ಹೊನ್ನಾವರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಮಾರ್ಚ್ 16ರಿಂದ 20ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-14 ಅನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಭಾಗವಾಗಿ ʼಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನʼ, ʼಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನʼ, ʼಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನʼ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ.16ರಂದು ಸಂಜೆ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಮೀನುಗಾರಿಕೆ ಹಾಗೂ ಬಂದರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವಮೊಗ್ಗದ ಲಕ್ಷ್ಮೀನಾರಾಯಣ ಕಾಶಿ ಅವರು ಸ್ವಾಗತ ಭಾಷಣ ಮಾಡಲಿದ್ದು, ಖ್ಯಾತ ಅಂಕಣಕಾರರು ಹಾಗೂ ಕಲಾಚಿಂತಕರಾದ ನಾರಾಯಣ ಯಾಜಿ ಸಾಲೇಬೈಲು ಅವರು ಆಶಯ ನುಡಿಗಳನ್ನಾಡಿದ್ದಾರೆ.
ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2022 ಪ್ರದಾನ
ಬೆಂಗಳೂರಿನ ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2022 ಪ್ರದಾನ ಮಾಡಲಾಗುತ್ತದೆ. ಈ ವೇಳೆ ಅರ್ಥದಾರಿ, ಕಲಾಚಿಂತಕ ದಿವಾಕರ ಹೆಗಡೆ ಕೆರೆಹೊಂಡ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕೇರಳದ ಫೋಕ್ ಲ್ಯಾಂಡ್ ಅಧ್ಯಕ್ಷ ಡಾ. ಜಯರಾಜನ್, ಶಿರಸಿಯ ಯಕ್ಷಗಾನ ಕಲಾ ಪೋಷಕರು, ಉದ್ಯಮಿ ಉಪೇಂದ್ರ ಪೈ, ಮೈಸೂರಿನ ರಾಜಶೇಖರ ಆಸ್ಪತ್ರೆ ಹಿರಿಯ ಸರ್ಜನ್, ಬರಹಗಾರ ಡಾ. ಸಂಜಯ. ಎಚ್.ಆರ್. ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Art Exhibition: ಖ್ಯಾತ ಕಲಾವಿದ ಸಿ.ಎನ್. ಕರುಣಾಕರನ್ ಸ್ಮರಣಾರ್ಥ ಮಾ.31 ರವರೆಗೆ ‘ಚಿತ್ರಕೂಟಂ’ ಪ್ರದರ್ಶನ
ಸಂಜೆ 4.30ರಿಂದ ಸುಕನ್ಯಾ ರಾಮಗೋಪಾಲ ತಂಡದಿಂದ ʼಸ್ತ್ರೀ ತಾಳ ಘಟ ತರಂಗʼ, ಕೇರಳದ ಫೋಕ್ ಲ್ಯಾಂಡ್ ತಂಡದಿಂದ ಕೇರಳ ನಟನಂ ಮತ್ತು ಮೋಹಿನಿ ಆಟ್ಟಂ ನೃತ್ಯಗಳು ಹಾಗೂ ಬೆಂಗಳೂರಿನ ಲಿಂಗಯ್ಯ ಮತ್ತು ತಂಡದಿಂದ ಬೀಸು ಕಂಸಾಳೆ ನೃತ್ಯ ಪ್ರದರ್ಶನ ನಡೆಯಲಿದೆ.
ಮಾ. 17ರಂದು ಸಂಜೆ 4.30ಕ್ಕೆ ʼಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ – 2022 ಪ್ರದಾನ ನಡೆಯಲಿದೆ. ಮಂಗಳೂರಿನ ಕಲಾವಿದ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದ, ಚಿಂತಕ ಹಾಗೂ ಬರಹಗಾರ ಎಂ. ಎಲ್. ಸಾಮಗ ಮಲ್ಪೆ ಅವರನ್ನು ಸನ್ಮಾನಿಸಲಾಗುತ್ತದೆ. ಉಡುಪಿಯ ಉಪನ್ಯಾಸಕ ಹಿಂಡ್ಮನೆ ನಾರಾಯಣ ಹೆಗಡೆ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ, ಉದ್ಯಮಿಗಳು, ಕಲಾಪೋಷಕ ಮಾರಣಕಟ್ಟೆಯ ಕೃಷ್ಣಮೂರ್ತಿ ಮಂಜರು, ಉದ್ಯಮಿಗಳು ಹಾಗೂ ಕಲಾಪೋಷಕ ಕವಲಕ್ಕಿಯ ವೆಂಕಟರಮಣ ಹೆಗಡೆ, ಮೈಸೂರಿನ ಅಪೋಲೋ ಆಸ್ಪತ್ರೆ ಹಿರಿಯ ಸರ್ಜನ್ ಡಾ. ನಾರಾಯಣ ಹೆಗಡೆ, ಕೆಳಗಿನೂರು ವ್ಯ.ಸೇ.ಸ.ಸಂ. ಅಧ್ಯಕ್ಷ ಮುಗಳಿಯ ಶ್ರೀ ಗಣಪಯ್ಯ ಗೌಡರು ಭಾಗವಹಿಸಲಿದ್ದಾರೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ
ಸನ್ಮಾನಿತರು: ಐರೋಡಿ ಗೋವಿಂದಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರು
ಶ್ರೀ ಕಂದಾವರ ರಘುರಾಮ ಶೆಟ್ಟಿ, ಹಿರಿಯ ಪ್ರಸಂಗಕರ್ತರು, ಬರಹಗಾರರು
ಡಾ. ಚಂದ್ರಶೇಖರ ದಾಮ್ಲ, ಶಿಕ್ಷಣ ತಜ್ಞರು, ಬರಹಗಾರರು ಹಾಗೂ ಅಧ್ಯಕ್ಷರು, ತೆಂಕುತಿಟ್ಟು ಹಿತರಕ್ಷಣಾ ವೇದಿಕೆ
ಸಂಜೆ 6.30ರಿಂದ ಬೆಂಗಳೂರಿನ ಧಾತು ಗೊಂಬೆಯಾಟ ತಂಡದಿಂದ ಅನುಪಮಾ ಹೊಸಕೆರೆ ನಿರ್ದೇಶನದಲ್ಲಿ “ಅಷ್ಟಾವಕ್ರ” ಗೊಂಬೆಯಾಟ ಪ್ರದರ್ಶನ ನಡೆಯಲಿದೆ. ನಂತರ ಬೆಂಗಳೂರಿನ ಕಲಾಗಂಗೋತ್ರಿ ತಂಟದಿಂದ ʼಮುಖ್ಯಮಂತ್ರಿʼ ನಾಟಕ ಪ್ರದರ್ಶನವಿರಲಿದೆ. ಪ್ರಧಾನ ಪಾತ್ರ-ಡಾ. ಮುಖ್ಯಮಂತ್ರಿ ಚಂದ್ರು, ನಿರ್ದೇಶನ- ಡಾ. ಬಿ. ವಿ ರಾಜಾರಾಂ, ಕನ್ನಡ ರೂಪಾಂತರ : ಟಿ.ಎಸ್ ಲೋಹಿತಾಶ್ವ.
ಇದನ್ನೂ ಓದಿ | Solar Energy Mela: ಬೆಂಗಳೂರಿನ ಜಿಕೆವಿಕೆಯಲ್ಲಿ ಮಾ. 9ರಂದು ‘ರೈತ ಸೌರ ಶಕ್ತಿ ಮೇಳ’; ಏನೇನಿರಲಿದೆ?