Site icon Vistara News

Hariprakash Konemane: ಯಕ್ಷಗಾನ ಅಕಾಡೆಮಿಯಲ್ಲಿ ಉತ್ತರ ಕನ್ನಡ ಕಡೆಗಣನೆ; ಹರಿಪ್ರಕಾಶ್‌ ಕೋಣೆಮನೆ ಖಂಡನೆ

Hariprakash Konemane

ಯಲ್ಲಾಪುರ: ರಾಜ್ಯ ಸರ್ಕಾರವು ಕರ್ನಾಟಕ ಯಕ್ಷಗಾನ ಅಕಾಡೆಮಿಗೆ (Karnataka Yakshagana Academy) ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಶನಿವಾರ ಆದೇಶ ಹೊರಡಿಸಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಕಡೆಗಣಿಸಿರುವುದನ್ನು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಯಕ್ಷಗಾನ ಕಲೆಯು ಬಡಗು ತಿಟ್ಟು, ಘಟ್ಟದ ಕೋರೆ, ಮೂಡಲಪಾಯ ಹೀಗೆ ಅನೇಕ ಪ್ರಕಾರಗಳನ್ನು ಹೊಂದಿದ್ದು, ಅನೇಕ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪರಂಪರೆಯು ತುಂಬಾ ವಿಶೇಷವಾಗಿದ್ದು, ಯಕ್ಷಗಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಪ್ರಮುಖ ಜಿಲ್ಲೆ ನಮ್ಮದು. ಯಕ್ಷಗಾನ ಕಲೆಗೆ ಪದ್ಮಶ್ರೀ ಪ್ರಶಸ್ತಿ ತಂದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೂ ಸೇರಿದಂತೆ ಜಿಲ್ಲೆಯ ಅನೇಕ ಖ್ಯಾತನಾಮ ಕಲಾವಿದರು ಈ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇಷ್ಟೆಲ್ಲ ಇದ್ದೂ ಸರ್ಕಾರ ರಚಿಸಿದ ಅಕಾಡೆಮಿಯಲ್ಲಿ ಉತ್ತರ ಕನ್ನಡ ಭಾಗದ ಕಲಾವಿದರು, ಕಲಾ ಪೋಷಕರಿಗೆ ಯಾವುದೇ ಸ್ಥಾನಮಾನ ನೀಡದಿರುವುದು ಆಕ್ಷೇಪಾರ್ಹ ಸಂಗತಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ಅಂಕಣ: ಸಿಎಎ ಏಕೆ ಬೇಕು ಎನ್ನುತ್ತಿರುವವರು ʼರಜಾಕಾರ್ʼ ಸಿನಿಮಾ ನೋಡಿ

ಈ ನೇಮಕಾತಿಯನ್ನು ತಡೆಹಿಡಿದು, ಅಕಾಡೆಮಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಹಿರಿಯ ಕಲಾವಿದರುಗಳಿದ್ದು, ಅವರಿಗೂ ಪ್ರಮುಖ ಸ್ಥಾನ ಒದಗಿಸಬೇಕು ಮತ್ತು ಯಕ್ಷಗಾನದ ಬೇರೆ ಬೇರೆ ಪ್ರಕಾರಗಳ ಬೇರೆ ಜಿಲ್ಲೆಗಳ ಕಲಾವಿದರಿಗೂ ಅವಕಾಶ ನೀಡಬೇಕು. ಜೊತೆಗೆ ಯಕ್ಷಗಾನ ಕಲೆಯಲ್ಲಿ ಮಹಿಳೆಯರೂ ಸಾಕಷ್ಟು ಕೊಡುಗೆ ನೀಡಿದ್ದು, ಅವರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Exit mobile version