Site icon Vistara News

Veda Shibira : ವೇದಾಧ್ಯಯನದಿಂದ ಐಎಎಸ್‌, ಐಪಿಎಸ್‌ ಬರೆಯುವವರಿಗೂ ಅನುಕೂಲ ಎಂದ ಶ್ರೀನಿವಾಸ ಹೆಬ್ಬಾರ್‌

#image_title

ಶಿರಸಿ: ವೇದಾಧ್ಯಯನದಿಂದ ಐಎಎಸ್, ಐಪಿಎಸ್ ಓದಲೂ ಸಹಾಯವಾಗುತ್ತದೆ ಎಂದು ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ನ ನಿರ್ದೇಶಕ ಶ್ರೀನಿವಾಸ ಹೆಬ್ಬಾರ್ ಹೇಳಿದರು. ಶುಕ್ರವಾರ ಅವರು ‌ಕೊಳಗೀಬೀಸ್ ಮಾರುತಿ ಮಂದಿರದಲ್ಲಿ ನಡೆಸಲಾಗುತ್ತಿರುವ ವೇದ ಅಧ್ಯಯನ ಶಿಬಿರದಲ್ಲಿ (Veda Shibira) ಪಾಲ್ಗೊಂಡು ‌ಮಾತನಾಡಿದರು.

ವೇದ ಅಧ್ಯಯನ ಮಾಡಿದರೆ ಗೌರವ ಇಲ್ಲ ಭಾವನೆ ಇಂದು ಇಲ್ಲ. ವೇದ ಓದಿದವರಿಗೆ ಎಲ್ಲಿಲ್ಲದ ಗೌರವ ಇದೆ. ದೇವರ ಪೂಜಾ‌ ಮಂತ್ರದಿಂದ ಹಿಡಿದು ಎಲ್ಲವನ್ನೂ ಕಲಿತರೆ ಸಮಾಜದಲ್ಲೂ ಗೌರವ ಹಾಗೂ ಉದ್ಯೋಗವೂ ಆಗುತ್ತದೆ ಎಂದರು.

ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಮಕ್ಕಳು ವೇದ ಅಧ್ಯಯನ ಶಿಬಿರಕ್ಕೆ ಆಗಮಿಸಿದ್ದು ಖುಷಿಯಾಗುತ್ತಿದೆ ಎಂದ ಅವರು, ದೇಶದ ಪ್ರಧಾನ‌ ಮಂತ್ರಿಗಳೂ ಕೂಡ ವೇದಕ್ಕೆ ತಲೆ ಬಾಗುತ್ತಾರೆ ಎಂದರು.

“ವೇದ ಅಧ್ಯಯನ ಮಾಡಿದರೆ ದೇಶದ ಎಲ್ಲೆಡೆ ಗೌರವ ಇದೆ. ಹುಟ್ಟಿನಿಂದ ಸಾವು, ಸಾವಿನ ಆಚೆಗೂ ವೈದಿಕರು ಕರ್ಮಾಚರಣೆ ಮಾಡಲು ಬೇಕು” ಎಂದ ಹೆಬ್ಬಾರ್, “ದೊಡ್ಡವರಾದ ಬಳಿಕ ಯಾರು ಯಾವುದೇ ಹುದ್ದೆಗೆ ಹೋದರೂ ಬಡವರಿಗೆ, ದೇವಾಲಯಗಳಿಗೆ, ಸಾಮಾಜಿಕ ಮಹತ್ವದ ಸಂಗತಿಗಳಿಗೆ ನಮ್ಮದೇ ಆದ ಕೊಡುಗೆ ನೀಡಬೇಕು. ಅಂಥ ಗುಣವನ್ನು ಬೆಳಸಿಕೊಳ್ಳಬೇಕು” ಎಂದೂ ಕಿವಿ ಮಾತು ಹೇಳಿದರು.

ಈ ವೇಳೆ ಪ್ರಮುಖರಾದ ಕಿರಣ ಚಿತ್ರಕಾರ, ಅನಿಲ್‌ ದೇವನಳ್ಳಿ, ನಾಗರಾಜ ಶೆಟ್ಟಿ, ಶ್ರೀಧರ ಹೆಗಡೆ ಇಳ್ಳುಮನೆ, ವಿ.ಆರ್.ಭಟ್ಟ ಟೊಣ್ಣೆಮನೆ, ಉಮಾಪತಿ ಹೆಗಡೆ ಇಳ್ಳುಮನೆ, ತಾ.ಪಂ.ಮಾಜಿ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ಮನಳ್ಳಿ, ಶ್ರೀಧರ ಭಟ್ಟ ಕೊಳಗಿಬೀಸ್ ಇತರರು ಇದ್ದರು. ಕಳೆದ ಹತ್ತು ದಿನಗಳಿಂದ ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು ವೇದ ಕಲಿಕೆಗೆ ಆಗಮಿಸಿದ್ದು, ಇನ್ನೂ ಹತ್ತು ದಿನ ಶಿಬಿರ ನಡೆಯಲಿದೆ.

ಇದನ್ನೂ ಓದಿ : Sirsi News: ಮನಸ್ಸಿದ್ದರೆ ಮಾರ್ಗ ಅನ್ನುವುದಕ್ಕೆ ಶ್ರೀನಿವಾಸ್ ಹೆಬ್ಬಾರ್ ಅವರೇ ಉದಾಹರಣೆ: ಹರಿಪ್ರಕಾಶ್ ಕೋಣೆಮನೆ

Exit mobile version