Site icon Vistara News

Karnataka Election 2023: ಶಿರಾಲಿಯಲ್ಲಿ ಮತಬೇಟೆ ಆರಂಭಿಸಿದ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ

#image_title

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲರಾದ ನಾಗೇಂದ್ರ ನಾಯ್ಕ ಅವರು ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಶಿರಾಲಿಯಲ್ಲಿ ಸೋಮವಾರ ಶಕ್ತಿ ಪ್ರದರ್ಶನ ನಡೆಸಿದರು. ಅವರು 500ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಶಿರಾಲಿ ನಗರದಲ್ಲಿ ಮತಯಾಚನೆ ನಡೆಸಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ತಮಗೇ ಮತ ನೀಡುವಂತೆ ಕೋರಿದರು.

ಶಿರಾಲಿ ಹಾದಿ ಮಾಸ್ತಿ ದೇವರಿಗೆ ನಮಸ್ಕರಿಸಿದ ನಾಗೇಂದ್ರ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಅಂಗಡಿಗಳಿಗೆ ತೆರಳಿ ಮತಯಾಚನೆ ನಡೆಸಿದರು. ನಂತರ ಶಿರಾಲಿ ಗುಡಿ ಹಿತ್ತಲ ರಸ್ತೆಯ ಮೂಲಕ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಮತಯಾಚಿಸಿದರು.

ಈ ಭಾರಿ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಬದಲಾವಣೆ ಮುಖ್ಯ. ಹಾಗಾಗಿ ಹೊಸ ಮುಖವಾದ ತಮಗೆ ಒಂದು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ನಂತರ ಶಿರಾಲಿ ಸರ್ಕಲ್ ಮೂಲಕ ಎಂ.ಜಿ.ಎಂ ದೇವಸ್ಥಾನದ ಗೇಟ್ ಮೂಲಕ ಅಂಗಡಿಗಳಿಗೆ ಮತ್ತು ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು.

ಇದನ್ನೂ ಓದಿ: Karnataka Elections : ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಮಂಕಾಳು ವೈದ್ಯ ತೇಜೋವಧೆಗೆ ಯತ್ನ: ಇಬ್ಬರ ಮೇಲೆ ಕೇಸು

ಜೆಡಿಎಸ್ ಮುಖಂಡ ಪಾಂಡು ನಾಯ್ಕ, ಪುರಸಭಾ ಸದಸ್ಯ ಪಾಸ್ಕಲ್, ಗ್ರಾಮ ಪಂಚಾಯಿತಿ ಸದಸ್ಯ ದೇವಯ್ಯ ನಾಯ್ಕ, ಜೆಡಿಎಸ್ ತಾಲೂಕ ಅಧ್ಯಕ್ಷ ವಕೀಲ ರಾಜವರ್ಧನ ನಾಯ್ಕ, ವಕೀಲರಾದ ಮಂಜುನಾಥ್ ಗೊಂಡ, ನಾಗೇಶ್ ಗದ್ದೆಮನೆ, ಜೆಡಿಎಸ್ ಮುಖಂಡರಾದ ಈಶ್ವರ್ ನಾಯ್ಕ, ಶಂಕರ್ ನಾಯ್ಕ, ಕಾರ್ಯದರ್ಶಿ ನಾರಾಯಣ ನಾಯ್ಕ, ಜೆಡಿಎಸ್ ಕಾರ್ಯಕರ್ತರು, ನಾಗೇಂದ್ರ ನಾಯ್ಕ ಅಭಿಮಾನಿಗಳು ಮತ ಯಾಚನೆಯಲ್ಲಿ ಪಾಲ್ಗೊಂಡಿದ್ದರು.

Exit mobile version