ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕ್ಯಾಂಪಿಗೆ ಮಂಗಳವಾರ ಭೇಟಿ ನೀಡಿದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು (Arunachal Pradesh Chief Minister Pema Khandu) ಅವರನ್ನು ಟಿಬೆಟಿಯನ್ನರು ಅದ್ಧೂರಿಯಾಗಿ ಬರಮಾಡಿಕೊಂಡರು.
ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ ಮುಂಡಗೋಡದಿಂದ ಕ್ಯಾಂಪ್ ನಂಬರ್ 1 ಗಾದೇನ ಝಾಂಗ್ಸಗೆ ಆಗಮಿಸಿದರು. ಮುಖ್ಯಮಂತ್ರಿ ಅವರನ್ನು ಟಿಬೆಟಿಯನ್ನರು ಸಾಂಪ್ರದಾಯಿಕ ಉಡುಗೆ ತೊಟ್ಟು ಸರತಿಸಾಲಿನಲ್ಲಿ ನಿಂತು ಅದ್ದೂರಿಯಾಗಿ ಬರಮಾಡಿಕೊಂಡರು.
ಇದಕ್ಕೂ ಮೊದಲು ತಾಲೂಕಿನ ಗಡಿ ವಡಗಟ್ಟಾದಲ್ಲಿ ಜಿಲ್ಲಾಡಳಿತ ವತಿಯಿಂದ ಶಿರಸಿ ಎಸಿ ದೇವರಾಜ ಡಿ. ಮತ್ತು ತಾಲೂಕು ತಹಸೀಲ್ದಾರ್ ಶಂಕರ ಗೌಡಿ ಅವರು ಹೂಗುಚ್ಛ ನೀಡಿ, ತಾಲೂಕಿಗೆ ಬರಮಾಡಿಕೊಂಡರು.
ಇದನ್ನೂ ಓದಿ: ICC World Cup 2023: ಸೆಮಿ ಪಂದ್ಯಗಳ ಅಂಪೈರ್ ಪಟ್ಟಿ, ಮಳೆ ನಿಯಮ ಹೀಗಿದೆ
ಮುಖ್ಯಮಂತ್ರಿ ಪೇಮಾ ಖಂಡು ಅವರು ಮಂಗಳವಾರದಿಂದ ಗುರುವಾರದವರೆಗೆ ಟಿಬೆಟಿಯನ್ ವಿವಿಧ ಕ್ಯಾಂಪ್‌ಗಳಿಗೆ ಭೇಟಿ ನೀಡಿ ಟಿಬೆಟಿಯನ್‌ರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಪೊಲೀಸ್ ಬಿಗಿ ಭದ್ರತೆ
ಇಬ್ಬರು ಡಿವೈಎಸ್ಪಿ, 8 ಜನ ಸಿಪಿಐ, 14 ಜನ ಪಿಎಸ್ಐ, 27ಜನ ಎಎಸೈ, 147 ಕಾನ್‌ಸ್ಟೇಬಲ್, 12 ಮಹಿಳಾ ಸಿಬ್ಬಂದಿಗಳು, 1 ಕೆಎಸ್ಆರ್ ಪಿ ಮತ್ತು 2 ಡಿಆರ್ ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.