ಶಿರಸಿ: ಯಲ್ಲಾಪುರ ನಗರದಲ್ಲಿ ನಡೆದ (yellapur news) ಭೀಕರ ಅಪಘಾತವೊಂದರಲ್ಲಿ (road accident) ಇಬ್ಬರು ಯುವಕರು ಸಾವಿಗೀಡಾಗಿದ್ದು, ಇನ್ನೊಬ್ಬ ಯುವಕ ಗಾಯಗೊಂಡಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಅಪಘಾತದ ದೃಶ್ಯ ದಾಖಲಾಗಿದೆ. ಯುವಕರು ಮೂವರೂ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಐಲ್ಲಾಫುರ ಪಟ್ಟಣದ ಕೆಬಿ ರಸ್ತೆಯ ಶಾನಭಾಗ ಹೋಟೆಲ್ ಬಳಿ ಘಟನೆ ನಡೆದಿದೆ. ಮುಂಬದಿಯಲ್ಲಿ ಹೋಗುತ್ತಿದ್ದ ಇನ್ನೋವಾ ಕಾರು ಇದ್ದಕ್ಕಿದ್ದಂತೆ ಬಲಕ್ಕೆ ಹೋಟೆಲ್ ಪಾರ್ಕಿಂಗ್ ಪ್ರದೇಶದತ್ತ ತಿರುಗಿಸಿದಾಗ, ಹಿಂದಿನಿಂದ ಅತಿವೇಗವಾಗಿ ಬರುತ್ತಿದ್ದ ಬೈಕ್ ಅದಕ್ಕೆ ಡಿಕಿ ಹೊಡೆದಿದೆ. ಮೂವರೂ ರೈಡರ್ಸ್ ಚಿಮ್ಮಿ ಬಹುದೂರಕ್ಕೆ ಬಿದ್ದಿದ್ದಾರೆ.
ಅಪಘಾತದ ಗಾಯಗಳಿಂದ ತಾಲೂಕಿನ ಹುಣಶೆಟ್ಟಿ ಕೊಪ್ಪದ ದರ್ಶನ, ರಾಮನಕೊಪ್ಪದ ರಾಜು ಭಂಡಾರಿ ಮೃತಪಟ್ಟಿದ್ದಾರೆ. ಮಹ್ಮದ್ ಜಾಬೀರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾರ ಮೇಲೋ ದ್ವೇಷ, ಇನ್ಯಾರಿಗೋ ಮಚ್ಚಿನೇಟು
ಬೆಂಗಳೂರು: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಅಟ್ಯಾಕ್ ಮಾಡಲು ಬಂದವನೊಬ್ಬ ಹಾಕಿದ ಮಚ್ಚಿನೇಟು ಸಂಬಂಧವೇ ಇಲ್ಲದ ಇನ್ಯಾರಿಗೋ ಬಿದ್ದಿದೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯತ್ರಿನಗರದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.
ತನ್ನ ವೈರಿಯನ್ನು ಕತ್ತರಿಸಲು ಬಂದವನು ಬಾಡಿಗೆ ಮನೆ ಮಹಿಳೆ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಿದ್ದಾನೆ. ರಾಕೇಶ್@ರಾಕು ಎಂಬಾತನ ಮೇಲೆ ಅಭಿಗೌಡ@ಅಮೂಲ್ ಎಂಬಾತನಿಂದ ಹತ್ಯಾ ಯತ್ನ ನಡೆದಿದೆ. ರಾಕೇಶ್ ಹಾಗು ಅಭಿಗೌಡನ ನಡುವೆ ಹಳೆ ವೈಷಮ್ಯವಿತ್ತು. ಇದೇ ಐದನೇ ತಾರೀಕು ಅವರ ನಡುವೆ ಗಣೇಶ ಇಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಕಿರಿಕ್ ಆಗಿತ್ತು. ಈ ವೇಳೆ ಅಭಿಗೌಡನ ಕೈಗೆ ರಾಕೇಶ್ ಗ್ಯಾಂಗ್ ಚಾಕುವಿನಿಂದ ಇರಿದಿತ್ತು.
ಇವರಿಬ್ಬರೂ ಜೊತೆಯಲ್ಲಿಯೇ ಇದ್ದವರಾಗಿದ್ದು, ಹುಡುಗಿ ವಿಚಾರಕ್ಕೆ ವೈಷಮ್ಯ ಶುರುವಾಗಿತ್ತು. ನಂತರ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ಇಂದು ರಾಕೇಶ್ ಮೇಲೆ ಹಲ್ಲೆ ಮಾಡಲು ಅಭಿಗೌಡ ಮಚ್ಚು ಹಿಡಿದು ಬಂದಿದ್ದ. ಬಾಡಿಗೆ ಮನೆ ಬಾಗಿಲು ಬಡಿದಿದ್ದ. ಬಾಡಿಗೆ ನೀಡಿದ್ದ ಮನೆಯೇ ರಾಕೇಶ್ ಮನೆ ಎಂದು ತಿಳಿದು ಮಚ್ಚಿನಿಂದ ಬಾಗಿಲು ಬಡಿದಿದ್ದ. ಬಾಡಿಗೆದಾರ ಮಹಿಳೆ ಹೊರ ಬರುತ್ತಿದ್ದಂತೆ ರಾಕೇಶ್ ಎಂದು ತಿಳಿದು ಮಚ್ಚು ಬೀಸಿದ್ದ. ಈ ವೇಳೆ ಮಹಿಳೆ ಕೈ ಕತ್ತರಿಸಿಹೋಗಿದೆ.
ಇದಾದ ಬಳಿಕ ಅಭಿಗೌಡ ಅಲ್ಲಿಂದ ಪರಾರಿಯಾಗಿದ್ದಾನೆ. ಸುಬ್ರಹ್ಮಣ್ಯನಗರ ಪೊಲೀಸರು ದೂರು ದಾಖಲಿಸಿಕೊಂಡು ಅಭಿಗೌಡನಿಗೆ ತಲಾಶ್ ನಡೆಸಿದ್ದಾರೆ.
ಇದನ್ನೂ ಓದಿ: Road Accident : ಬೆಂ-ಮೈ ಹೆದ್ದಾರಿಯಲ್ಲಿ ಸರಣಿ ಅಪಘಾತ! ಹೊತ್ತಿ ಉರಿದ ಬೈಕ್‌ಗಳು, ಕಂಟೈನರ್, ಕಾರು!