ಯಲ್ಲಾಪುರ: ಇಲ್ಲಿಯ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Result) ಶೇ. 98.33 ಫಲಿತಾಂಶ ಪಡೆದುಕೊಂಡಿದ್ದು, ಶಾಲೆಯ ವಿದ್ಯಾರ್ಥಿ ಆದರ್ಶ ಹೆಗಡೆಕಟ್ಟೆ 622 ಅಂಕ ಪಡೆದುಕೊಂಡಿದ್ದಾರೆ.
ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯು ಶೇ. 90.47 ಫಲಿತಾಂಶ ಪಡೆದುಕೊಂಡಿದ್ದು, ಗುಣಾತ್ಮಕ ಫಲಿತಾಂಶ ಶೇ. 82.47 ದಾಖಲಿಸಿದೆ.
ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಟ್ಟು 60 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು, ಇವರಲ್ಲಿ 59 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.
ಶಾಲೆಯ ವಿದ್ಯಾರ್ಥಿ ಅಭಿಷೇಕ್ ಅಶೋಕ್ ಶೆಟ್ 625 ಕ್ಕೆ 620 ಅಂಕ (ಶೇ. 99.2) ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಇನ್ನೋರ್ವ ವಿದ್ಯಾರ್ಥಿ ಕುಮಾರ್ ವಿಶ್ವಾಸ್ ಸತೀಶ ಭಟ್ಟ 625 ಕ್ಕೆ 620 ( ಶೇ.99.2) ಅಂಕಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿ ಅಭಿಜ್ಞಾ ಪಟಗಾರ 625 ಕ್ಕೆ 617 ಅಂಕಗಳಿಸಿ(98.72%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರೌಢಶಾಲೆಯ ಗುಣಾತ್ಮಕ ಫಲಿತಾಂಶ ಶೇ. 94.12 ಆಗಿದ್ದು, ಡಿಸ್ಟಿಂಕ್ಷನ್ ನಲ್ಲಿ ಒಟ್ಟು 39 ವಿದ್ಯಾರ್ಥಿಗಳು ಹಾಗೂ ಪ್ರಥಮ ಶ್ರೇಣಿಯಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಕಟಣೆಯು ತಿಳಿಸಿದೆ.
ಇದನ್ನೂ ಓದಿ|SSLC Result | ಔಟ್ ಆಫ್ ಔಟ್ ಸಾಧಕರು, 626/625 ಅಂಕ ಪಡೆದವರ ಪಟ್ಟಿ ಇಲ್ಲಿದೆ ನೋಡಿ
ಕನ್ನಡ ಮಾಧ್ಯಮ ಪ್ರೌಢಶಾಲೆಯ 63 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಪ್ರತಿಕ್ಷಾ ಭಟ್ಟ ಶೇ. 95.4 ಮತ್ತು ವಿದ್ಯಾರ್ಥಿ ಭರತ ಗಾವಡೆ ಶೇ. 95.4 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಚಿನ್ಮಯ ಹೆಗಡೆ ಶೇ.94.2 ಅಂಕ ಪಡೆದು ದ್ವಿತೀಯ ಸ್ಥಾನ, ತನ್ಹಾಜ್ ಶೇಖ್ ಶೇ.92 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 11, ಪ್ರಥಮ ಶ್ರೇಣಿಯಲ್ಲಿ 33, ದ್ವಿತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲೆ ತಳಿಸಿದೆ.
ವಿದ್ಯಾರ್ಥಿಗಳ ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿರುವ ಶಾಲೆಯ ಆಡಳಿತ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ಹಾಗೂ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆಯವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿಗಳ ಶ್ರಮಕ್ಕೆ ಸಂದ ತಕ್ಕ ಪ್ರತಿಫಲ ಇದಾಗಿದೆ ಎಂದಿದ್ದಾರೆ.
ಶಾಲೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಪ್ರಾಂಶುಪಾಲರಾದ ಗಣೇಶ್ ಭಟ್ಟ , ಉಪ ಪ್ರಾಂಶುಪಾಲರಾದ ಆಸ್ಮಾ ಶೇಖ್ ಸೇರಿದಂತೆ ಶಿಕ್ಷಕ ವೃಂದದವರು ಕೂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.