ಶಿರಸಿ: ಬೆಂಗಳೂರಿನ ಜವಾಹರಲಾಲ್ ನೆಹರೂ ಸಂಶೋಧನಾ ಕೇಂದ್ರದಲ್ಲಿ ಮಟೀರಿಯಲ್ ಸೈನ್ಸ್ ವಿಭಾಗದಲ್ಲಿ ನಡೆಸಿದ ಸಂಶೋಧನೆಗೆ ಶಿರಸಿ ಮೂಲದ ಉಷಾ ಭಟ್ಟ ಅವರಿಗೆ ಡಾಕ್ಟರೇಟ್ (ಪಿಎಚ್.ಡಿ) ಲಭಿಸಿದೆ.
ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ವಿಷಯದಲ್ಲಿ “ಕ್ವಾಂಟಿಟೇಟಿವ್ ಇಮೇಜಿಂಗ್ ಆ್ಯಂಡ್ ಅಲ್ಟರ್ನೇಟಿವ್ ಪ್ರಪೋಸಲ್ಸ್ ಆನ್ ಇಮೇಜ್ ಸಿಮ್ಯುಲೇಶನ್ ಆ್ಯಂಡ್ ರೀಕನ್‌ಸ್ಟ್ರಕ್ಷನ್ ಇನ್ ಅಟಾಮಿಕ್ ರೆಸಲ್ಯೂಷನ್ ಟ್ರಾನ್ಸ್‌ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ” ಎಂಬ ಪ್ರಬಂಧ ಮಂಡಿಸಿದ್ದು, ಅದಕ್ಕೆ ಡಾಕ್ಟರೇಟ್ ದೊರಕಿದೆ.
ಶಿರಸಿ ತಾಲೂಕಿನ ಸಾಲ್ಕಣಿಯ ಶ್ರೀ ಲಕ್ಷ್ಮೀನೃಸಿಂಹ ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ವಿದ್ವಾನ್ ಮಂಜುನಾಥ ಭಟ್ಟ ಹಾಗೂ ವಿದುಷಿ ಸುಮಂಗಲಾ ಭಟ್ಟ ದಂಪತಿ ಪುತ್ರಿಯಾದ ಇವರು ಸುಮಂತ್ ಹೆಗಡೆ ಸೂರಿಮನೆ ಅವರ ಪತ್ನಿ. ಚುಟುಕು, ಕವನ ರಚನೆ, ವೀಣೆ ವಾದನ ಹೀಗೆ ಬಹುಮುಖ ಪ್ರತಿಭೆಯುಳ್ಳ ಇವರು ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನೂ ಪಡೆದಿದ್ದಾರೆ.
ಮಹಾಪ್ರಬಂಧ ಪರೀಕ್ಷಕರಲ್ಲೊಬ್ಬರಾದ ಜರ್ಮನಿಯ ಖ್ಯಾತ ವಿಜ್ಞಾನಿ ರಾಫೆಲ್ ಬೊರ್ಕೊಸ್ಕಿ ಅವರು “ನ್ಯೂ ಅಪ್ರೋಚಸ್ ಆರ್ ಹೈಲಿ ಇಂಟ್ರುಗಿಂಗ್ ಆ್ಯಂಡ್ ವೆರಿ ಬೋಲ್ಡ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ, ಉನ್ನತ ಸಂಶೋಧನೆಗಾಗಿ ಉಷಾ ಭಟ್ಟ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ.
ಇದನ್ನೂ ಓದಿ | Gururaj Karajagi : ಇಂದಿನ ಶಿಕ್ಷಣಕ್ಕೆ 1ನೇ ಶತಮಾನದ ಉದ್ದೇಶ ತರಬೇಕು