ಯಲ್ಲಾಪುರ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ (MLC Election) ಕಾವು ಏರುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಬಿರುಸುಗೊಂಡಿದೆ.
ಶನಿವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮೊರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಿದರು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ತಮ್ಮ ಮತಗಳನ್ನು ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು.
ಶಿಕ್ಷಕರು ಮತ ಚಲಾಯಿಸುವಾಗ ತಮ್ಮ ಮತಗಳು ಅಸಿಂಧುವಾಗದಂತೆ ನೋಡಿಕೊಳ್ಳಬೇಕು. ಮತ ಚಲಾವಣೆಗೆ ನೀಡಿರುವ ಸೂಚನೆಗಳನ್ನು ಪಾಲಿಸಬೇಕು ಎಂದವರು ತಿಳಿಸಿದರು.
ಸಚಿವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಉಪಾಧ್ಯಕ್ಷ ಶ್ರಿನಿವಾಸ್ ಹೆಬ್ಬಾರ ಅವರನ್ನು ಬರಮಾಡಿಕೊಂಡರು. ಪ್ರಚಾರದ ನಂತರ ಸಚಿವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರು, ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ| MLC Election | ರಂಗೇರಿದೆ ಪಶ್ಚಿಮ ಶಿಕ್ಷಕರ ಕ್ಷೇತ್ರ: ಹೊರಟ್ಟಿ ಮೂಲಕ ಖಾತೆ ತೆರೆಯುವುದೆ ಬಿಜೆಪಿ?