ಕಾರವಾರ: ಕಾರವಾರ (Karwar News ) ನಗರದ ಸಂಚಾರಿ ಠಾಣೆಯ ಪೊಲೀಸರಿಂದ ಅಪರಾಧ ತಡೆ ಮಾಸಾಚಾರಣೆ ಅಂಗವಾಗಿ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಮತ್ತು ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಜಾಥಾಕ್ಕೆ ಕಾರವಾರ ವಿಭಾಗದ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಚಾಲನೆ ನೀಡಿದರು.
ರಸ್ತೆ ಅಪಘಾತ ಮುಕ್ತ ಭಾರತಕ್ಕಾಗಿ ಕೈ ಜೋಡಿಸಿ ಎನ್ನುವ ಶೀರ್ಷಿಕೆಯಡಿ ಜಾಗೃತಿ ಜಾಥಾ ನಡೆಯಿತು. ನಗರದ ಹೂವಿನ ಚೌಕ ವೃತ್ತದಿಂದ ಪ್ರಾರಂಭವಾದ ಜಾಥಾವು ಗ್ರೀನ್ ಸ್ಟ್ರೀಟ್, ಅಂಬೇಡ್ಕರ್ ವೃತ್ತ, ಪಿಕಳೆ ರಸ್ತೆ, ಕೋಡಿಭಾಗ ರಸ್ತೆಯ ಮೂಲಕ ಸಂಚರಿಸಿ ಗೀತಾಂಜಲಿ ವೃತ್ತದಲ್ಲಿ ಕೊನೆಗೊಂಡಿತು.
ನಗರದ ಬಾಲಮಂದಿರ ವಿದ್ಯಾಲಯದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ವಿವಿಧ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಜಾಥಾದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಸಹಿ ಸಂಗ್ರಹಿಸುವುದರ ಜೊತೆಗೆ ಧ್ವನಿವರ್ಧಕದಲ್ಲಿ ಸಂಚಾರ ನಿಯಮಗಳ ಬಗ್ಗೆ ತಿಳಿಸಲಾಯಿತು. ಕಾರವಾರ ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ ಬೋವಿ ಹಾಗೂ ಸಿಬ್ಬಂದಿ ಇದ್ದರು.
ಇದನ್ನೂ ಓದಿ | Avatar 2 | ಥಿಯೇಟರ್‌ಗೆ ಬರುವ ಮುಂಚೆಯೇ ಆನ್‌ಲೈನ್‌ನಲ್ಲಿ ಅವತಾರ್ 2 ಸಿನಿಮಾ ಸೋರಿಕೆ!