ಕಾರವಾರ: ಭಟ್ಕಳ ತಾಲೂಕಿನ ಮುಂಡಳ್ಳಿ ಮೂಲದ, ಹಾಲಿ ಹೆಬಳೆ ಹೆರ್ತಾರ ಗ್ರಾಮದ ನಿವಾಸಿಯಾಗಿರುವ ಕಲ್ಪನಾ ಮಾಸ್ತಿ ಮೊಗೇರ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಬಡ ಮೀನುಗಾರ ಕುಟುಂಬದಲ್ಲಿ ಬೆಳೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರತಿಷ್ಠಿತ ಸಿಎ ಪರೀಕ್ಷೆಯಲ್ಲಿ ಸಾಧನೆಗೈದು ಇಡೀ ಸಮುದಾಯಕ್ಕೆ ಹೆಮ್ಮೆ (Uttara Kannada News) ತಂದಿದ್ದಾಳೆ.
ಕಳೆದ ಮೇ ತಿಂಗಳಲ್ಲಿ ಜರುಗಿದ ಸಿಎ ಪರೀಕ್ಷೆಯನ್ನು ಕಲ್ಪನಾ ಎದುರಿಸಿದ್ದರು. 2022ರಲ್ಲಿ ಗ್ರೂಪ್ 1 ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದೀಗ ಗ್ರೂಪ್ 2 ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Anant Ambani Wedding: ಅನಂತ್ ಅಂಬಾನಿ ಮದುವೆಯಲ್ಲಿ ಯುವಕರೂ ನಾಚುವಂತೆ ಸ್ಟೆಪ್ಸ್ ಹಾಕಿದ ರಜನಿಕಾಂತ್!
ಕಲ್ಪನಾ ಮೂಲತಃ ಮುಂಡಳ್ಳಿಯ ಮೊಗೇರಕೇರಿಯವರಾದ ಸೀತಾ ಮತ್ತು ಮಾಸ್ತಿ ಮೊಗೇರ ದಂಪತಿಯ ಪುತ್ರಿ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಕಲ್ಪನಾ ಮೊಗೇರ ಮುಂಡಳ್ಳಿ ಮೊಗೇರಕೇರಿ ಶಾಲೆಯಲ್ಲಿ ಒಂದನೇ ತರಗತಿ, ಎರಡರಿಂದ ಐದನೇ ತರಗತಿವರೆಗೆ ಹೆರ್ತಾರ ಶಾಲೆಯಲ್ಲಿ, ಆರರಿಂದ ಏಳನೇ ತರಗತಿವರೆಗೆ ತೆಂಗಿನಗುಂಡಿ ಶಾಲೆಯಲ್ಲಿ ಓದಿದ ಕಲ್ಪನಾ ನಂತರದ ಶಿಕ್ಷಣವನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ಕಲ್ಪನಾ ತಂದೆ ಮಾಸ್ತಿ ಮೊಗೇರ ವೃತ್ತಿಯಲ್ಲಿ ಮೀನುಗಾರರಾಗಿದ್ದು, ಮಗಳಿಗೆ ಉತ್ತಮ ಶಿಕ್ಷಣ ಒದಗಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ.
ತಾನು ಸಿಎ ಪರೀಕ್ಷೆಯಲ್ಲಿ ಪಾಸಾಗಿದ್ದರ ಹಿಂದೆ ತುಂಬಾ ಶ್ರಮವಿದೆ. ಯಾರ ಸಹಾಯ ಪಡೆಯದೇ ಪಾಸಾಗಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಕಲ್ಪನಾ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: KEA Exam: ಕ್ಯಾಮೆರಾ ಕಣ್ಗಾವಲಿನಲ್ಲಿ ಕೆಇಎ ಸ್ಪರ್ಧಾತ್ಮಕ ಪರೀಕ್ಷೆ; ವೆಬ್ ಕಾಸ್ಟಿಂಗ್ ಪರಿಶೀಲಿಸಿದ ಉನ್ನತ ಶಿಕ್ಷಣ ಸಚಿವ
ಕಲ್ಪನಾ ಸಾಧನೆಗೆ ಕುಟುಂಬಸ್ಥರು, ಬಂಧು-ಮಿತ್ರರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.