 ಕೋಟಿ ರೂ. ಇಳಿಕೆ

#image_title

ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ (Karnataka Election) ಆಗಿರುವ ಸತೀಶ್‌ ಸೈಲ್‌ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರು ತಮ್ಮ ಬಳಿ ಇರುವ ಆಸ್ತಿ ವಿವರ ಘೋಷಿಸಿಕೊಂಡಿದ್ದು, ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ 9.81 ಕೋಟಿ ರೂ. ಇಳಿಕೆಯಾಗಿರುವುದು ತಿಳಿದುಬಂದಿದೆ.

ಸತೀಶ್‌ ಸೈಲ್‌ ಅವರು ಈ ಬಾರಿ ನಾಮಪತ್ರ ಸಲ್ಲಿಸುವಾಗ ತಮ್ಮ ಕುಟುಂಬದ ಬಳಿ ಒಟ್ಟು 53.91 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಅವರು 2018ರಲ್ಲಿ 63.72 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: Karwar News: ಕಾರವಾರದಲ್ಲಿ ರಾಷ್ಟ್ರೀಯ ಮೆರಿಟೈಮ್‌ ದಿನಾಚರಣೆ; ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಈ ವರ್ಷ ಅವರ ಬಳಿ ಕಾರು, ಬಂಗಾರ, ಬ್ಯಾಂಕ್ ಡಿಪಾಸಿಟ್ ಸೇರಿ 29.23 ಕೋಟಿ ರೂ. ಚರಾಸ್ತಿಗಳು, 5.64 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಿವೆ. ಅವರ ಪತ್ನಿ ಕಲ್ಪನಾ ಬಳಿ 16.69 ಕೋಟಿ ರೂ. ಚರ ಹಾಗೂ 40.35 ಲಕ್ಷ ರೂ.ಸ್ಥಿರ ಆಸ್ತಿಗಳಿವೆ. ಮಗಳು ಸಾದ್ವಿ ಹೆಸರಲ್ಲಿ 40.72 ಲಕ್ಷ ರೂ. ಚರ ಆಸ್ತಿಗಳು, 1.41 ಲಕ್ಷ ರೂ. ಸ್ಥಿರ ಆಸ್ತಿಗಳಿವೆ.

ಇನ್ನೊಬ್ಬ ಮಗಳು ಸಾಚಿ ಬಳಿ 14.44 ಲಕ್ಷ ರೂ. ಚರಾಸ್ತಿಗಳಿವೆ. ಸೈಲ್ ಹೆಸರಲ್ಲಿ 1.29 ಕೋಟಿ ರೂ. ಹಾಗೂ ಪತ್ನಿಯ ಹೆಸರಲ್ಲಿ 1.52 ಕೋಟಿ ರೂ. ಸಾಲವಿದೆ. ಇನ್ನು 14.54 ಕೋಟಿ ರೂ. ವೈಯಕ್ತಿಕವಾಗಿ ಕೊಡುವುದು ಬಾಕಿ ಇದೆ. 2018ನೇ ಸಾಲಿನಲ್ಲಿ ಅವರ ಕುಟುಂಬದ ಹೆಸರಿನಲ್ಲಿ 23.79 ಕೋಟಿ ರೂ. ಸಾಲವಿತ್ತು. ಒಟ್ಟಾರೆ ಆಸ್ತಿ ಕಡಿಮೆಯಾಗಿದ್ದರೂ ಸಾಲದ ಹೊರೆಯೂ ಇಳಿದಿದೆ.

Exit mobile version