Site icon Vistara News

Independence Day | ದೇಶದ ಪ್ರಗತಿಗೆ ಪ್ರತಿಯೊಬ್ಬರ ಶ್ರಮ ಅಗತ್ಯ: ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ

Independence Day

ಶಿರಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ (Independence Day) ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ರಾಷ್ಟ್ರ ಪ್ರೇಮ ಹಾಗೂ ರಾಷ್ಟ್ರ ಗೌರವ ಹೆಚ್ಚಿಸಿಕೊಳ್ಳಬೇಕು. ದೇಶದ ಪ್ರಗತಿಗಾಗಿ ಪ್ರತಿಯೊಬ್ಬರೂ ಕೈಲಾದ ಸೇವೆ ಮಾಡಬೇಕು. ಪ್ರತಿಯೊಬ್ಬ ಪ್ರಜೆಗೂ ಅವರದೇ ಆದ ಗೌರವ ಇದ್ದು, ದೇಶದ ಘನತೆ ಗೌರವ ಕಾಪಾಡುವ ಕೆಲಸವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ (Independence Day) ಮಾತನಾಡಿದ ಅವರು, ದೇಶ ನಮಗೆ ಏನು ಕೊಟ್ಟಿದೆ ಎಂದು ಕೇಳುವ ಬದಲು ದೇಶಕ್ಕೆ ನಾವೇನು ಕೊಡುಗೆ ಕೊಡುತ್ತೇವೆ ಎನ್ನುವುದು ಮುಖ್ಯ. ಹಾಗಾಗಿ ನಾವೆಲ್ಲರೂ ಈ ದೇಶದ ಸತ್ಪ್ರಜೆಗಳಾಗಿ ಬಾಳೋಣ ಎಂದು ಅವರು ಕರೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ದ್ವಜಾರೋಹಣ ನೆರವೇರಿಸಿ, ಗಣೇಶ ಭಟ್‌ ಮತ್ತು ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಹರ್ಷಿತಾ ಭಟ್ಟ ಹಾಗೂ ಸಂಗಡಿಗರು ವಂದೇಮಾತರಂ ಹಾಗೂ ಇನ್ನಿತರ ದೇಶಭಕ್ತಿ ಗೀತೆಗಳನ್ನು ಹಾಡಿದರು. ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಮುಕ್ತಾ ಶಂಕರ್ ವಂದನಾರ್ಪಣೆ ಮಾಡಿದರು.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾರತೀಯ ನೌಕಾ ಸೇವೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅರವಿಂದ ಶಿಗ್ಗಾಂವ, ಉದ್ಯಮಿ ಕೆ.ಪಿ.ಶೆಟ್ಟಿ ಮಣಿಪಾಲ. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಭಾರತೀಯ ನೌಕಾಪಡೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಅರವಿಂದ ಶಿಗ್ಗಾಂವ ಅವರು ನಂತರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಭಾರತೀಯ ನೌಕಾದಳ ಹಾಗೂ ಸೇನೆಯಲ್ಲಿ ಸೇವೆ ಯಾವರೀತಿ ಇರುತ್ತದೆ ಎನ್ನುವ ಬಗ್ಗೆ ಸಂವಾದ ನಡೆಸಿದರು.

ಇದನ್ನೂ ಓದಿ | Independence Day | ಧ್ವಜಾರೋಹಣ ವೇಳೆ ಜನಿಸಿದ ಮಗು; ಧ್ವಜ ಸ್ತಂಭದ ಎದುರು ಧ್ವಜ ನಮನ!

Exit mobile version