Site icon Vistara News

Shankara Award : ಸ್ವರ್ಣವಲ್ಲಿ ಮಠದಲ್ಲಿ ಶಂಕರ ಜಯಂತಿ; ಏ. 24ರಂದು ಇಬ್ಬರು ಸಾಧಕರಿಗೆ ಸಾಧನಾ ಶಂಕರ ಪ್ರಶಸ್ತಿ ಪ್ರದಾನ

#image_title

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ನಡೆಸುವ ಶಂಕರ ಜಯಂತಿ ಸಂದರ್ಭದಲ್ಲಿ ಇಬ್ಬರು ಸಾಧಕರಿಗೆ ಸಾಧನಾ ಶಂಕರ ಪ್ರಶಸ್ತಿ‌ ನೀಡಿ (Shankara Award) ಗೌರವಿಸಲಾಗುತ್ತಿದೆ‌.

ಏ.25ರಂದು ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾತೆಯರಿಂದ ಶಂಕರ ಸ್ತೋತ್ರ ಪಾರಾಯಣ ನಡೆಯಲಿದ್ದು, ಸಂಜೆ 4ಕ್ಕೆ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಮಹಾ ಸ್ವಾಮೀಜಿಗಳು, ಕಲ್ಕತ್ತಾದ ವಿವೇಕಾನಂದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟ್ರಮಣ ಭಟ್ಟ ಹಲಸಖಂಡ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Sirsi News : ಶಿರಸಿಯಲ್ಲಿ ಪ್ರಜ್ವಲೋತ್ಸವ, ಸಾಂಸ್ಕೃತಿಕ ಸಂಜೆ ಯಶಸ್ವಿ

ಇದೇ ವೇಳೆ ಸಾಧನಾ ‌ಶಂಕರ ವಿದ್ವತ್ ಪ್ರಶಸ್ತಿಯನ್ನು ರಾಜರಾಜೇಶ್ವರಿ‌ ಸಂಸ್ಕೃತ ಮಹಾ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಶಂಕರ ಭಟ್ಟ ಬಾಲಿಗದ್ದೆ, ಆದಿಚುಂಚನಗಿರಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಕೃಷ್ಣಮೂರ್ತಿ ಕೂರ್ಸೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಏ.24ರಂದು ಸಂಜೆ 4ಕ್ಕೆ ಶಿರಸಿ ಯೋಗ ಮಂದಿರದಲ್ಲಿ ಶಂಕರ ಜಯಂತಿ‌ ನಡೆಯಲಿದ್ದು, ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಶ್ರೀಗಳು, ಶಿರಳಗಿ ಶ್ರೀ ಬ್ರಹ್ಮಾನಂ ಸರಸ್ವತೀ ಶ್ರೀಗಳು ನೀಡಲಿದ್ದಾರೆ. ಬಳಿಕ ಯಕ್ಷ ಭಾರತಿ ಕಲಾ ವೇದಿಕೆಯಿಂದ ಶಂಕರ ದಿಗ್ವಿಜಯ ತಾಳಮದ್ದಲೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version