Site icon Vistara News

Second PU result : ಬನವಾಸಿ ಕಾಲೇಜಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ

#image_title

ಬನವಾಸಿ : ದ್ವಿತೀಯ ಪಿಯು ಫಲಿತಾಂಶ (Second PU result) ಶುಕ್ರವಾರ ಪ್ರಕಟವಾಗಿದೆ. ಅದರಲ್ಲಿ ಬನವಾಸಿಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನಿಂದ ಪರೀಕ್ಷೆಗೆ ಕುಳಿತ ಒಟ್ಟು 187 ವಿದ್ಯಾರ್ಥಿಗಳಲ್ಲಿ 179 ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಕೆಯೊಂದಿಗೆ ಉತ್ತೀರ್ಣರಾಗಿದ್ದಾರೆ.

ಒಟ್ಟಾರೆಯಾಗಿ ಬನವಾಸಿ ಪದವಿಪೂರ್ವ ಕಾಲೇಜಿನ ಫಲಿತಾಂಶ ಶೇ.95.7 ಆಗಿದೆ. ಕಲಾ ವಿಭಾಗದ ಒಟ್ಟು 76 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 5 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 42 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು ಹನ್ನೆರಡು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಲಾ ವಿಭಾಗದ ಫಲಿತಾಂಶ 89.47 ಆಗಿದೆ.

ಇದನ್ನೂ ಓದಿ: 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ; ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ, ಡಿಕೆಶಿ ಅಭಿನಂದನೆ

ವಾಣಿಜ್ಯ ವಿಭಾಗದ ಒಟ್ಟು 70 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಈ ಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಾಗಿದೆ. ಇವರಲ್ಲಿ 6 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಾಗೆಯೇ ವಿಜ್ಞಾನ ವಿಭಾಗದ ಒಟ್ಟು 41 ವಿದ್ಯಾರ್ಥಿಗಳಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಅದರಲ್ಲಿ 11 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾಲೇಜು ಮಟ್ಟದಲ್ಲಿ ಕಲಾ ವಿಭಾಗದ ಪ್ರಿಯಾ ಈರಪ್ಪ ಗೌಡ್ರು(536), ಪ್ರಕೃತಿ ಮಹಾದೇವ ಹಳ್ಳಿಕೊಪ್ಪದವರ ಮನೆ (526), ಅನನ್ಯ ತಿಮ್ಮಪ್ಪ ಮಡಿವಾಳ (515) ಕ್ರಮವಾಗಿ ಪ್ರಥಮ ಮೂರು ಸ್ಥಾನಗಳನ್ನು ಗಳಿಸಿಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಸೌಮ್ಯ ಸೋಮಶೇಖರ ಗೌಡ (559), ರುಚಿತ (545), ಶುಭ ಹುಲಿಯ ಗೌಡ(535) ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬುಶ್ರಾಬಾನು (573)ಪ್ರಥಮ, ನಿವೇದಿತ ಮಧುಕೇಶ್ವರ ಭಟ್ಟ (567)ದ್ವಿತೀಯ ಮತ್ತು ಜ್ಯೋತಿಕಾ ಅಶೋಕ್ ನಾಯ್ಕ (552)ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Exit mobile version