Site icon Vistara News

Uttara Kannada News: ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಮೊಬೈಲ್ ಕೊಡುಗೆ

Anganwadi workers and supervisors will get the new mobile in uttara Kannada district

ಕಾರವಾರ: ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅನುಷ್ಠಾನಗೊಂಡಿರುವ ಪೋಷಣ್ ಅಭಿಯಾನ ಕಾರ್ಯಕ್ರಮದ ದೈನಂದಿನ ಪ್ರಗತಿಯನ್ನು ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ದಾಖಲಿಸಲು ಹಾಗೂ ಇತರೆ ತಾಂತ್ರಿಕ ವರದಿಗಳನ್ನು ನೀಡಲು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರಿಗೆ ಹೊಸ ಸ್ಯಾಮ್ಸಂಗ್ ಮೊಬೈಲ್‌ಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಜಿಲ್ಲೆಯ (Uttara Kannada News) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಕೈ ಸೇರಲಿದೆ.

ಈಗಾಗಲೇ ಅಂಕೋಲಾ ತಾಲೂಕಿನ 36 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ, ಭಟ್ಕಳದ 235, ಹಳಿಯಾಳದ 256, ಹೊನ್ನಾವರದ 341, ಜೋಯಿಡಾದ 220, ಕಾರವಾರದ 253, ಕುಮಟಾದ 293, ಮುಂಡಗೋಡದ 201, ಸಿದ್ದಾಪುರದ 237, ಶಿರಸಿಯ 389, ಯಲ್ಲಾಪುರದ 205 ಸೇರಿದಂತೆ ಒಟ್ಟು 2782 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 84 ಮೇಲ್ವಿಚಾರಕರಿಗೆ ಹಾಗೂ ಬಫರ್ ಸ್ಟಾಕ್‌ನಲ್ಲಿನ 143 ಸೇರಿದಂತೆ ಒಟ್ಟು 3009 ಹೊಸ ಮೊಬೈಲ್‌ಗಳು ಜಿಲ್ಲೆಗೆ ಪೂರೈಕೆಯಾಗಿದ್ದು, ಸಂಬಂಧಪಟ್ಟ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಈ ಮೊಬೈಲ್‌ಗಳಿಗೆ ಇಲಾಖೆಯ ಮೂಲಕವೇ ಪ್ರತೀ ತಿಂಗಳು ನಿಗದಿತ ಮೊತ್ತದ ಕರೆನ್ಸಿಯನ್ನು ರೀಚಾರ್ಜ್ ಮಾಡಲಾಗುತ್ತದೆ.

ಇದನ್ನೂ ಓದಿ: Paris Olympics 2024: ಒಲಿಂಪಿಕ್ಸ್ ಆಯೋಜನೆ; ಫ್ರಾನ್ಸ್​ ಅಧ್ಯಕ್ಷರಿಗೆ ಶುಭ ಕೋರಿದ ಪ್ರಧಾನಿ ಮೋದಿ

ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ 0-6 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯನ್ನು ಕಡಿಮೆಗೊಳಿಸುವ, ಕಿಶೋರಿಯರಲ್ಲಿ ಮತ್ತು ಮಹಿಳೆಯರಲ್ಲಿ ರಕ್ತ ಹೀನತೆಯನ್ನು ತಡೆಗಟ್ಟುವ ಮತ್ತು ಕಡಿಮೆ ತೂಕದ ಮಗುವಿನ ಜನನವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ 67,472 ಮಕ್ಕಳು ಅಂಗನವಾಡಿಗಳಲ್ಲಿ ನೋಂದಣಿಯಾಗಿದ್ದು, ಇದರಲ್ಲಿ 66,406 ಮಕ್ಕಳ ಎತ್ತರ ಮತ್ತು ತೂಕವನ್ನು ಅಳತೆ ಮಾಡಲಾಗಿದ್ದು, ಮಕ್ಕಳಲ್ಲಿನ ಆರೋಗ್ಯಕರ ಬೆಳವಣಿಗೆ ಪ್ರಮಾಣ ಶೇ.98.42 ರಷ್ಟು ಕಂಡುಬಂದಿದೆ. ಹಾಗೂ ಅ ಪರೀಕ್ಷಾ ಅವಧಿಯಲ್ಲಿ ತೀವ್ರ ಅಪೌಷ್ಠಿಕತೆಯ 262 ಮತ್ತು ಮಧ್ಯಮ ತೀವ್ರ ಅಪೌಷ್ಠಿಕತೆಯ 1178 ಮಕ್ಕಳು ಕಂಡುಬಂದಿದ್ದು, ಈ ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸಲು ಅಗತ್ಯವಿರುವ ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಎಲ್ಲಾ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಸ್ತುತ ನೀಡಿರುವ ಮೊಬೈಲ್ ಮೂಲಕ ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ, ಜಿಲ್ಲೆಯ ಅಂಗನವಾಡಿಯಲ್ಲಿರುವ ಮಕ್ಕಳ ವಯಸ್ಸು, ಎತ್ತರ, ತೂಕ ಆರೋಗ್ಯದ ಸ್ಥಿತಿಗತಿ ಸೇರಿದಂತೆ ಮಕ್ಕಳ ಸಮಗ್ರ ಆರೋಗ್ಯದ ವಿವರಗಳನ್ನು ದಾಖಲು ಮಾಡುವುದರ ಮೂಲಕ ಮಕ್ಕಳಲ್ಲಿ ಕಂಡು ಬರುವ ಅಪೌಷ್ಠಿಕತೆಗೆ ಸಕಾಲದಲ್ಲಿ ಸೂಕ್ತ ನೆರವು ನೀಡಿ, ಅವರು ಆರೋಗ್ಯವಂತರಾಗಿ ಬೆಳವಣಿಗೆ ಹೊಂದಲು ಬೇಕಾದ ಎಲ್ಲಾ ಅಗತ್ಯ ಪೂರಕ ವ್ಯವಸ್ಥೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಅಂಗನವಾಡಿಯಲ್ಲಿ ಪ್ರತಿದಿನ ನಡೆಯುವ ಚಟುವಟಿಕೆಗಳನ್ನು ಕೂಡಾ ಈ ಮೊಬೈಲ್ ಮೂಲಕ ದಾಖಲಿಸಲಾಗುತ್ತಿದ್ದು, ಪ್ರತಿದಿನ ಅಂಗನವಾಡಿ ತೆರೆದಿರುವ ಬಗ್ಗೆ, ಮಕ್ಕಳು ಹಾಜರಾಗಿರುವ ಬಗ್ಗೆ, ಮಕ್ಕಳಿಗೆ ಪೌಷ್ಠಿಕ ಉಪಹಾರ ನೀಡುವ ಕುರಿತ ಪೋಟೋಗಳನ್ನೂ ಹಾಗೂ ಗರ್ಭಿಣಿ ಸ್ತಿçÃಯರು ಮತ್ತು ಬಾಣಂತಿಯ ಅರೋಗ್ಯ ವಿಚಾರಣೆಗೆ ಪ್ರತಿದಿನ ಮನೆ ಭೇಟಿ ನೀಡುವ ವಿವರಗಳನ್ನೂ ಸಹ ಈ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದ್ದು, ಅಂಗನವಾಡಿ ಕಾರ್ಯಕತೆಯರು ಅಳವಡಿಸುವ ಈ ಎಲ್ಲಾ ಮಾಹಿತಿಯು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ನೇರವಾಗಿ ದೊರೆಯುವಂತೆ ತಂತ್ರಾಂಶ ಸಿದ್ದಪಡಿಸಲಾಗಿದೆ.

ಇದನ್ನೂ ಓದಿ: T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ಮಕ್ಕಳು ಮತ್ತು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಯೋಗಕ್ಷೇಮದ ಬಗ್ಗೆ ನಿರಂತರವಾಗಿ ನಿಗಾ ಇರಿಸುವ ಉದ್ದೇಶದಿಂದ, ನೂತನ ವೈಶಿಷ್ಠಗಳಿಂದ ಕೂಡಿದ ಹೊಸ ಮೊಬೈಲ್‌ನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ವಿತರಿಸಲಾಗುತ್ತಿದೆ. ಪೋಷಣ್ ಟ್ರ್ಯಾಕರ್ ಆಪ್‌ನ ಸುಲಲಿತ ಕಾರ್ಯ ನಿರ್ವಹಣೆಗೆ ಸೇರಿದಂತೆ ಕ್ಷೇತ್ರ ಮಟ್ಟದಲ್ಲಿ ಅಗತ್ಯವಿರುವ ಇತರೆ ಯಾವುದೇ ಮಾಹಿತಿಯನ್ನು ಸಂಗ್ರಹಿಸಿ, ವರದಿ ಮಾಡಲು ಇದು ನೆರವು ನೀಡಲಿದ್ದು, ಅಂಗನವಾಡಿ ಸಿಬ್ಬಂದಿಗಳು ಇನ್ನಷ್ಟು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

Exit mobile version