ಕಾರವಾರ: ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಪ್ರದರ್ಶನ ಮಾಡದೇ ಇರುವುದ್ದಕ್ಕೆ ನಗರದ ಅರ್ಜುನ ಚಿತ್ರಮಂದಿರದ ಎದುರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಚಿತ್ರಮಂದಿರ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಪ್ರದರ್ಶನ ಮಾಡದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ಗಂಧದ ಗುಡಿ ಚಿತ್ರದ ಒಂದೇ ಒಂದು ಪೋಸ್ಟರ್ ಸಹ ಅಂಟಿಸಿಲ್ಲ. ಆದರೆ, ಹಿಂದಿ ಚಿತ್ರದ ಪೋಸ್ಟರ್ ಅಂಟಿಸಲಾಗಿದೆ. ಈ ಮೂಲಕ ಗಡಿಭಾಗದಲ್ಲಿ ಕನ್ನಡ ಸಿನಿಮಾ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಚಿತ್ರಮಂದಿರದ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿ ಪೋಸ್ಟರ್ ತೆರವುಗೊಳಿಸಿ ಗಂಧದ ಗುಡಿ ಚಿತ್ರ ಪ್ರದರ್ಶನ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದರಿಂದ ಪ್ರತಿಕ್ರಿಯೆ ನೀಡಿದ ಸಿಬ್ಬಂದಿ, ಶನಿವಾರ ಗಂಧದ ಗುಡಿ ಸಿನಿಮಾ ಪ್ರದರ್ಶಿಸುವ ಭರವಸೆ ನೀಡಿದರು. ಈ ವೇಳೆ ನಿತ್ಯ ಗಂಧದ ಗುಡಿ ಚಿತ್ರದ ಎರಡು ಶೋಗಳನ್ನು ಪ್ರದರ್ಶಿಸಲು ಆಗ್ರಹಿಸಿದರು.
ಇದನ್ನೂ ಓದಿ | Police Vs Police| ಇನ್ಸ್ಪೆಕ್ಟರ್ ಮತ್ತು ಟ್ರಾಫಿಕ್ ಎಎಸ್ಐ ನಡುವೆ ʻತೋರಿಸ್ತೀನಿʼ ಫೈಟ್, ಜಗಳ ಫುಲ್ ವೈರಲ್!