ಶಿರಸಿ: ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವವು (Tripurakhya Deepotsava) ವಿಜೃಂಭಣೆಯಿಂದ ನಡೆಯಿತು.
ದೀಪೋತ್ಸವದ ಅಂಗವಾಗಿ ಮಠದಲ್ಲಿ ಹತ್ತು ಸಾವಿರಕ್ಕೂ ಅಧಿಕ ದೀಪಗಳನ್ನು ಬೆಳಗಲಾಯಿತು. ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮೀನರಸಿಂಹ ದೇವರ ಪುಷ್ಪ ರಥೋತ್ಸವ ನಡೆಯಿತು.
ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?
ನಂತರ ಪಲ್ಲಕ್ಕಿ ಉತ್ಸವ, ರಾಜೋಪಚಾರ ಪೂಜೆ, ಅಷ್ಟಾವಧಾನ ಸೇವೆ, ಶ್ರೀ ಕ್ಷೇತ್ರಪಾಲ ದೇವರ ದೀಪೋತ್ಸವ ನಡೆಯಿತು. ಬೆಳಿಗ್ಗೆ ಶ್ರೀ ನರಸಿಂಹ ಮಂತ್ರ ಹವನ ನಡೆಯಿತು.
ಸುತ್ತಮುತ್ತ ಗ್ರಾಮಗಳ ಭಕ್ತಾಧಿಗಳು, ಶ್ರೀ ಮಠದ ವಿದ್ಯಾರ್ಥಿಗಳು ಹಾಗೂ ಎಲ್ಲರೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.