Site icon Vistara News

Sirsi News: ಇದು ಒಳಿತು ಕೆಡಕುಗಳ ನಡುವಿನ ಚುನಾವಣೆ; ವಿಶ್ವೇಶ್ವರ ಹೆಗಡೆ ಕಾಗೇರಿ

PM Narendra Modi leadership has been admired by the world says Vishweshwar Hegde Kageri

ಶಿರಸಿ: ಇದು ಅಂಜಲಿ ಹಾಗೂ ಕಾಗೇರಿ ನಡುವಿನ ಚುನಾವಣೆಯಲ್ಲ, ಕಾಂಗ್ರೆಸ್ (Congress) ಹಾಗೂ ಬಿಜೆಪಿ‌ (BJP) ನಡುವಿನ ಚುನಾವಣೆ. ದೇಶಕ್ಕೆ ಆಗಲಿರುವ ಒಳಿತು ಕೆಡಕುಗಳ ನಡುವಿನ ಚುನಾವಣೆ ಎಂದು ಮಾಜಿ ಸ್ಪೀಕರ್, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ (Sirsi News) ಹೇಳಿದರು.

ತಾಲೂಕಿನ‌ ಬದನಗೋಡಿನಲ್ಲಿ ನಡೆದ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ‌ ಮೋದಿ ಅವರ ನಾಯಕತ್ವವನ್ನು ವಿಶ್ವವೇ ಮೆಚ್ಚಿಕೊಂಡಿದೆ. ಅವರ ದೂರದೃಷ್ಟಿ ಯೋಜನೆಗಳು ದೇಶವನ್ನು ಬಲಗೊಳಿಸಿವೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಂತೆ ದಿವಾಳಿಯಾಗಿಸಿಲ್ಲ ಎಂದರು.

ಕಳೆದ ಹತ್ತು ವರ್ಷದಲ್ಲಿ ಭಾರತಕ್ಕೆ ಪ್ರಪಂಚದ ಮಟ್ಟದಲ್ಲಿ ಒಂದು ವಿಶಿಷ್ಟ ಹೊಳಪು ತಂದುಕೊಟ್ಟವರು ಪ್ರಧಾನಿ ಮೋದಿ. ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು. ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಂದಾಗಿ‌ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

ಸಮೃದ್ಧ, ನೆಮ್ಮದಿಯ ಸಮಾಜ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಪ್ರತಿಯೊಂದು ಮತವೂ ದೇಶಕ್ಕೆ ಹಿತ. ದೇಶಕ್ಕಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಾಗಿ ಮತ ಚಲಾಯಿಸಬೇಕು ಎಂದು ಕೋರಿದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿ, ಅಸಂಖ್ಯ ದೇಶಭಕ್ತ ಕಾರ್ಯಕರ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆಯ ಮೂಲಕ ಬೆಳೆದ ಶಿಸ್ತಿನ ಪಕ್ಷ ನಮ್ಮ ಭಾರತೀಯ ಜನತಾ ಪಕ್ಷ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರೆಲ್ಲ ಒಟ್ಟಾಗಿ ನಮ್ಮ ನಮ್ಮ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

ಈ ವೇಳೆ ಎಸ್.ಎನ್. ಭಟ್ಟ, ವಿ.ಎಂ. ಹೆಗಡೆ, ರಮೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಶ್ರೀರಾಮ ನಾಯ್ಕ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version