Site icon Vistara News

ಶಿರಸಿ ಹುಡುಗಿಗೆ ಒಲಿಯಿತು ಕೆನಡಾ ಲಿಟರೇಚರ್‌ ಪ್ರಶಸ್ತಿ

ಕೆನಡಾ ಲಿಟರೇಚರ್‌ ಪ್ರಶಸ್ತಿ

ಶಿರಸಿ: ಇಲ್ಲಿಯ ರಂಗಭೂಮಿ ತಜ್ಞ ಡಾ. ಶ್ರೀಪಾದ್‌ ಭಟ್‌ ಅವರ ಮಗಳು ಶೀತಲ್ ಭಟ್‌ ಅವರಿಗೆ ಸಂಶೋಧನಾ ಪ್ರಬಂಧಕ್ಕಾಗಿ ಪ್ರತಿಷ್ಠಿತ ಕೆನಡಾ ಲಿಟರೇಚರ್‌ ಅವಾರ್ಡ್‌ ದೊರೆತಿದೆ. ‘ಪ್ರೇಮ ಪ್ರಪಂಚಗಳು: ಭಾರತದಲ್ಲಿ ಮತ್ತು ಕೆನಡಾದ ಸ್ಥಳೀಯ ರಂಗಭೂಮಿಯಲ್ಲಿ ಪ್ರೀತಿಯ ಪ್ರದರ್ಶನದ ಮೂಲಕ ವಸಾಹತೀಕರಣʼ ಎಂಬ ವಿಷಯದ ಕುರಿತು ಶೀತಲ್ ಸಂಶೋಧನಾ ಪ್ರಬಂಧ ಬರೆದಿದ್ದಾರೆ.

ಇದನ್ನೂ ಓದಿ | ಶಿರಸಿಯ 11 ವರ್ಷದ ಬಾಲಕಿಯಿಂದ ವರ್ಲ್ಡ್ ರೆಕಾರ್ಡ್

ಈ ಸಂಶೋಧನಾ ಪ್ರಬಂಧಕ್ಕೆ ಡಾ. ಕಿಮ್‌ ಸೋಲ್ಗಾ ಮಾರ್ಗದರ್ಶಕರಾಗಿದ್ದಾರೆ. klink ಪ್ರಶಸ್ತಿಗೆ ಈ ಪ್ರಬಂಧ ಅರ್ಹವಾಗಿದೆ ಎಂದು ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೀತಲ್ ಕನ್ನಡ ಮಾಧ್ಯಮದಲ್ಲಿಯೇ ಸರ್ಕಾರಿ ಶಾಲೆಯಲ್ಲಿ ಓದಿ, ರಂಗಭೂಮಿಯಲ್ಲಿ ಹಲವು ಪ್ರಯೋಗಗಳೊಂದಿಗೆ ಕೆನಡಾದಲ್ಲಿ ಅಭ್ಯಸಿಸುತ್ತಿದ್ದಾರೆ. ತಮ್ಮ ಬರೆಹಕ್ಕೆ ಎರಡು ಬಾರಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ | ಶಿರಸಿಯಲ್ಲಿ KGF 2 ಓಪನಿಂಗ್‌ ಸೀನ್!‌ 15ನೇ ಶತಮಾನದ ವೀರಗಲ್ಲು ಪತ್ತೆ

Exit mobile version