Site icon Vistara News

Sirsi News : ಶಿರಸಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಲಕ್ಷ ಮೌಲ್ಯದ ಮದ್ಯ, ವಾಹನ ವಶ

#image_title

ಸಿದ್ದಾಪುರ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ವಾಹನಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (Sirsi News) ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಸಾಗಿಸಲು ಯತ್ನಿಸಿದ್ದು, ಆತನನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಿದ್ದಾಪುರ ತಾಲೂಕಿನ ಹೆಜನಿ ಕ್ರಾಸ್‌ ಬಳಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.

ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ನಾಲ್ಕು ರಟ್ಟಿನ ಪೆಟ್ಟಿಗೆಗಳಲ್ಲಿ 650 ಎಂ.ಎಲ್. ಅಳತೆಯ 48 ಪವರ್ ಕೂಲ್ ಬಿಯರ್, 180 ಎಂ.ಎಲ್.ಅಳತೆಯ 48 ಓಲ್ಡ್ ಟವರಿನ್ ವಿಸ್ಕಿ ಹಾಗೂ 90 ಎಂ.ಎಲ್. ಅಳತೆಯ 96 ಹೈವರ್ಡ್ಸ್ ವಿಸ್ಕಿಯ ಟೆಟ್ರಾಪ್ಯಾಕ್‌ಗಳನ್ನು ಮಾರಾಟಕ್ಕಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯಿದ್ದ ಅಬಕಾರಿ ಇಲಾಖೆಯ ತಂಡವು ದಾಳಿ ನಡೆಸಿದೆ. ಹೊನ್ನಾವರ ತಾಲೂಕಿನ ಕಬ್ಬಿನಹಕ್ಕಲ ಗ್ರಾಮದ ಗಣೇಶ ಮಾದೇವ ನಾಯ್ಕ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Karnataka Election: ದುಬಾರಿ ಹೇಳಿಕೆ ನೀಡಿ ಪಕ್ಷಕ್ಕೆ ಘಾಸಿ ಮಾಡದಂತೆ ನಾಯಕರಿಗೆ ‘ಕಾಂಗ್ರೆಸ್ ಥಿಂಕ್‌ ಟ್ಯಾಂಕ್‌’ ತಾಕೀತು
ಮದ್ಯ ಸಾಗಾಟಕ್ಕೆ ಬಳಸಿದ ವಾಹನದ ಅಂದಾಜು ಮೌಲ್ಯ ರೂ. 6 ಲಕ್ಷ, ಬಿಯರ್ ಮತ್ತು ಮದ್ಯದ ಮೌಲ್ಯ ರೂ. 12,816 ಎಂದು ಅಂದಾಜಿಸಲಾಗಿದೆ‌. ಶಿರಸಿ ಅಬಕಾರಿ ಡಿ.ಎಸ್.ಪಿ ಮಹೇಂದ್ರ ಎಸ್. ನಾಯ್ಕ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಲೋಕೇಶ್ವರ ಬೋರ್ಕರ್ ಮತ್ತು ಗಜಾನನ ನಾಯ್ಕ ದಾಳಿಯಲ್ಲಿ ಪಾಲ್ಗೊಂಡಿದ್ದರು.

Exit mobile version