ಶಿರಸಿ: ಬನವಾಸಿ ಕದಂಬೋತ್ಸವವು (Kadambotsava) ಮಾ.5 ಹಾಗೂ 6ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾ.5 ರಂದು ಮಂಗಳವಾರ ಸಂಜೆ 6ಕ್ಕೆ (Sirsi News) ಉದ್ಘಾಟಿಸಲಿದ್ದಾರೆ.
ಬನವಾಸಿಯ ಮಯೂರ ವರ್ಮ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಮಂಕಾಳ ವೈದ್ಯ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಕೃಷ್ಣೇ ಭೈರೇಗೌಡ, ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ವಿಪಕ್ಷ ನಾಯಕ ಆರ್.ಅಶೋಕ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಇತರರು ಭಾಗವಹಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಪ ಪ್ರಶಸ್ತಿ ಪುರಸ್ಕೃತ ನಾ.ಡಿಸೋಜ ಭಾಗವಹಿಸಿದ್ದಾರೆ.
ಮಾ.5ರ ಮಧ್ಯಾಹ್ನ 2ಕ್ಕೆ ಮಧುಕೇಶ್ವರ ದೇವಸ್ಥಾನದ ಎದುರಿನಿಂದ ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆ ನಡೆಯಲಿದೆ. ಸಮಾರೋಪ ಸಮಾರಂಭ ಮಾ.6ರಂದು ಸಂಜೆ 6ಕ್ಕೆ ಬನವಾಸಿಯಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ.ಜಮೀರುಲ್ಲ ಷರೀಫ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಮ್ಯಾಟ್ರಿಮೋನಿ ಸೇರಿ ಹಲವು ಆ್ಯಪ್‌ಗಳಿಗೆ ಗೂಗಲ್ ಕೊಕ್; ಕೇಂದ್ರದ ಮುಂದಿನ ನಡೆ ಏನು?
ಸಾಂಸ್ಕೃತಿಕ ಸಂಭ್ರಮ
ಎರಡು ದಿನಗಳ ಉತ್ಸವದ ಮೊದಲ ದಿನ ಸುಜಾತಾ ಧಾರವಾಡ ಭಕ್ತಿಸಂಗೀತ, ಶಹನಾಯಿ ಡಾ. ಕೃಷ್ಣ ಬಾಲ್ಲೇಶ, ವಚನ ಸಂಗೀತ ರೋಹಿಣಿ ಹಿರೇಮಠ, ಸುಗಮ ಸಂಗೀತ ಶಿರಸಿ ರತ್ನಾಕರ, ಭರತನಾಟ್ಯ ಡಾ. ಚೇತನಾ ರಾಧಾಕೃಷ್ಣನ್, ಶ್ರೇಯಾ ಪಾಟೀಲ, ಗಿಚ್ಚಿ ಗಿಲಿಗಿಲಿ ತಂಡ ಕಾಮಿಡಿ ಶೋ, ಕೃತ್ತಿಕಾ ದಯಾನಂದ ನೃತ್ಯ ವೈಭವ, ರವಿ ತಂಡದಿಂದ ಆಕ್ಸಿಜನ್ ಡಾನ್ಸ್ ನಡೆಯಲಿದೆ. ಬಳಿಕ ರಘು ದೀಕ್ಷಿತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಇಂದೇ ಅಪ್ಲೈ ಮಾಡಿ
6ರಂದು ಬೆಳಿಗ್ಗೆ 10:30 ರಿಂದ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿಗಳಾದ ಸುಧಾ ಆಡುಕಳ, ಪಿ.ಆರ್.ನಾಯ್ಕ, ಗಣಪತಿ ಬಾಳೆಗದ್ದೆ, ಶ್ರೀಧರ ಶೇಟ್, ಪದ್ಯಾಯಣ ಗೋವಿಂದ ಭಟ್ಟ, ನಾಗವವೇಣಿ ಹೆಗ್ಗರಸಿಮನೆ, ನಂದಿನಿ ಹೆದ್ದುರ್ಗ, ಕೃಷ್ಣ ನಾಯ್ಕ, ಡಾ. ಸಮೀರ ಹಾದಿಮನಿ ಭಾಗವಹಿಸುವರು. ಸಂತೋಷ ಕುಮಾರ ಮೆಹೆಂದಳೆ, ಬಿ.ಎನ್.ರಮೇಶ, ಜಿ.ಸು. ಬಕ್ಕಳ ಉಪಸ್ಥಿತ ಇರಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಇತಿಹಾಸ ಗೋಷ್ಠಿ ನಡೆಯಲಿದೆ. ಕೆ.ಎನ್.ಹೊಸ್ಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೋಹನ ಭರಣಿ ವಿಷಯ ಮಂಡಿಸಲಿದ್ದಾರೆ.
ಸಂಜೆ 5ರಿಂದ ಶಮಾ ಭಾಗವತ್ ಚಿತ್ರದುರ್ಗ ನೃತ್ಯ ರೂಪಕ, ರೇಖಾ ದಿನೇಶ ಸಂಗೀತ, ವಿನುತಾ ಯಲ್ಲಾಪುರ ನೃತ್ಯ, ನಿನಾದ ತಂಡದಿಂದ ತಬಲಾ ವಾದನ, ನಿರ್ಮಲಾ ಗೋಳಿಕೊಪ್ಪ ತಂಡದಿಂದ ಯಕ್ಷಗಾನ, ವಿಜೇತ ಸುದರ್ಶನ, ಬಸವರಾ ಬಂಟನೂರು, ಸುಗಮ ಸಂಗೀತ, ರಮೀಂದರ ಖುರಾನ ಒಡಿಸ್ಸಿ ನೃತ್ಯ, ಬಸಯ್ಯ ಗುತ್ತೇದಾರ ಜಾನಪದ ಸಂಗೀತ, ಕೃಪಾ ಹೆಗಡೆ ಭರತನಾಟ್ಯ, ರಜತ್ ಹೆಗಡೆ ಹಾಗೂ ಶ್ರೀಲಕ್ಷ್ಮಿ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಬಳಿಕ ಹರಿಕೃಷ್ಣ ತಂಡದಿಂದ ಸಂಗೀತ ಸಂಭ್ರಮ ನಡೆಯಲಿದೆ.
ಸಾಂಪ್ರದಾಯಿಕವಾಗಿ ಪಂಪ ಪ್ರಶಸ್ತಿ ಕದಂಬೋತ್ಸವದಲ್ಲಿ ಪ್ರದಾನ ಆಗಬೇಕಿತ್ತು. ಆದರೆ ಈ ಬಾರಿ ಬೆಂಗಳೂರಿನಲ್ಲಿ ನಾ.ಡಿಸೋಜ ಅವರಿಗೆ ಪ್ರದಾನ ಆಗಿದೆ ಎಂಬುದೂ ಉಲ್ಲೇಖನೀಯ. ಆದರೆ, ನಾ. ಡಿಸೋಜ ಅವರಿಗೆ ಆಹ್ವಾನ ಕಳಿಸಲಾಗಿದೆ.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!
ಶಾಸಕ ಹೆಬ್ಬಾರ್ ಗೈರು
ಪ್ರತಿ ಕದಂಬೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಿಂದ ಎಲ್ಲ ಹಂತದಲ್ಲೂ ಸಕ್ರೀಯವಾಗಿ ಇರುತ್ತಿದ್ದ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಈ ಬಾರಿ ಆಹ್ವಾನ ಪತ್ರಿಕೆ ಬಿಡುಗಡೆಯಲ್ಲಿ ಗೈರಾದರು. ರಾಜ್ಯ ರಾಜಕೀಯ ವಿದ್ಯಮಾನಗಳ ಬೆನ್ನಲ್ಲೇ ಕದಂಬೋತ್ಸವ ಕೂಡ ನಡೆಯುತ್ತಿದ್ದು, ಹೆಬ್ಬಾರ್ ಅವರ ಗೈರು ಅನೇಕ ಅರ್ಥಗಳಿಗೆ ಕಾರಣವಾಗಿದೆ.