Site icon Vistara News

Uttara Kannada News: ಯಲ್ಲಾಪುರದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

75th Republic Day celebration in Yallapur

ಯಲ್ಲಾಪುರ: ತಾಲೂಕಿನ ಕಾಳಮ್ಮ ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ (75th Republic Day) ಅಂಗವಾಗಿ ಧ್ವಜಾರೋಹಣವನ್ನು ತಹಸೀಲ್ದಾರ್‌ ಗುರುರಾಜ್‌ ಎಂ. ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್‌, ನಮ್ಮದು ಸಂಪೂರ್ಣ ವಿಶ್ವದಲ್ಲಿ ಅತ್ಯಂತ ಅಗ್ರಮಾನ್ಯದಲ್ಲಿರುವ ದೇಶವಾಗಿದೆ. ನಮ್ಮ ನೆಲ, ಜಲ, ಸಂಸ್ಕೃತಿಯನ್ನು ಗೌರವಿಸುವಂತ ಸಂಸ್ಕಾರ ನಮ್ಮ ದೇಶದ ಮಣ್ಣಿನ ಗುಣವಾಗಿದೆ. ಡಾ. ಬಿ.ಆರ್‌. ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ ಅವರಂತಹ ಮಹನೀಯರ ಆದರ್ಶಗಳು ನಮಗೆ ಪ್ರೇರಣೆಯಾಗಲಿ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್‌ ಗುರುರಾಜ್‌ ಎಂ., ಜಗತ್ತಿನ ಅತ್ಯುನ್ನತ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಶ್ರೇಷ್ಠ ಗುಣಗಳನ್ನು ಅಳವಡಿಸಿ ನಮ್ಮ ಸಂವಿಧಾನವನ್ನು ರೂಪಿಸಿದ ಡಾ. ಅಂಬೇಡ್ಕರ್‌ ಅವರನ್ನು ನಾವೆಲ್ಲ ಇಂದು ನೆನೆಯಲೇಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Padma Shri: ಭತ್ತದ ತಳಿಯ ಸಂರಕ್ಷನನ್ನು ಅರಸಿ ಬಂತು ಪದ್ಮಶ್ರೀ ಗೌರವ

ಇದೇ ಸಂದರ್ಭದಲ್ಲಿ ತಾನ್‌ಸೇನ್‌ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಗಣಪತಿ ಭಟ್‌ ಹಾಸಣಗಿ, ಗ್ರಾಮೀಣ ಭಾಗದಲ್ಲಿ ಸೇವೆಗಾಗಿ ಡಾ. ನಾಗರಾಜ್ ಬಿ.ಎಚ್‌. ಹಾಗೂ ನಾಟಿ ವೈದ್ಯ ನಾರಾಯಣ ಹೆಗಡೆ ಗವೇಗುಳಿ ಅವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಅಂತೆಯೇ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ಶ್ರೀದೇವಿ ಗಂಗಾ ನಾಯಕ ಹಾಗೂ ವಿಶೇಷ ಚೇತನರ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಜಯಶ್ರೀ ಮಂಜುನಾಥ ಮೈಲಾರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.

ನಂತರ ನಡೆದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ವೇದಿಕೆಯಲ್ಲಿ ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಸಿಪಿಐ ರಂಗನಾಥ ನೀಲಮ್ಮನವರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸುನಂದಾ ದಾಸ್ ಹಾಗೂ ಜ್ಯೋತಿ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Sachin Tendulkar: ಸಫಾರಿ ವೇಳೆ ಮೂರನೇ ತಲೆ ಮಾರಿನ ಹುಲಿಯನ್ನು ತೋರಿಸಿದ ಸಚಿನ್​ ತೆಂಡೂಲ್ಕರ್​

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಸಂಜೀವ್ ಕುಮಾರ್ ಹೊಸ್ಕೇರಿ ನಿರ್ವಹಿಸಿದರು. ಶಿಕ್ಷಣ ಸಂಯೋಜಕ ಸಂತೋಷ ಜಿಗಳೂರು ವಂದಿಸಿದರು.

Exit mobile version