Site icon Vistara News

ವಿಶ್ವದರ್ಶನ ಶಾಲೆಯಲ್ಲಿ ಟ್ಯಾಲೆಂಟ್ ಫೆಸ್ಟ್‌; 400 ವಿದ್ಯಾರ್ಥಿಗಳಿಂದ ಪ್ರತಿಭೆ ಪ್ರದರ್ಶನ

vishwadarshana school yellapur

ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್‌ನಲ್ಲಿ “ವಿಶ್ವದರ್ಶನ ಟ್ಯಾಲೆಂಟ್ ಫೆಸ್ಟ್‌ʼʼ ಶನಿವಾರ ನಡೆಯಿತು. ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ದೀಪ ಬೆಳಗಿಸಿ, ಉತ್ಸವವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಗುವಿನ ಪ್ರತಿಭೆಯ ಅನಾವರಣಕ್ಕೆ ಸಾಕಷ್ಟು ಅವಕಾಶಗಳಿವೆ. ಪ್ರತಿ ಮಗುವಿನ ಬೌದ್ಧಿಕ ಸಾಮರ್ಥ್ಯ, ಕ್ರಿಯಾಶೀಲತೆ ಹಾಗೂ ಪ್ರತಿಭೆಗೆ ಉತ್ತಮ ವೇದಿಕೆಯನ್ನು ಟ್ಯಾಲೆಂಟ್ ಫೆಸ್ಟ್ ಮೂಲಕ ಒದಗಿಸಿಕೊಡಲಾಗಿದೆ. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ತಮ್ಮ ಕಾರ್ಯಚಟುವಟಿಕೆಯನ್ನು, ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.

ಪ್ರತಿ ಮಗುವೂ ಅಗಾಧ ಪ್ರತಿಭೆಯನ್ನು ಹೊಂದಿದೆ. ಇಂತಹ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವುದು ಹಾಗೂ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲಿಕಾ ಅವಕಾಶ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ನಿರಂತರ ಕಲಿಕೆಯಿಂದ ಮಕ್ಕಳಲ್ಲಿ ಸಹಜವಾಗಿ ಕಲಿಕಾ ಪ್ರಮಾಣದ ಜೊತೆಗೆ ಉತ್ಸಾಹ ಹಾಗೂ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದು ಗುರುರಾಜ ಕುಂದಾಪುರ ಹೇಳಿದರು.

vishwadarshana school yellapur

ಒಟ್ಟೂ 12 ವಿವಿಧ ರೀತಿಯ ಸ್ಪರ್ಧೆಗಳು ಹಾಗೂ ನಾಲ್ಕು ಭಾಷಾ ವಿಷಯಗಳಿಗೆ ಸಂಬಂಧಿಸಿದ ಸ್ಪರ್ಧೆಗಳು ಆಯೋಜನೆಗೊಂಡಿದ್ದು 6 ಕಲಿಕಾ ವಿಷಯಗಳ ಸ್ಪರ್ಧೆ, ಜೊತೆಗೆ 5 ಪಠ್ಯೇತರ ಚಟುವಟಿಕೆಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

400 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಗಣಿತ ವಿಷಯದ ಮಾದರಿಗಳು ಹಾಗೂ ವಿಜ್ಞಾನದ ವಿಷಯದ ಮಾದರಿಗಳನ್ನು ಪ್ರದರ್ಶಿಸಿದರು. ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಸತ್ತಿಗೆ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ಪ್ರಕ್ರಿಯೆಯನ್ನು ನಡೆಯಿತು. ವಿದ್ಯಾರ್ಥಿಗಳು ಸರತಿಸಾಲಿನಲ್ಲಿ ಬಂದು ಮತ ಚಲಾಯಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಪ್ರಾಂಶುಪಾಲರಾದ ಮಹಾದೇವಿ ಭಟ್, ಉಪಪ್ರಾಂಶುಪಾಲ ಆಸ್ಮ ಶೇಖ್, ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಇದನ್ನೂ ಓದಿ | ಯಲ್ಲಾಪುರ: ವಿಶ್ವದರ್ಶನ ಮಹಾವಿದ್ಯಾಲಯದಿಂದ ಶ್ರಮದಾನ

Exit mobile version