ಶಿರಸಿ: ಆಧುನಿಕ ತಂತ್ರಜ್ಞಾನ (Technology) ಯುಗದಲ್ಲಿ ಛಾಯಾಗ್ರಾಹಕರು (Photographers) ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಅಸಂಘಟಿತ ವಲಯದಲ್ಲಿರುವ ಛಾಯಾಗ್ರಾಹಕರು ಸಂಘಟಿತರಾಗಿ ಸರ್ಕಾರದಿಂದ (Government) ಸಿಗುವ ಸೌಲಭ್ಯಗಳನ್ನು (Facilities) ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಸ್ಕಾಡ್ ವೆಡ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶಿರಸಿ ತಾಲೂಕು ಪೊಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಅಸೋಸಿಯೇಷನ್ ವತಿಯಿಂದ 13 ನೇ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಪೊಟೋ ಸಾವಿರ ಶಬ್ದಗಳಿಗೆ ಸಮ. ಕಲ್ಪನೆಗೂ ಮೀರಿದ ಫೋಟೋ ತೆಗೆಯುವ ಸಾಮರ್ಥ್ಯವನ್ನು ಛಾಯಾಚಿತ್ರ ಗ್ರಾಹಕರು ಹೊಂದಿದ್ದಾರೆ. ಛಾಯಾಗ್ರಾಹಕರು ಎಲ್ಲ ಬದುಕಿನಲ್ಲಿ ಇರುವ ಅಂಗ ಎಂದರೆ ತಪ್ಪಾಗಲಾರದು. ಸಂಬಂಧ ಗಟ್ಟಿಗೊಳಿಸಿ, ಭಾವನೆ, ನೆನಪುಗಳನ್ನು ಪುನಃ ನೆನಪಿಸುವ ವ್ಯಕ್ತಿಗಳು ಪೋಟೋಗ್ರಾಫರ್ ಎಂದರು.
ಇದನ್ನೂ ಓದಿ: WordPad: ವರ್ಡ್‌ಪ್ಯಾಡ್ ಇನ್ನಿಲ್ಲ! 30 ವರ್ಷಗಳ ಉಚಿತ ಸೌಲಭ್ಯವನ್ನು ಕೊನೆಗೊಳಿಸಲಿರುವ ಮೈಕ್ರೋಸಾಫ್ಟ್
ವೃತ್ತಿ ಬದ್ಧತೆ ಅತ್ಯವಶ್ಯ. ಹಲವಾರು ಕಷ್ಟಗಳ ಎದುರಿಸಿ, ಸಮಾಜದಲ್ಲಿ ಎಲ್ಲರಂತೆ ಬದುಕು ಸಾಗಿಸುತ್ತಿರುವುದು ಖುಷಿಯ ಸಂಗತಿ. ಎಲ್ಲರೂ ಸೇರಿ ಕುಟುಂಬದ ರೀತಿಯಲ್ಲಿ ಅಧ್ಯಕ್ಷ ರಾಜು ಕಾನಸೂರು ನೇತೃತ್ವದಲ್ಲಿ ಕಾರ್ಯಕ್ರಮ ಸಂಘಟಿಸಿರುವುದು ಮಾದರಿ ಎಂದರು.
ಡಿ.ಎಸ್.ಪಿ ಕೆ.ಎಲ್.ಗಣೇಶ ಮಾತನಾಡಿ, ಸಂಘಟನೆ ರೂಪಿಸುವುದು ಸುಲಭದ ಕೆಲಸವಲ್ಲ. ಹಲವು ದಿನದ ಪರಿಶ್ರಮದಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಸಾಧ್ಯ. ಅಸೋಸಿಯೇಷನ್ ಅಧ್ಯಕ್ಷ ರಾಜು ಕಾನಸೂರು ಮುಂದಾಳತ್ವದಲ್ಲಿ ಉತ್ತಮವಾಗಿ ಮುನ್ನಡೆಯುತ್ತಿರುವುದು ಖುಷಿಯ ವಿಷಯ ಎಂದರು.
ಶಿರಸಿ ಪೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಕ್ರೀಡೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಇತರ ತಾಲೂಕು ಹಾಗೂ ಜಿಲ್ಲೆಗಳ ಸಂಘಟನೆಗೆ ಮಾದರಿ ಎಂದರು.
ತಾಲೂಕಾ ಫೋಟೋಗ್ರಾಫರ್ ಹಾಗೂ ವಿಡಿಯೋ ಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ರಾಜು ಕಾನಸೂರ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Heart Attack : ಬಿಇಒ ಕಚೇರಿ SDAಗೆ ಹೃದಯಾಘಾತ; ಹಿರಿಯ ಅಧಿಕಾರಿ ಕಿರುಕುಳ ಕಾರಣ ಎಂದು ಶವ ಇಟ್ಟು ಪ್ರತಿಭಟನೆ
ಜಿಲ್ಲೆಯ ಹಿರಿಯ ಛಾಯಾಗ್ರಾಹಕರಾದ ಲಕ್ಷ್ಮೀನಾರಾಯಣ ಭಟ್ಟ, ಸುಧೀರ ಶಾನಭಾಗ, ಅಶೋಕ ಬಾಳೆಕಾಯಿ, ಪ್ರಮೋದ ಜೈವಂತ ಕುಮಟಾ, ಭಟ್ಕಳ ಛಾಯಾಗ್ರಾಹಕ ಕಿರಣ ಶಾನಭಾಗ, ಹೊನ್ನಾವರ ಛಾಯಾಗ್ರಾಹಕ ಸುರೇಶ ಹೊನ್ನಾವರ, ಕಾರವಾರ ಛಾಯಾಗ್ರಾಹಕ ಸುರೇಶ ಜೋಗಳೇಕರ, ಅಂಕೋಲಾ ಛಾಯಾಗ್ರಾಹಕ ಶ್ರೀನಿವಾಸ ರಾಮನಾಥಕರ, ದಾಂಡೇಲಿ ಛಾಯಾಗ್ರಾಹಕ ಉದಯಕುಮಾರ.ಜಿ.ಎಮ್, ಹಳಿಯಾಳ ಛಾಯಾಗ್ರಾಹಕ ಜಯಪ್ರಕಾಶ್.ಎಂ, ಯಲ್ಲಾಪುರ ಛಾಯಾಗ್ರಾಹಕ ಗಣಪತಿ ಹೆಗಡೆ, ಸಿದ್ದಾಪುರ ಛಾಯಾಗ್ರಾಹಕ ಜೀವನ ಪೈ, ಪೊಲೀಸ್ ಇಲಾಖೆ ಡಿ. ದರ್ಜೆ ನೌಕರ ಮಂಜುನಾಥ ಹಾಗೂ ಅಂಬ್ಯುಲೆನ್ಸ್ ಚಾಲಕ ಬಾಬಣ್ಣ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಪಿ.ಎ ಬೆಂಗಳೂರಿನ ಜಂಟಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್ಟ ಮಾತನಾಡಿದರು.
ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾತನ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಸಂತೋಷ ಶಿರ್ಸಿಕರ , ಕಾರ್ಯದರ್ಶಿ ಜಗದೀಶ ಜೈವಂತ ಉಪಸ್ಥಿತರಿದ್ದರು.
ಇದನ್ನೂ ಓದಿ: Flipkart: ಫ್ಲಿಪ್‌ಕಾರ್ಟ್‌ನ 10ನೇ ಆವೃತ್ತಿಯ ಬಿಗ್ ಬಿಲಿಯನ್ ಡೇಸ್‌ಗೆ ಒಂದು ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ!
ಆರ್.ಕೆ.ಕುಟುಂಬದವರು ಪ್ರಾರ್ಥಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಅಸೋಸಿಯೇಷನ್ ಖಜಾಂಚಿ ಕಿರಣ ಹಾಣಜಿ ವಂದಿಸಿದರು.