ಶಿರಸಿ: ಸೆಲ್ಕೋ ಸೋಲಾರ್ ಇಂಡಿಯಾ ಸಂಸ್ಥೆಯು ಸಮಾಜಮುಖೀ ಕೆಲಸಗಳನ್ನು ಮಾಡುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘಿಸಿದ್ದಾರೆ.
ಶಿರಸಿ ನಗರದ ಪ್ರಸಿದ್ಧ ಶ್ರೀಮಾರಿಕಾಂಬಾ ದೇವಾಲಯದ ಮಹಿಷಿ ಆವಾಸದ ಮಂಟಪದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಉಚಿತವಾಗಿ ಅಳವಡಿಸಿದ ಸೌರ ಶಕ್ತಿ ಜೀವ ಶಕ್ತಿ ಘಟಕವನ್ನು ದೇವಾಲಯಕ್ಕೆ ಸಮರ್ಪಣೆಗೊಳಿಸಿ ಮಾತನಾಡಿದರು.
ಸೆಲ್ಕೋ ಸೋಲಾರ್ ಘಟಕ ರಾಜ್ಯ, ಹೊರ ರಾಜ್ಯಗಳಲ್ಲಿ ಆರೋಗ್ಯ, ಶೈಕ್ಷಣಿಕ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯ ಮಾಡಿದೆ. ಸೌರ ಶಕ್ತಿಯ ಮೂಲಕ ಪರಿಸರ ಸ್ಬೇಹಿ ಕಾರ್ಯ ಮಾಡುತ್ತಿದೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ ಕಳೆದ 27 ವರ್ಷದಿಂದ ಸೆಲ್ಕೋ ಸೋಲಾರ ಸಂಸ್ಥೆ ಕೆಲಸ ಮಾಡುತ್ತಿದೆ. ಕರ್ನಾಟಕದ ಬಹುದೊಡ್ಡ ಶಕ್ತಿ ಕೇಂದ್ರವಾಗಿರುವ ಮಾರಿಕಾಂಬಾ ದೇವಸ್ಥಾನದ ಮಹಿಷನಿಗೆ ಬೆಳಕು ಹಾಗೂ ಗಾಳಿಯ ವ್ಯವಸ್ಥೆಯನ್ನು ಮಾಡಿದ್ದು ತೃಪ್ತಿ ಕೊಟ್ಟಿದೆ ಎಂದರು.
ಈ ವೇಳೆ ಸೆಲ್ಕೋ ಸೋಲಾರ್ ಸಿಇಓ ಮೋಹನ್ ಭಾಸ್ಕರ್ ಹೆಗಡೆ, ದೇವಸ್ಥಾನದ ಅಧ್ಯಕ್ಷ ಆರ್ ಜಿ ನಾಯ್ಕ್ , ದೇವಸ್ಥಾನದ ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಇದನ್ನೂ ಓದಿ| ದೇವಸ್ಥಾನದ ಜಾಗ ಆಕ್ರಮಿಸಿಕೊಂಡು ಮಸೀದಿ ಕಟ್ಟಿದ್ದರೆ ಪರಿವರ್ತನೆ ಆಗಬೇಕು: ಪೇಜಾವರ ಶ್ರೀ