Site icon Vistara News

Uttara Kannada News: ಕೋಳಿ ಅಂಕದ ಮೇಲೆ ದಾಳಿ; 8 ಆರೋಪಿಗಳ ಬಂಧನ

attack on cockfight 8 accused arrested at ankola

ಅಂಕೋಲಾ: ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದಾಗ ಅಂಕೋಲಾ ಠಾಣೆ ಪೊಲೀಸರು (Ankola Police Station) ದಾಳಿ ನಡೆಸಿ 8 ಜನ ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಡೊಂಗ್ರಿ ಗ್ರಾ.ಪಂ ವ್ಯಾಪ್ತಿಯ ಹೆಗ್ಗರಣಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಅಂಕೋಲಾ ಠಾಣೆಯ ಪಿಎಸೈ ಉದ್ದಪ್ಪ ಧರೆಪ್ಪನವರ ನೇತೃತ್ವದಲ್ಲಿ ದಾಳಿ ನಡೆಸಿ, ಅರಣ್ಯ ಪ್ರದೇಶದಲ್ಲಿ ಕೋಳಿ ಕಾದಾಟ ನಡೆಸಿ, ಅದರ ಮೇಲೆ ಹಣ ಕಟ್ಟಿ ಜೂಜಾಟ ನಡೆಸಿದ್ದ 8 ಜನ ಆರೋಪಿಗಳನ್ನು ಹಾಗೂ ಕೋಳಿ ಮತ್ತು ನಗದು ಹಣವನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಿಎಸೈ ಉದ್ದಪ್ಪ ಧರೆಪ್ಪನವರ ನೇತೃತ್ಬದಲ್ಲಿ ನಡೆದ ದಾಳಿಯಲ್ಲಿ ಗುಪ್ತದಳದ ಸಿಬ್ಬಂದಿ ರೋಹಿದಾಸ ನಾಯ್ಕ, ಚಾಲಕ ಜಗದೀಶ ನಾಯ್ಕ, ಸಿಬ್ಬಂದಿಗಳಾದ ಮಜೋಜ್, ಪ್ರೇಮಾನಂದ ನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಈ ಕುರಿತು ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version