Site icon Vistara News

May Flower: ಶಿರಸಿ ರಸ್ತೆಯಲ್ಲೀಗ ಮೇ ಫ್ಲವರ್‌ ಶೋ; ಕಣ್ಮನ ಸೆಳೆಯುತ್ತಿವೆ ಪ್ರಕೃತಿಯ ಈ ಸೊಬಗು!

may flower in sirsi

ಭಾಸ್ಕರ್ ಆರ್. ಗೆಂಡ್ಲ, ಶಿರಸಿ

ಸುಡುವ ಬೇಸಿಗೆ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಮೋಡಗಳು. ಆಗಾಗ ಧೋ ಎಂದು ಸುರಿಯುವ ಮಳೆ, ಇವೆಲ್ಲವುಗಳಿಗೆ ಹೊಂದಿಕೊಂಡಂತೆ ರಸ್ತೆ ಪಕ್ಕದಲ್ಲೇ ಕಣ್ಣಿಗೆ ಮುದ ನೀಡುವ ಕೆಂಪನೆಯ ಹೂವುಗಳ ನೋಡುವುದೇ ಒಂದು ಚೆಂದ. ಇದುವೇ ಮೇ ಫ್ಲವರ್ (May Flower) ಕಮಾಲ್!


ದೂರ ದೂರಕ್ಕೂ ಕಣ್ಸೆಳೆಯುವ, ಹತ್ತಿರ ಬಂದರೆ ಆಹ್ಲಾದ ನೀಡುವ, ಆಸರೆ ಯಾಚಿಸಿದರೆ ಕೂಲ್ ಕೂಲ್ ಅನುಭವ ನೀಡುವ ಅಪೂರ್ವ ಪುಷ್ಪವೃಕ್ಷ ಇದಾಗಿದೆ. ಬೇಸಿಗೆಯ ಬಿಸಿಲಿನ ಬೇಗೆಗೆ ಬೆಂದಿರುವ ಮಲೆನಾಡು ಶಿರಸಿ (Sirsi News) ಭಾಗದ ಜನತೆಗೆ ಈ ಮೇ ಫ್ಲವರ್ ಖುಷಿ ಕೊಡುತ್ತಿದೆ. ರಸ್ತೆ ಮೇಲಲ್ಲದೆ, ರಸ್ತೆ ಕೆಳಗೂ ಸಹ ಕೆಂಪಿನ ಸೊಬಗು ಕಾಣಬಹುದಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಗೆದ್ದ ಸಂಭ್ರಮಾಚರಣೆ; ಶಿರಸಿ ಮಾರಿಕಾಂಬಾ ದೇಗುಲದ ಮುಂಭಾಗದಲ್ಲಿ ಮುಸ್ಲಿಂ ಧ್ವಜ ಹಾರಾಟ

ಮೇ ಫ್ಲವರ್‌ ಸೊಬಗು

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಚ್ಚ ಹಸಿರಿನಿಂದ ಕೂಡಿರುವ ಪರಿಸರದ ಮಧ್ಯೆ ಕೆಂಪು ಹೂಗಳು ಕಂಗೊಳಿಸುತ್ತಿವೆ. ನನ್ನನ್ನೇ ನೋಡಿ… ನನ್ನನ್ನೇ ನೋಡಿ ಎಂದು ಕೈ ಬೀಸಿ ಕರೆಯುತ್ತಿರುವಂತೆ ಕಾಣುತ್ತಿದೆ. ಕೆಂಪು, ಹಳದಿ, ಕೇಸರಿ ಬಣ್ಣಗಳ ಮಿಶ್ರಿತವಾದ ಈ ಹೂವುಗಳನ್ನು ನೋಡುವುದೇ ಒಂದು ಸೊಬಗಾಗಿದೆ.

ಮೇ ತಿಂಗಳಲ್ಲೇ ಮೂಡುವ ಈ ಹೂವುಗಳು ವಿಶಿಷ್ಟವಾಗಿ ಕಂಡುಬರುತ್ತವೆ. ಬೇಸಿಗೆ ಸಮಯದಲ್ಲಿ ಮಾತ್ರವೇ ಬಿಡುವ ಈ ಹೂವಿಗೆ ಮೇ ಫ್ಲವರ್ಸ್ ಎಂದೇ ಕರೆಯಲಾಗುತ್ತದೆ. ಶಿರಸಿ-ಬನವಾಸಿ ಮಾರ್ಗದ ರಸ್ತೆ ಬದಿಯಲ್ಲಿ 200ಕ್ಕೂ ಹೆಚ್ಚು ಮೇ ಫ್ಲವರ್ಸ್ ಗಿಡಗಳು ದಾರಿ ಹೋಕರನ್ನು ಆಕರ್ಷಿಸುತ್ತಿವೆ.

ಶಿರಸಿ ರಸ್ತೆಯಲ್ಲಿ ಕಂಗೊಳಿಸುತ್ತಿರುವ ಮೇ ಫ್ಲವರ್‌

ಇದನ್ನೂ ಓದಿ: Sirsi Election Results: ಶಿರಸಿಯಲ್ಲಿ ಕಾಗೇರಿ ಗೆಲುವಿನ ಓಟಕ್ಕೆ ಬಿತ್ತು ಬ್ರೇಕ್‌; ಗೆದ್ದು ಬೀಗಿದ ಭೀಮಣ್ಣ

ಬೇಸಿಗೆಯಲ್ಲಿ ಮೇ ಫ್ಲವರ್ಸ್ಜನತೆಯನ್ನು ಆಕರ್ಷಿಸುತ್ತವೆ. ಮೋಹಗೊಳಿಸುತ್ತಿವೆ. ಆದರೆ, ಇವು ನಾರಿಯ ಮುಡಿಗೇರುವುದಿಲ್ಲ. ದೇವರ ಪೂಜೆಗೂ ಬಳಕೆ ಆಗುವುದಿಲ್ಲ. ಆದರೆ, ಮನಸ್ಸಿಗೆ ಪ್ರಫುಲ್ಲತೆಯನ್ನು ತಂದುಕೊಡುತ್ತದೆ. ಹಾಗಂತ ಇವುಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ರಸ್ತೆ ಅಂಚಿನಲ್ಲೇ ಹೆಚ್ಚಾಗಿ ಕಾಣ ಸಿಗುವ ಈ ಗಿಡಗಳನ್ನು ರಸ್ತೆ ಅಗಲೀಕರಣದ ಹೆಸರಲ್ಲಿ ಕತ್ತರಿಸಲಾಗುತ್ತಿದೆ. ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಶಿರಸಿಯಲ್ಲಿ ಕಣ್ಣು ಸೆಳೆಯುತ್ತಿರುವ ಮೇ ಫ್ಲವರ್‌

ಉಷ್ಣ ವಲಯದಲ್ಲಿ ಬೆಳೆಯುವ ಹೂವುಗಳಿವು

ಬೀನ್‍ ತಳಿಯ ಪ್ಯಾಬಾಸೇಯ ಹಾಗೂ ಸೀಸಲ್ಪಿನಿಯೊಡೈ ಉಪ ಕುಟುಂಬಕ್ಕೆ ಮೇ ಫ್ಲವರ್ ಸೇರುತ್ತದೆ. ಇದರ ವೈಜ್ಞಾನಿಕ ಹೆಸರು ಡೆಲೋನಿಕ್ಸ್‍ ರೇಜಿಯಾ ಎಂಬುದಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ ಹಲವು ಕಡೆ ಬೆಳೆಯಲ್ಪಡುತ್ತದೆ. ಹೆಚ್ಚಾಗಿ ಉಷ್ಣ ವಲಯದ ಭಾಗಗಳು ಇದಕ್ಕೆ ಪೂರಕ ವಾತಾವರಣವಾಗಿದ್ದು, ಅಲ್ಲಿಯೇ ಹೆಚ್ಚು ಕಂಡು ಬರುತ್ತದೆ.

Exit mobile version