Site icon Vistara News

Lok Sabha Election 2024: ಉ.ಕ. ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಮೇ 4 ರಂದು ಯಕ್ಷಗಾನ

Yakshagana performance for voting awareness in Uttara Kannada district on May 4

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 (Lok Sabha Election 2024) ಹಿನ್ನೆಲೆಯಲ್ಲಿ ಮತದಾನ ಜಾಗೃತಿ ನಿಮಿತ್ತ ಪ್ರಖ್ಯಾತ ಯಕ್ಷಗಾನ ಕಲಾವಿದರು ಹಾಗೂ ಜಿಲ್ಲಾ ಸ್ವೀಪ್ ರಾಯಭಾರಿ ಶಂಕರ ಹೆಗಡೆ ನೀಲ್ಕೋಡು ತಂಡದವರಿಂದ “ಸ್ವೀಪ್ ಯಕ್ಷಗಾನ ಪ್ರದರ್ಶನ” ಕಾರ್ಯಕ್ರಮವನ್ನು ಮೇ 4 ರಂದು ಸಂಜೆ 5:30ಕ್ಕೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ: Virat kohli : ಕೊಹ್ಲಿಯ ಸ್ಟ್ರೈಕ್​ರೇಟ್​ ಕುರಿತ ಪ್ರಶ್ನೆಗೆ ರೋಹಿತ್​, ಅಗರ್ಕರ್​ ಪ್ರತಿಕ್ರಿಯೆ ಹೀಗಿತ್ತು…

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ “ಸ್ವೀಪ್ ಯಕ್ಷಗಾನ ಪ್ರದರ್ಶನ” ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಮುರೂರು, ಪರಮೇಶ್ವರ ಬಂಡಾರಿ ಮೃದಂಗ ಮತ್ತು ಗಣೇಶ ಕನಕನಳ್ಳಿ ಚಂಡೆ ಭಾರಿಸಲಿದ್ದಾರೆ. ಮುಮ್ಮೇಳದಲ್ಲಿ ಪ್ರಖ್ಯಾತ ಕಲಾವಿದರಾದ ಶಂಕರ ಹೆಗಡೆ ನೀಲ್ಕೋಡ, ನಾಗರಾಜ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಿ ಸೇರಿದಂತೆ ಇನ್ನಿತರೆ ಕಲಾವಿದರು ಪ್ರೇಕ್ಷಕರನ್ನು ರಂಜಿಸುವ ಜತೆಗೆ ಕಡ್ಡಾಯ ಮತದಾನದ ಕುರಿತು ಸಂದೇಶ ನೀಡಲಿದ್ದಾರೆ.‌

ಇದನ್ನೂ ಓದಿ: Karnataka legislative council: ವಿಧಾನ ಪರಿಷತ್‌ನ 6 ಕ್ಷೇತ್ರಗಳಿಗೆ ಜೂ.3 ಎಲೆಕ್ಷನ್;‌ ಜೂ. 6ಕ್ಕೆ ಫಲಿತಾಂಶ

ಕಾರ್ಯಕ್ರಮಕ್ಕೆ ಕಲಾ ಆಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version