Site icon Vistara News

Karnataka Election : ಬಂಜಾರ ಬೆಂಬಲ ನನಗಿದೆ, ಮೀಸಲಾತಿ ತೆಗೆಯುವ ಮಾತೇ ಇಲ್ಲ ಎಂದ ಶಿವರಾಮ ಹೆಬ್ಬಾರ

#image_title

ಮುಂಡಗೋಡ: “ಇಡಿ ದೇಶದಲ್ಲಿ ಬಂಜಾರ ಸಮುದಾಯವಿದೆ. ಬಂಜಾರ ಸಮಾಜ ನನಗೆ ಸಾಕಷ್ಟು ಸಹಕಾರ ನೀಡಿದೆ” ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ (Karnataka Election) ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. “ಯಾವುದೇ ಸರ್ಕಾರ ಬರಲಿ ಬಂಜಾರ ಮತ್ತು ಭೋವಿ ಸಮಾಜಗಳನ್ನು ಎಸ್.ಸಿ. ಮೀಸಲಾತಿಯಿಂದ ತೆಗೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ರಾಷ್ಟ್ರಪತಿಗಳ ಅಂಕಿತವಿದೆ. ಕಳೆದ ಚುನಾವಣೆಯಲ್ಲಿ ತಾಲೂಕಿನಲ್ಲಿಯೇ ತಮ್ಯಾನಕೊಪ್ಪ ಅತಿ ಹೆಚ್ಚು ಮತಗಳನ್ನು ನೀಡಿದ ಬೂತ್ ಆಗಿದೆ. ಇದು ನನಗೆ ವೈಯಕ್ತಿಕವಾಗಿ ಬೆಂಬಲ ನೀಡಿರುವ ಬೂತ್. ಅವರಿಗೆ ಎಂದೂ ನಾನು ಅನ್ಯಾಯ ಮಾಡಿಲ್ಲ. ಅವರಿಗಾಗಿ ಯಾವ ತ್ಯಾಗಕ್ಕೂ ಸಿದ್ಧ. ಅವರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಈ ಭಾಗದಲ್ಲಿ ಶೇ.95ರಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಬೇಕು” ಎಂದರು.

ಇದನ್ನೂ ಓದಿ: Karnataka Election: ನನ್ನ ತಾಯಿಯನ್ನು ವಿಷ ಕನ್ಯೆ ಎಂದ ಮಿ. ಯತ್ನಾಳ್‌, ನಿಮ್ಮ ನಾಲಿಗೇನಾ.. ; ಡಿಕೆಶಿ ಆಕ್ರೋಶ
ಜಿ.ಪಂ.ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿದರು. ಈ ವೇಳೆ ಪ್ರದೀಪ ಚವಾಣ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಸಂತೋಷ ರಾಠೋಡ, ಸುರೇಶ ರಾಠೋಡ, ಲಕ್ಷ್ಮಣ ಮಾನು ರಾಠೋಡ, ರಾಮಚಂದ್ರ ರಾಠೋಡ, ಲಕ್ಷ್ಮಣ ಪವಾರ, ಸುನೀಲ ರಾಠೋಡ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Exit mobile version