ಬೆಂಗಳೂರು: ಸಪ್ತಕ ಸಂಸ್ಥೆ (Sapthak) ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿ.ಆರ್.ಸಿ ಸಭಾಭವನದಲ್ಲಿ ನವೆಂಬರ್ 19ರಂದು ಸಂಜೆ 5 ಗಂಟೆಗೆ ವಿಶೇಷ ನೃತ್ಯ-ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಖ್ಯಾತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹೈದರಾಬಾದ್‌ನ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಮುಕ್ತಿಶ್ರೀ ಅವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ. ಇವರ ನೃತ್ಯಕ್ಕೆ ಯುವ ಕಲಾವಿದರಾದ ಮಜಗಾಂವ್ಕರ್ ಕುಲಕರ್ಣಿ – ತಬಲಾ, ಕೃಷ್ಣ ಸಾಳುಂಕೆ – ಪಖಾವಾಜ್, ನಾಗೇಶ ಅಡಗಾಂವ್ಕರ್ – ಗಾಯನ, ಅಭಿಷೇಕ್ ಶಿಂಕರ್ – ಹಾರ್ಮೋನಿಯಂ, ಕುಮಾರಿ ಆಯುಷಿ ದೀಕ್ಷಿತ್ – ಪದಹಂತ ಅವರ ಹಿಮ್ಮೇಳ ಜತೆಗೂಡಿ ದೃಶ್ಯ ಶ್ರಾವ್ಯದ ಸವಿಯೂಟ ನೀಡಲಿದೆ.
ನಂತರ ಮುಂಬೈನ ವಿಶ್ವವಿಖ್ಯಾತ ಬಹುಶ್ರುತ ಸಂಗೀತ ವಿದುಷಿ ಹಾಗೂ ಖ್ಯಾತ ಗಾಯಕಿ ಅಶ್ವಿನಿ ಭಿಡೆ ದೇಶಪಾಂಡೆ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಪಂ. ರವೀಂದ್ರ ಯಾವಗಲ್ ಅವರು ತಬಲಾ ವಾದಕರಾಗಿ ಹಾಗೂ ಪಂ. ವ್ಯಾಸಮೂರ್ತಿ ಕಟ್ಟಿ ಅವರು ಹಾರ್ಮೋನಿಯಂ ವಾದಕರಾಗಿ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದ್ದಾರೆ.
ಇದನ್ನೂ ಓದಿ | Tips for Healthy Travel: ಪ್ರವಾಸ ಮಾಡುತ್ತಿದ್ದೀರಾ? ಆಹಾರದ ಸಮತೋಲನಕ್ಕಾಗಿ ಹೀಗೆ ಮಾಡಿ
ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ, ದೇಣಿಗೆ ಸಂಗ್ರಹ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಸಪ್ತಕ ಸಂಸ್ಥೆ ಸಂಚಾಲಕ ಜಿ.ಎಸ್. ಹೆಗಡೆ ಮೊಬೈಲ್ -7019434992 / 9535511888 ಸಂಪರ್ಕಿಸಬಹುದು.