ಯಲ್ಲಾಪುರ: ಕರ್ನಾಟಕ ವಿಶ್ವವಿದ್ಯಾಲಯದ 2023-24ನೇ ಸಾಲಿನ ಬಿಸಿಎ ಒಂದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಟ್ಟಣದ ವಿಶ್ವದರ್ಶನ ಬಿಸಿಎ ಕಾಲೇಜು ಶೇ. 100 ರಷ್ಟು ಫಲಿತಾಂಶ (Uttara Kannada News) ಸಾಧಿಸಿದೆ.
ಇದನ್ನೂ ಓದಿ: Job News: 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆಪಿಎಸ್‌ಸಿಗೆ ಪ್ರಸ್ತಾವನೆ; ಎಲ್ಲಿ ಎಷ್ಟು ಹುದ್ದೆ?
ಕಾಲೇಜಿನ 69 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಿರೀಕ್ಷಾ ಆಚಾರ್ಯ 648/700 (92.57%) ಅಂಕದೊಂದಿಗೆ ಪ್ರಥಮ, ಮೇಘನಾ ಭಟ್ 647/700 (92.43%) ಅಂಕದೊಂದಿಗೆ ದ್ವಿತೀಯ, ಕೆ. ವೈ. ಕಾವ್ಯ 637/700 (91.00%) ಅಂಕದೊಂದಿಗೆ ತೃತೀಯ ಸ್ಥಾನ ಹಾಗೂ ತಿಲಕ್ ಬಾಂದೇಕರ್ 629/700 (89.86%) ಅಂಕದೊಂದಿಗೆ ಚತುರ್ಥ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ: Job Alert: 2000 ಲೈನ್‌ಮೆನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ; ಸಚಿವ ಕೆ.ಜೆ. ಜಾರ್ಜ್ ಘೋಷಣೆ
ಅಲ್ಲದೆ 28 ವಿದ್ಯಾರ್ಥಿಗಳು 80%, 18 ವಿದ್ಯಾರ್ಥಿಗಳು 70%, 24 ವಿದ್ಯಾರ್ಥಿಗಳು 60% ಕ್ಕಿಂತ ಹೆಚ್ಚು ಅಂಕದೊಂದಿಗೆ ಉತ್ತೀರ್ಣಗೊಂಡು ತಾಂತ್ರಿಕ ಶಿಕ್ಷಣದಲ್ಲಿ ಯಶಸ್ಸು ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ.