Site icon Vistara News

Road Accident: ಆಟೋರಿಕ್ಷಾ-ಕಾರು ನಡುವೆ ಡಿಕ್ಕಿ; ಐವರಿಗೆ ಗಂಭೀರ ಗಾಯ

]cashless medical treatment for accident victims by central Government

ಶಿರಸಿ: ಆಟೋರಿಕ್ಷಾ-ಕಾರು ನಡುವೆ ಡಿಕ್ಕಿ (Auto Rickshaw-Car Collision) ಸಂಭವಿಸಿ ಆಟೋದಲ್ಲಿದ್ದ ಐವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಯಡಳ್ಳಿ‌ ಗ್ರಾಮದ ಬಳಿ ಜರುಗಿದೆ.

ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಯಡಳ್ಳಿ ಬಳಿ ಅಪಘಾತ ಸಂಭವಿಸಿದ್ದು, ಅಟೋದಲ್ಲಿದ್ದ ಆಶೋಕ ಶಿರಾಲಿ (52) ನಿಲೇಕಣಿ ವಿಶಾಲಾಕ್ಷಿ (55) ಅಂಭಾಗಿರಿ ತ್ರಿಶಾ ಅಶೋಕ ಶಿರಾಲಿ (9), ಅನಿತಾ ಅಶೋಕ ಶಿರಾಲಿ (40), ಆದರ್ಶ ಅಶೋಕ ಶಿರಾಲಿ (18) ಅಪರಂಜಿತ (45) ಗಂಭೀರವಾಗಿ ಗಾಯಗೊಂಡಿದ್ದಾರೆ.

ದೀಪಾವಳಿ ನಿಮಿತ್ತ ದೇವಾಸ್ಥಾನಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ದೇವಾಸ್ಥಾನದಿಂದ ಮನೆಗೆ ವಾಪಾಸ್ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಗಾಯಾಳುಗಳನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version