Site icon Vistara News

Uttara Kannada News: ದೇಶಾಭಿಮಾನ, ತಂದೆ-ತಾಯಿ ಮೇಲೆ ಪ್ರೀತಿ ಮೂಡಿಸುವುದೇ ನಿಜವಾದ ಶಿಕ್ಷಣ: ಎಸ್.ಜೆ. ಖೈರನ್

Annual friendship gathering and award ceremony inauguration at Yallapur

ಯಲ್ಲಾಪುರ: ಶಿಕ್ಷಣಕ್ಕೆ (Education) ಮೂರು ತತ್ವಗಳಿವೆ. ನಾವು ಕಲಿತ ಶಿಕ್ಷಣ ನಮ್ಮನ್ನು ಸ್ವಾವಲಂಬಿಯಾಗಿ ಬದುಕಲು ದಾರಿ ಮಾಡಿಕೊಡಬೇಕು. ಶಿಕ್ಷಣ ಪಡೆದ ಎಲ್ಲರೂ ದೇಶಾಭಿಮಾನಿಗಳಾಗಬೇಕು ಹಾಗೂ ವೃದ್ಧಾಪ್ಯದಲ್ಲಿ ನಮ್ಮ ತಂದೆ ತಾಯಿಯರನ್ನು ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ಬರಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹೊನ್ನಾವರದ ನಿವೃತ್ತ ಮುಖ್ಯ ಶಿಕ್ಷಕ ಎಸ್.ಜೆ. ಖೈರನ್ ಹೇಳಿದರು.

ಪಟ್ಟಣದ ವೈಟಿಎಸ್ಎಸ್ ಪ್ರೌಢಶಾಲೆ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರೂ ಸಹ ತಮ್ಮ ಮಕ್ಕಳ ಬೆಳೆಯುವ ಹಂತದಲ್ಲಿ ಜತೆಗಿದ್ದು, ಅವರಿಗೆ ಪ್ರೀತಿ ನೀಡಬೇಕು. ತಂದೆಯ ಹೆಗಲು ಹಾಗೂ ತಾಯಿಯ ಮಡಿಲಿನಷ್ಟು ಭದ್ರವಾದ ಸ್ಥಳ ಜಗತ್ತಿನಲ್ಲಿ ಬೇರೊಂದಿಲ್ಲ ಎಂದರು.

ಹುಟ್ಟು ಸಾವಿನ ನಡುವಿನ ನಡುವೆ ಕಲಿಯುವುದೆಲ್ಲವು ಶಿಕ್ಷಣ ಎನ್ನುವ ಮಾತಿತ್ತು. ಆದರೆ ಇಂದು ಎಲ್ಲವನ್ನೂ ಕಲಿತು, ಮರೆತ ನಂತರ ಏನು ಉಳಿದಿರುತ್ತದೋ ಅದೇ ಶಿಕ್ಷಣವಾಗಿದೆ ಎಂದರು.

ಇದನ್ನೂ ಓದಿ: Karnataka Weather : ನಾಳೆ ಇಲ್ಲೆಲ್ಲ ಮಳೆ; ಚಳಿಯೂ ಸಾಥ್‌

ಮಕ್ಕಳು ಓಟದ ಕುದುರೆಗಳಲ್ಲ. ಅವರ ಮೇಲೆ ಪಾಲಕರು ಸವಾರಿ ಮಾಡಬಾರದು. ಕೇವಲ ಅಂಕಗಳೇ ಮಕ್ಕಳ ಜೀವನ ರೂಪಿಸಲಾರದು. ನಮ್ಮೊಳಗಿರುವುದನ್ನು ಹೊರಗೆ ತರುವುದು ಶಿಕ್ಷಣವಾಗಬೇಕೆ ಹೊರತು, ಹೊರಗಿರುವುದನ್ನು ಒಳಗೆ ತುಂಬುವುದು ಶಿಕ್ಷಣವಾಗಬಾರದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ವಿದ್ಯಾರ್ಥಿ ಹಾಗೂ ಯುಕೆ ಎಸ್‌.ಆರ್‌. ಆಯಿಲ್‌ನ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಕಾಶಿನಾಥ ಶ್ಯಾನಭಾಗ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆಯ ಶಿಕ್ಷಕ ವಿನೋದ ಭಟ್ ಹಾಗೂ ಹಿರಿಯ ಕ್ರೀಡಾಪಟು ಪದ್ಮನಾಭ ಶ್ಯಾನಭಾಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಶ್ರೀದೇವಿ ನಾಯ್ಕ ಅವರಿಗೆ ವಿಶೇಷ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ಅಂತೆಯೇ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ಆದರ್ಶ ವಿದ್ಯಾರ್ಥಿ, ವಿದ್ಯಾರ್ಥಿನಿ ಮತ್ತು ಉತ್ತಮ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಶ್ರೀದೇವಿ ನಾಯ್ಕ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಇದನ್ನೂ ಓದಿ: KSDL Bangalore: ಕೆಎಸ್‌ಡಿಎಲ್ ಮಾರ್ಜಕಗಳ ಮಾರಾಟದಲ್ಲಿ 40 ವರ್ಷಗಳಲ್ಲೇ ದಾಖಲೆ ವಹಿವಾಟು!

ಮಾಜಿ ವಿದ್ಯಾರ್ಥಿ ಹಾಗೂ ಹಿನ್ನಲೆ ಗಾಯಕಿ ವಸುಶ್ರೀ ಹಳೆಮನೆ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಾಲಕೃಷ್ಣ ನಾಯಕ, ಆಡಳಿತ ಮಂಡಳಿಯ ನಿರ್ದೇಶಕ ನಾಗರಾಜ ಮದ್ಗುಣಿ ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಂಶುಪಾಲ ಆನಂದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿನೋದ ಹೆಗಡೆ ನಿರ್ವಹಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ಎನ್.ಎಸ್. ಭಟ್ ವಂದಿಸಿದರು.

Exit mobile version