Site icon Vistara News

Sirsi News: ಶಿರಸಿಯ ವಿವಿಧೆಡೆ ಗಣೇಶ ಚತುರ್ಥಿ ಹಬ್ಬಕ್ಕೆ ಸಿದ್ಧವಾಗುತ್ತಿದೆ ಚಕ್ಕುಲಿ ಕಂಬಳ

Chakkuli Kambala getting ready for Ganesh Chaturthi festival at Sirsi

ಭಾಸ್ಕರ್ ಆರ್. ಗೆಂಡ್ಲ. ವಿಸ್ತಾರ ನ್ಯೂಸ್

ಶಿರಸಿ: ಹಬ್ಬ (Festival) ಅಂದರೆ ಅದೇನೋ ಸಡಗರ, ಸಂಭ್ರಮ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಲೆನಾಡಿಗರಿಗೆ ಯಾವುದೇ ಹಬ್ಬ ಬಂದರೂ ಅವರಲ್ಲೇನೋ ವಿಶೇಷತೆ ಇದ್ದೇ ಇರುತ್ತೆ. ಈಗಂತೂ ಗೌರಿ-ಗಣೇಶ ಹಬ್ಬದ (Ganesh Chaturthi) ಸಮಯ. ಈ ಹಬ್ಬಕ್ಕೆ ಮಲೆನಾಡ ಭಾಗವಾದ ಶಿರಸಿಯಲ್ಲಿ (Sirsi) ವಿಶೇಷ ಚಕ್ಕುಲಿ ತಿಂಡಿ ತಿನಿಸು‌ ಮಾಡುವುದರಲ್ಲಿ ಜನರು ನಿರತರಾಗಿದ್ದಾರೆ. ಆದರೆ ಈ ತಿನಿಸನ್ನ ಮಾಡೋಕೆ ಕೂಡು ಕುಟುಂಬ ಒಟ್ಟಾಗಿ ಸೇರಿ ಹಬ್ಬದ ಸಡಗರವನ್ನು ಆಚರಿಸುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೇರಿ ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ.. ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು. ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ. ಈಗ ಗೌರಿ ಗಣೇಶ ಹಬ್ಬದ ಸಂಭ್ರಮ. ಮಲೆನಾಡಿಗರಲ್ಲಿ ಅದರಲ್ಲೂ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದವರಿಗೆ ಈ ಹಬ್ಬದ ಸಡಗರ ಸ್ವಲ್ಪ ಜಾಸ್ತಿಯೇ. ಗಣೇಶ ಚತುರ್ಥಿ ಅಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಗಣೇಶ ಚೌತಿಗೆ ಮಾಡುವ ಗಣೇಶನಿಗೆ ಪ್ರಿಯವಾದ ಈ ಚಕ್ಕುಲಿ ಕಂಬಳ ಎಲ್ಲೆಡೆ ಸಂಭ್ರಮದಿಂದ ಕೆಲಸ ಸಾಗಿದೆ.

ಶಿರಸಿಯ ಹೆಗಡೆಕಟ್ಟ ಸಮೀಪದ ಕಲ್ಮನೆ ಊರಿನಲ್ಲಿ ಎಲ್ಲರೂ ಚಕ್ಕುಲಿ ಕಂಬಳ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಉತ್ತರಕನ್ನಡ ಜಿಲ್ಲೆ ಶಿರಸಿಯ ಕೆಲವೇ ಕಡೆ ಮೊದಲಿನಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳ ಶುರುವಾಗಿದೆ.

ಇದನ್ನೂ ಓದಿ: Ind vs Pak : ಭಾರತ – ಪಾಕಿಸ್ತಾನ ಪಂದ್ಯದ ವೇಳೆ ಸೃಷ್ಟಿಯಾಗಲಿರುವ ರೆಕಾರ್ಡ್​​ಗಳ ವಿವರ ಇಲ್ಲಿದೆ

ಎಲ್ಲ ಕಂಬಳದಂತೆ ಕಲ್ಮನೆ ಹೆಗ್ಗಾರು, ಹೆಗಡೆಕಟ್ಟ ಸುತ್ತಮುತ್ತಲಿನ ಊರಿನವರು, ಸಂಬಂಧಿಗಳು ಒಬ್ಬರು ಮತ್ತೊಬ್ಬರ ಮನೆಗೆ ಕಂಬಳಕ್ಕೆ ಸಹಕರಿಸುತ್ತಾರೆ. ಕೈ ಕಂಬಳದಲ್ಲಿ ಬರೀ ಚಕ್ಕುಲಿ ಅಷ್ಟೇ ಅಲ್ಲದೆ, ಪರಿಣಿತರು ಅಕ್ಷರಗಳನ್ನು ಸಹ ಬರೆಯುತ್ತಾರೆ. ಅನಾದಿ ಕಾಲದಿಂದಲು ರೂಡಿಯಲ್ಲಿದ್ದ ಚಕ್ಕುಲಿ ಕಂಬಳ ಮಾಡೋದು ಅಂದರೆ ಇವರಿಗೆ ಎಲ್ಲಿಲ್ಲದ ಸಂತೋಷ. ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊಂಡಿದ್ದರೂ ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈ ಕಂಬಳನ್ನೇ ಮಾಡುತ್ತಾರೆ.

ಚಕ್ಕುಲಿ ಕಂಬಳ.

ಹಿಂದಿನಿಂದ ಬಂದ ಸಂಪ್ರದಾಯ ಒಂದು ಕಡೆ ಆದರೆ ಇಂತಹ ವಿಶೇಷ ಕಲೆ ಎಲ್ಲರಿಗೂ ಬರುವುದಿಲ್ಲ. ಅದರಲ್ಲೂ ಈ ಚಕ್ಕುಲಿ ರುಚಿ ಹಾಗೂ ಬಾಳಿಕೆ ಜಾಸ್ತಿ. ಉಪಕರಣಗಳಿಂದ ಮಾಡಿದ ಚಕ್ಕುಲಿ ಕೆಲವೇ ದಿನ ಉಳಿದರೆ ಇದನ್ನು ನಾಲ್ಕಾರು ತಿಂಗಳುಗಳ ಕಾಲ ಇಡಬಹುದು.

ಇದನ್ನೂ ಓದಿ: Leo Movie: 42 ದಿನಗಳ ಮುಂಚೆಯೇ 24 ಗಂಟೆಗಳಲ್ಲಿ 10 ಸಾವಿರ ಮುಂಗಡ ಟಿಕೆಟ್‌ ಬುಕ್‌; ಲಿಯೋ ಹೊಸ ದಾಖಲೆ!

ಹಬ್ಬದಲ್ಲಿ ಬಂದ ಸಂಬಂಧಿಕರಿಗೆ ಹಾಗೂ ದೂರದ ಊರಲ್ಲಿರುವವರಿಗೆ ಪಾರ್ಸಲ್ ಕಳಿಸಿಕೊಡುತ್ತಾರೆ. ಆದ್ದರಿಂದ ಈ ಊರಲ್ಲಿ ಪ್ರತಿ ಮನೆಯಲ್ಲಿಯೂ ಒಂದೇ ಬಾರಿ ಎರಡುಮೂರು ಕ್ಯಾನ್ ಗಟ್ಟಲೇ ಚಕ್ಕುಲಿ ಮಾಡಿ ತುಂಬಿಡುತ್ತಾರೆ. ಅನಾದಿ ಕಾಲದಿಂದಲೂ ಚಕ್ಕುಲಿ ಕಂಬಳವನ್ನ ಮಾಡುತ್ತ ಬಂದಿರೋ ಇಲ್ಲಿನ ಜನರು ಈಗಲೂ ಇದನ್ನ ರೂಢಿಯಲ್ಲಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಚಕ್ಕುಲಿಯನ್ನ ಮಿಷನ್ ನಲ್ಲಿ ಮಾಡ್ತಾರೆ. ಆದರೆ ಇಲ್ಲಿ ಹದ ಮಾಡಿದ ಹಿಟ್ಟನ್ನ ತಯಾರು ಮಾಡಿ ಕೈಯಲ್ಲೇ ಬಿಡೋದು ವಿಶೇಷತೆ. ಅದರಲ್ಲೂ ವಿವಿಧ ವಿನ್ಯಾಸದ ಚಕ್ಕುಲಿ ಮಾಡೋದು ಇನ್ನೊಂದು ವಿಶೇಷ.

ಇದನ್ನೂ ಓದಿ: G20 Summit 2023: ಮತ್ತೆ ಅಮೆರಿಕಕ್ಕೆ ಜಿ20 ಅಧ್ಯಕ್ಷತೆ! ಚೀನಾದಿಂದ ತೀವ್ರ ಆಕ್ಷೇಪ

ಅದೇನೆ ಇರಲಿ ಯಾವುದೇ ಹಬ್ಬ ಆದರೂ ಮಲೆನಾಡಿಗರಲ್ಲಿ ಅದೇನೋ ಸಂಭ್ರಮ. ಒಂದಲ್ಲಾ ಒಂದು ವಿಶೇಷತೆಯಿಂದ ಹಬ್ಬವನ್ನು ಆಚರಿಸೋ ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸ್ತಾರೆ. ಒಟ್ಟಾರೆ ಹಬ್ಬ ಅಂದ್ರೆ ಅಲ್ಲಿ ವಿಭಿನ್ನ ತಿಂಡಿ ತಿನಿಸುಗಳು ಇರೋದು ಕಾಮನ್. ಆದರೆ ಚಕ್ಕುಲಿ ಕಂಬಳ ಮಾತ್ರ ಗಣೇಶ ಚತುರ್ಥಿಯ ವಿಶೇಷ ತಿನಿಸು ಅನ್ನೋದಂತೂ ನಿಜ.

Exit mobile version