Site icon Vistara News

Lok Sabha Election 2024: ಲೋಕಸಭಾ ಚುನಾವಣೆಗೆ ಯಲ್ಲಾಪುರದಲ್ಲಿ ಸಕಲ ಸಿದ್ಧತೆ: ಅಜ್ಜಪ್ಪ ಸೊಗಲದ

All preparations in Yallapur assembly constituency for Lok Sabha election says Ajjappa Sogalada

ಯಲ್ಲಾಪುರ: ಲೋಕಸಭಾ ಚುನಾವಣೆಯ (Lok Sabha Election 2024) 2ನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ತಿಳಿಸಿದರು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 233 ಮತಗಟ್ಟೆಗಳಿದ್ದು, 93961 ಪುರುಷ ಹಾಗೂ 92784 ಮಹಿಳೆಯರು ಸೇರಿ ಒಟ್ಟು 186745 ಮತದಾರಿದ್ದಾರೆ. ಈ ಪೈಕಿ 5065 ಯುವ ಮತದಾರರು ಮೇ 7ರಂದು ಮಂಗಳವಾರ ಮತ ಚಲಾಯಿಸಲಿದ್ದಾರೆ.

ಚುನಾವಣಾ ಕರ್ತವ್ಯಕ್ಕಾಗಿ 932 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 233 ಗ್ರೂಪ್‌ ಡಿ ನೌಕರರು ಹಾಗೂ 414 ಪೊಲೀಸ್‌ ಸಿಬ್ಬಂದಿಗಳು ಸೇರಿದಂತೆ 1579 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಸಿಬ್ಬಂದಿಗಳಿಗಾಗಿ 37 ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಸೇರಿದಂತೆ ಒಟ್ಟು 69 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Kodagu News: ಸೋಮವಾರಪೇಟೆಯಲ್ಲಿ ಮರ ಬಿದ್ದು ಕಾರ್ಮಿಕ ಸಾವು

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಮಸ್ಟರಿಂಗ್‌ ಹಾಗೂ ಡಿ-ಮಸ್ಟರಿಂಗ್‌ ಕೇಂದ್ರವನ್ನು ಮಾಡಲಾಗಿದ್ದು, ಸೋಮವಾರ ಮಧ್ಯಾಹ್ನ ಸಿಬ್ಬಂದಿಗಳು, ಇವಿಎಂ ಮತಯಂತ್ರದೊಂದಿಗೆ ತಮಗೆ ನಿಯೋಜಿಸಲಾದ ಮತಗಟ್ಟೆಯ ಕಡೆಗೆ ತೆರಳಿದರು.

Lok Sabha Election 2024: ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ ದಂಪತಿ

ಗಂಗಾವತಿ: ಲೋಕಸಭಾ ಚುನಾವಣೆ-2024 ಹಿನ್ನೆಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಮತದಾನದ ಮಹತ್ವ ಅರಿತಿರುವ ದಂಪತಿ, ದುಬೈನಿಂದ ಗಂಗಾವತಿಗೆ ಮತದಾನಕ್ಕಾಗಿ ಆಗಮಿಸಿದ್ದಾರೆ.

ನಗರದ ಎಪಿಎಂಸಿ ಸಮೀಪದ ನಿವಾಸಿಯಾಗಿರುವ ಉದ್ಯಮಿ ಆರ್ಹಾಳ ಶರಣಪ್ಪ ಅವರ ಪುತ್ರಿ ಐಶ್ವರ್ಯ ಗೌಡರ್ ಮತ್ತು ಅಳಿಯ ಕಿರಣ್ ಪಾಟೀಲ್ ದಂಪತಿ ದುಬೈನಲ್ಲಿ ನೆಲೆಸಿದ್ದಾರೆ, ಲೋಕಸಭಾ ಚುನಾವಣೆಗೆ ಮತದಾನ ಮಾಡುವ ಉದ್ದೇಶಕ್ಕಾಗಿಯೇ ದುಬೈನಿಂದ ಗಂಗಾವತಿಗೆ ಆಗಮಿಸಿದ್ದಾರೆ.

ಕಿರಣ್ ಪಾಟೀಲ್ ಕೂಡ ಗಂಗಾವತಿಯ ಕುವೆಂಪು ಬಡಾವಣೆಯ ನಿವಾಸಿಯಾಗಿದ್ದು, ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ ನೆಲೆಸಿದ್ದಾರೆ. ಕಳೆದ ಡಿಸಂಬರ್‌ನಲ್ಲಿ ಐಶ್ವರ್ಯ ಮತ್ತು ಕಿರಣ್ ಪಾಟೀಲ್‌ಗೆ ವಿವಾಹವಾಗಿದ್ದು, ಇಬ್ಬರೂ ದುಬೈನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಲ್ಲಿನ ಎಪಿಎಂಸಿ ಮುಂಭಾಗದ ಟಿಎಪಿಸಿಎಂಎಸ್‌ನ ಮತಗಟ್ಟೆಯಲ್ಲಿ ಐಶ್ವರ್ಯ ಮತದಾನ ಮಾಡಲಿದ್ದು, ಬೆಂಡರವಾಡಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಕಿರಣ್ ಪಾಟೀಲ್ ಮತದಾನ ಮಾಡಲಿದ್ದಾರೆ. ಮತದಾನದ ಬಳಿಕ ಈ ದಂಪತಿ ಮತ್ತೆ ದುಬೈಗೆ ತೆರಳಲಿದ್ದಾರೆ.

ಇದನ್ನೂ ಓದಿ: Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

`ಭಾರತ ಬದಲಾಗುತ್ತಿದ್ದು, ಅಭಿವೃದ್ಧಿಗೆ ವೇಗ ಸಿಕ್ಕಿದೆ. ವಿದೇಶಗಳಲ್ಲೂ ಭಾರತದ ಬಗ್ಗೆ ಗೌರವ ಭಾವ ಮೂಡಿದೆ. ಹೀಗಾಗಿ ಭಾರತದ ಪ್ರಜೆಗಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತಿದೆ. ಭಾರತದ ಪೌರರಾಗಿ ಮತದಾನ ಮಾಡಲು ಬಂದಿದ್ದಾಗಿ ಐಶ್ವರ್ಯ ಮತ್ತು ಕಿರಣ್ ದಂಪತಿ ತಿಳಿಸಿದ್ದಾರೆ.

Exit mobile version