ಕಾರವಾರ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಬೀನಿಯಲ್ ಲೇಕ್ ಸಿಂಪೋಸಿಯಂ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಹೊನ್ನಾವರದ (Honnavar News) ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ಲೇಕ್ ಕಾರ್ಯಕ್ರಮವನ್ನು ಪ್ರತಿ 2 ವರ್ಷಕ್ಕೊಮ್ಮೆ ಹಮ್ಮಿಕೊಂಡು ಬರುತ್ತಿದ್ದು, ಪ್ರಸಕ್ತ 2022-23ನೇ ಸಾಲಿನ 13ನೇ ಬೀನಿಯಲ್ ಲೇಕ್ ಸಿಂಪೋಸಿಯಂ ರಾಷ್ಟ್ರಮಟ್ಟದ ಕಾರ್ಯಕ್ರಮವು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊದ್ಕೆಶಿರೂರು, ಕಡ್ನೀರು ಪ್ರೌಢಶಾಲೆಯ ರಚನಾ ಬಾಬು ದೇಶಭಂಡಾರಿ, ಪ್ರಜ್ಞಾ ದೀಪಕ ನಾಯ್ಕ ಹಾಗೂ ತೇಜಸ್ವಿನಿ ಶ್ರೀಧರ್ ನಾಯ್ಕ ಇವರು ತಯಾರಿಸಿದ “ಹಳ್ಳಿಯ ಆಹಾರ ಹಾಗೂ ಔಷಧ ಸಸ್ಯಗಳು” ಎಂಬ ವಿಷಯದ ಮೇಲೆ ಪೇಪರ್ ಪ್ರೆಸೆಂಟೇಷನ್ ಆಯ್ಕೆಯಾಗಿದೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನವನ್ನು ಧರ್ಮದ ಆಧಾರದಲ್ಲಿ ನೋಡುವುದು ಕನ್ನಡದ ಪರಂಪರೆಗೆ ಅವಮಾನ: ಮಹೇಶ್ ಜೋಶಿ
ಡಿ.28ರಿಂದ 30ರವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ತೆರಳಲಿರುವ ಮೂವರು ವಿದ್ಯಾರ್ಥಿನಿಯರು ಹಾಗೂ ಮಾರ್ಗದರ್ಶನ ಮಾಡಿದ ಶಾಲೆಯ ವಿಜ್ಞಾನ ಶಿಕ್ಷಕ ಪ್ರವೀಣ್ ಕುಮಾರ್ ಇವರಿಗೆ ಶಾಲಾ ಸಲಹಾ ಹಾಗೂ ಸಹಕಾರ ಸಮಿತಿಯ ಉಪಾಧ್ಯಕ್ಷ ಶ್ರೀಧರ ನಾಯ್ಕ, ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕ ವೃಂದದವರು ಹಾಗೂ ಪಾಲಕರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ | Bellary Politics | ಜೀವದ ಗೆಳೆಯರು ದೂರ ದೂರವಾಗಲು ಅಹಂ ಕಾರಣವಾಯಿತೇ?