Site icon Vistara News

Sirsi News: ಗಂಗಾಮತ ಸಮಾಜಕ್ಕೆ ಸಮರ್ಥ ನಾಯಕತ್ವದ ಕೊರತೆಯಿದೆ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌

Gangamatha community leaders meeting inauguration at Sirsi

ಶಿರಸಿ: ನಗರದ ಭಾರತ ಸೇವಾದಳ ಸಭಾಂಗಣದಲ್ಲಿ ಶಿರಸಿ ತಾಲೂಕಾ ಗಂಗಾಮತಸ್ಥರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶಿರಸಿ ತಾಲೂಕಾ ಪುಣ್ಯಕೋಟಿ ಅಂಬಿಗ ಮೀನುಗಾರರ ಸಂಘದ ಆಶ್ರಯದಲ್ಲಿ ಸಮಾಜದ (Gangamatha community) ಮುಖಂಡರ ಸಭೆ (Meeting) ಗುರುವಾರ ನಡೆಯಿತು.

ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಸಭೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ನಮ್ಮ ಮೀನುಗಾರಿಕೆ ಸಮಾಜಕ್ಕೆ ನಾಯಕತ್ವದ ಕೊರತೆಯಿದೆ. ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಇದ್ದು, ಸುಮಾರು 70 ವಿಧಾನಸಭಾ ಕ್ಷೇತ್ರ ಮತ್ತು 8 ರಿಂದ 10 ಲೋಕಸಭಾ ಕ್ಷೇತ್ರದಲ್ಲಿ ಮೀನುಗಾರಿಕಾ ಸಮಾಜದ ನಿರ್ಣಾಯಕ ಮತದಾರರಿದ್ದರೂ ಕೂಡ ಮೀನುಗಾರಿಕೆ ಸಮಾಜದ ಒಳಿತಿಗಾಗಿ ಹೋರಾಡಲು ಯಾವುದೇ ಪಕ್ಷದಲ್ಲಿ ನಾಯಕರಿಲ್ಲದೆ ಸೊರಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮುದಾಯಕ್ಕೆ ಸಮರ್ಥ ನಾಯಕತ್ವ ಬೇಕಿರುವ ಹಿನ್ನಲೆಯಲ್ಲಿ ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ನಮ್ಮ ಸಮಾಜದ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಬೇಕೆಂದು ಕರೆಕೊಟ್ಟರು‌.

ಇದನ್ನೂ ಓದಿ: Ravindra Jadeja: ನೂತನ ದಾಖಲೆಯ ಸನಿಹ ರವೀಂದ್ರ ಜಡೇಜಾ; ಮೂರು ವಿಕೆಟ್​ ಅಗತ್ಯ

ಈ ಸಂದರ್ಭದಲ್ಲಿ ಮಾಜಿ ಶಾಸಕ ವಿವೇಕಾನಂದ ವೈದ್ಯ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ನಟರಾಜ ಹೊಸೂರು, ವಸಂತ ಕೋನಸಾಲಿ, ಪ್ರಕಾಶ ಬಂಗ್ಲೆ, ಬಿ.ಡಿ.ರವಿಕುಮಾರ ಮುಂತಾದವರು ಮಾತನಾಡಿದರು. ಶಿರಸಿ, ಮುಂಡಗೋಡ, ಬನವಾಸಿ, ದನಗನಹಳ್ಳಿ, ರಾಮಾಪುರ, ತಿಗಣಿ, ಕೋರ್ಲಕಟ್ಟಾ, ಕಬ್ಬೆ, ಕಡಗೋಡ, ಸಿದ್ದಾಪುರ, ನೇಜ್ಜುರ್ ಗ್ರಾಮಗಳಿಂದ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು. ಸಭೆಯನ್ನು ದಿನೇಶಕುಮಾರ ಮಶಾಲ್ಡಿ, ಪುರುಷೋತ್ತಮ ಕಲ್ಮನೆ ಸಂಘಟಿಸಿದ್ದರು.

ಇದನ್ನೂ ಓದಿ: ICC World Cup 2023: ವಿಶ್ವಕಪ್​ಗೆ ನೆದರ್ಲ್ಯಾಂಡ್ಸ್​ ತಂಡ ಪ್ರಕಟ; ಆರ್​ಸಿಬಿ ಮಾಜಿ ಸ್ಟಾರ್​ ಆಟಗಾರನಿಗೆ ಅವಕಾಶ

ರೇಖಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಕಬ್ಬೆ ವಂದನಾರ್ಪಣೆ ಮಾಡಿದರು.

Exit mobile version