ಯಲ್ಲಾಪುರ: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು, ಮಕ್ಕಳ ಸಮಗ್ರ ವಿಕಾಸ ವೇದಿಕೆ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯ (77th Independence Day Celebration) ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ (State Level) ವೇಷದೊಡನೆ ಭಾಷಣ ಸ್ಪರ್ಧೆಯಲ್ಲಿ ತಾಲೂಕಿನ ಶ್ರೀರಕ್ಷಾ ಶಿವಾನಂದ ವೆರ್ಣೇಕರ ಪ್ರಥಮ ಸ್ಥಾನ (First Place) ಪಡೆದಿದ್ದಾಳೆ.
1 ರಿಂದ 5 ನೇ ಹಾಗೂ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ವೇಷದೊಡನೆ ಭಾಷಣ ಸ್ಪರ್ಧೆಯನ್ನು ಆನ್‌ಲೈನ್‌ನಲ್ಲಿ ಆಯೋಜನೆ ಮಾಡಲಾಗಿತ್ತು. ಆನ್‌ಲೈನ್ ಮೂಲಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ನ ತಾಂತ್ರಿಕ ಮುಖ್ಯಸ್ಥ ಚಂದ್ರಶೇಖರ ನಾಯಕ, ಇಂದಿನ ಮಕ್ಕಳಲ್ಲಿ ಸ್ವಾತಂತ್ರ್ಯ ನಾಯಕರ ಮೌಲ್ಯಗಳನ್ನು ಬೆಳೆಸಲು ಈ ವೇಷದೊಡನೆ ಭಾಷಣ ಸ್ಪರ್ಧೆ ಸ್ಫೂರ್ತಿ ನೀಡುತ್ತದೆ ಎಂದರು.
ಇದನ್ನೂ ಓದಿ: Yashasvi Jaiswal: ಚೊಚ್ಚಲ ಟಿ20 ಶತಕ ಬಾರಿಸಿ ಗಿಲ್ ದಾಖಲೆ ಮುರಿದ ಜೈಸ್ವಾಲ್
ಮಕ್ಕಳ ಸಮಗ್ರ ವಿಕಾಸ ವೇದಿಕೆಯ ಹೊ.ರಾ. ಪರಮೇಶ್ವರ ಉಪನ್ಯಾಸ ನೀಡಿ, ಮಾತನಾಡಿ, ಮಕ್ಕಳಲ್ಲಿ ಭಾಷಣ ಕಲೆ ಮೂಡಿಸಲು ಬೇಕಾಗುವ ತಂತ್ರಗಳನ್ನು ತಿಳಿಸಿದರು.
6 ರಿಂದ 10 ನೇ ತರಗತಿಯ ಹಿರಿಯ ವಿಭಾಗದಲ್ಲಿ ಶ್ರೀರಕ್ಷಾ ಶಿವಾನಂದ ವೆರ್ಣೇಕರ ಪ್ರಥಮ, ನಂದಿತಾ ಜಿ.ಎನ್. ದ್ವಿತೀಯ ಹಾಗೂ ಪಂಚಮಿ ಮಹೇಶ ಭಟ್ಟ ತೃತೀಯ ಬಹುಮಾನವನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್‌ನ ರಾಜ್ಯಾಧ್ಯಕ್ಷ ಪಿ. ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡೆ ಹಾಗೂ ಸತೀಶ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Gold Rate Today: ಹಬ್ಬದ ಸೀಸನ್ ಮುನ್ಸೂಚನೆ, ಇಳಿಯಿತು ಚಿನ್ನದ ಬೆಲೆ
ವೇದಿಕೆ ಮುಖ್ಯಸ್ಥೆ ಆಶಾ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಆರ್.ಎಸ್. ಪಾಟೀಲ ಸ್ವಾಗತಿಸಿದರು. ಆರ್. ಆಶಾ ನಿರೂಪಿಸಿದರು.