ಉತ್ತರಕನ್ನಡ: ಮಗು ನೋಡಲು ಬಂದ ಅತ್ತೆಗೆ ಆಸ್ಪತ್ರೆಯಲ್ಲೇ ಕುಡಿದ ಅಮಲಿನಲ್ಲಿ ಅಳಿಯ ಚಾಕು ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಕದ್ರಾ ಮೂಲದ ಮಮ್ಮದಬೀ ಎಂಬ ಮಹಿಳೆಯೇ ಚಾಕು ಇರಿತಕ್ಕೊಳಗಾದವಳಾದವರು. ದಾಂಡೇಲಿ ಮೂಲದ ರಮಜಾನ್ (25) ಚಾಕು ಇರಿದವನು. ಮಮ್ಮದಬೀ ಮಗಳ ಜತೆ ರಮಜಾನ್ ಮದುವೆಯಾಗದೇ ನಾಲ್ಕು ವರ್ಷದಿಂದ ಲೀವಿಂಗ್ ರಿಲೇಷನ್ ಹೊಂದಿದ್ದ. ಮದುವೆಯಾಗದೇ ಮಗು ಆಗಿದ್ದಕ್ಕೆ ಮಮ್ಮದಬೀ ರಮಜಾನ್ನೊಂದಿಗೆ ಜಗಳವಾಡಿದ್ದಳು.
ಹೀಗಾಗಿ ಕೋಪಗೊಂಡಿದ್ದ ರಮಜಾನ್, ಕುಡಿದ ನಶೆಯಲ್ಲಿ ಮಗಳನ್ನು ನೋಡಲು ಬಂದಿದ್ದ. ಈಕೆಯ ಮೇಲೆ ಆಸ್ಪತ್ರೆಯಲ್ಲೇ ಹಲ್ಲೆ ಮಾಡಿ ಹೊಟ್ಟೆಗೆ ಚಾಕು ಇರಿದಿದ್ದಾನೆ. ತಕ್ಷಣ ಅಲ್ಲೇ ಇದ್ದ ಜನರು ಆತನಿಗೆ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕು ಇರಿತಕ್ಕೊಳಗಾದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ| ಗೃಹಸಚಿವರ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನ