Site icon Vistara News

Lok Sabha Election 2024: ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಿ: ಕಾಗೇರಿ ಮನವಿ

Uttara Kannada Lok Sabha Constituency BJP candidate Vishweshwara Hegade Kageri election campaign in Honnavara

ಹೊನ್ನಾವರ: ರಾಮ ಮಂದಿರ (Ram Mandir) ನಿರ್ಮಾಣ ಮಾಡಿ ನೂರಾರು ವರ್ಷದ ಕನಸನ್ನು ನನಸು ಮಾಡಿದ ಮೋದಿಜಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಪ್ರಭು ಶ್ರೀರಾಮನನ್ನು ನೆನೆದು ಕಮಲದ ಹೂವಿಗೆ ಮತ ಹಾಕಬೇಕು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ (Lok Sabha Election 2024) ಮಾಡಿದರು.

ಹೊನ್ನಾವರ ತಾಲೂಕಿನ ಮಂಕಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಯೋಧ್ಯೆಯ ರಾಮ ಮಂದಿರವನ್ನು ನಿರ್ಮಿಸಿ 500 ವರ್ಷಗಳ ಕನಸು ನನಸಾಗಿದೆ. ಮೋದಿಜಿ, ಯೋಗಿಜಿಯಿಂದ ಇದು ಸಾಧ್ಯವಾಗಿದೆ. ಅಂತಹ ಪ್ರಧಾನಿಯನ್ನು ಮತ್ತೊಮ್ಮೆ ಗೆಲ್ಲಿಸಬೇಕು. ಅದಕ್ಕೆ ಪೂರಕವೆಂಬಂತೆ ಇಲ್ಲಿಯೂ ಅತಿ ಹೆಚ್ಚಿನ ಮತಗಳಿಂದ ನನ್ನನ್ನು ಗೆಲ್ಲಿಸುತ್ತೀರಿ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಬೂತ್ ಮಟ್ಟದ, ಶಕ್ತಿ ಕೇಂದ್ರ, ಮಹಾ ಶಕ್ತಿ ಎಲ್ಲಾ ಪ್ರಮುಖರು ರಾಮನಿಗಾಗಿ, ಮೋದಿಗಾಗಿ ಪೂರ್ಣ ಶ್ರಮ ವಹಿಸಿ, ಕಮಲದ ಹೂವಿನ ಗೆಲುವಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

ಈ ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಕೇವಲ ಹಗರಣಗಳೇ ನಡೆದಿದ್ದವು. ಆದರೆ ಈಗ 10 ವರ್ಷದ ಆಡಳಿತ ಅವಧಿಯಲ್ಲಿ ಯಾವ ಹಗರಣವೂ ಇಲ್ಲ. ಪಾರದರ್ಶಕ ಆಡಳಿತ ನೀಡಿ ಭ್ರಷ್ಟಾಚಾರ ಮುಕ್ತ ಮಾಡಲಾಗಿದೆ. ಮೋದಿಯವರ ಆಡಳಿತದಲ್ಲಿ ಅಭಿವೃದ್ಧಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದ ಕಾಗೇರಿ, ರಾಜ್ಯದ ಗ್ಯಾರಂಟಿ ಯೋಜನೆ ಸಮರ್ಪಕ ವಿತರಣೆ ಆಗುತ್ತಿಲ್ಲ. ಮೋದಿಯವರ ಗ್ಯಾರಂಟಿ ಎದುರು ರಾಜ್ಯದ ಗ್ಯಾರಂಟಿ ಠುಸ್ ಆಗಲಿದೆ ಎಂದರು.

ಜೆಡಿಎಸ್, ಬಿಜೆಪಿ ಮೈತ್ರಿ ಶಕ್ತಿಯಿಂದ ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೊನ್ನಾವರದ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪೇ ಗೌಡ ಅವರನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಮಾಡಿ ಸಹಕಾರ ಕೇಳಿದರು. ಮೈತ್ರಿ ಮಾತುಕತೆಯಂತೆ ಬಿಜೆಪಿಯ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪೇ ಗೌಡ ತಿಳಿಸಿದರು.

ಇದನ್ನೂ ಓದಿ: Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

ಚುನಾವಣಾ ಪ್ರಚಾರದ ಭರಾಟೆಯ ನಡುವೆಯೇ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಡಗುಂಜಿ ಮಹಾಗಣಪತಿ ದೇವಸ್ಥಾನ, ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನ, ವೀರ ವೆಂಕಟರಮಣ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದುಕೊಂಡರು. ರಾಮ ನವಮಿಯ ನಿಮಿತ್ತ ರಾಮತೀರ್ಥಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

Exit mobile version