ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿ ಮಡಿಯ (Manki Madi School) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜನವರಿ 7ರಂದು ಸಂಜೆ 4.30ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿದ್ದಾರೆ. ಸ್ಮಾರ್ಟ್ ಕ್ಲಾಸ್ ಅನ್ನು ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸಲಿದ್ದು, ಸಭೆಯ ಅಧ್ಯಕ್ಷತೆಯನ್ನು ಶಾಸಕ ಸುನೀಲ ನಾಯ್ಕ ವಹಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಡಿ.ಡಿ.ಪಿ.ಐ ಈಶ್ವರ ನಾಯ್ಕ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಮಟಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕ (ಅಭಿವೃದ್ಧಿ) ಹಾಗೂ ಪ್ರಾಚಾರ್ಯ ಎನ್.ಜಿ. ನಾಯಕ, ತಹಸೀಲ್ದಾರ್ ನಾಗರಾಜ ನಾಯ್ಕಡ್, ತಾಲೂಕು ಪಂಚಾಯಿತಿ ಇ.ಒ ಸುರೇಶ ಜಿ. ನಾಯ್ಕ, ಬಿ.ಇ.ಒ ಜಿ.ಎಸ್. ನಾಯ್ಕ, ಬಿ.ಆರ್.ಸಿ. ಸಮನ್ವಯಾಧಿಕಾರಿ ಎಸ್.ಎಮ್. ಹೆಗಡೆ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೃಷ್ಣಾನಂದ. ಕೆ ಮತ್ತಿತರರು ಭಾಗವಹಿಸಲಿದ್ದಾರೆ.
ಮಂಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ ಭಂಡಾರಕರ್, ರೋಟರಿ ಕ್ಲಬ್ ಅಧ್ಯಕ್ಷ ಮಹೇಶ್ ಕಲ್ಯಾಣಪುರ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ. ವರ್ಗಿಸ್, ಮಂಕಿ ಮಡಿ ಫಾತಿಮಾ ಚರ್ಚ್‌ನ ಫಾದರ್ ಲಾರೆನ್ಸ್ ಡಿಸಿಲ್ವಾ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಗಾಂವಕರ್, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಸುರೇಶ ಬಿ. ಖಾರ್ವಿ, ಕ.ರಾ.ಸ.ನೌ.ಸಂಘದ ತಾಲೂಕು ಅಧ್ಯಕ್ಷ ಆರ್. ಟಿ. ನಾಯ್ಕ, ಪ್ರಾ.ಶಾ.ಶಿ.ಸಂಘದ ತಾಲೂಕು ಅಧ್ಯಕ್ಷ ಎಮ್. ಜಿ. ನಾಯ್ಕ, ಪ್ರಾ.ಶಾ.ಶಿ.ಸಂಘದ ಗೌರವಾಧ್ಯಕ್ಷ ಸುಧೀಶ ಎಸ್. ನಾಯ್ಕ, ಹೋಟೆಲ್ ಉದ್ಯಮಿಗಳಾದ ಮೋಹನ ರಾಮ ನಾಯ್ಕ, ಆನಂದ ಗಣಪಯ್ಯ ನಾಯ್ಕ, ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರ ವಿನೋದ ಜಟ್ಟಪ್ಪ ನಾಯ್ಕ, ಹೋಟೆಲ್ ಉದ್ಯಮಿ ಆನಂದ ಗಣಪ ನಾಯಕ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಮುಂಬೈನ ರಾಜೇಶ ಎಂ. ಚಿಕ್ಕರಮನೆ, ಮಂಕಿ ಮಡಿಯ ಶಿವಶಂಕರ ಎಂ. ಚಿಕ್ಕರಮನೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹೇಮಂತ ಜಿ ಭಟ್ಟ ಮತ್ತು ಮುಖ್ಯೋಪಾಧ್ಯಾಯ ಉದಯ ಆರ್ ನಾಯ್ಕ್ ಅವರು ಕೋರಿದ್ದಾರೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಿಂದ ಸಾಸ್ಕೃತಿಕ ಕಾರ್ಯಕ್ರಮ, ಶಿವಮೊಗ್ಗದ ಡಾ. ನಾಗರಾಜ್ ತೋಂಬ್ರಿ ಜೋಗಿ ಕಲಾತಂಡದಿಂದ ಜಾನಪದ ಕಾರ್ಯಕ್ರಮ, ಸಂಪೆ ರಾಜು ಸಿರ್ಸಿ ಅವರಿಂದ ಹಾಸ್ಯಲೋಕ, ಶ್ರೀರಾಮ ಜಾದೂಗಾರ್ ಅವರಿಂದ ವಿಸ್ಮಯ ಜಾದು ಮಾಯಾಲೋಕ, ಕಲರ್ಸ್ ಕನ್ನಡ ಖ್ಯಾತಿಯ ಗೀತಾ ಬೈಂದೂರ್ ಅವರಿಂದ ಗಾಯನ, ಹೊನ್ನಾವರದ ಓಶಿಯನ್ ಹಾರ್ಟ್ ಬ್ರೇಕರ್ಸ್ ಡ್ಯಾನ್ಸ್ ಗ್ರೂಪ್‌ನಿಂದ ಡ್ಯಾನ್ಸ್ ಧಮಾಕಾ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ | Soraba News | ಹಾಲಗಳಲೆ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ