Site icon Vistara News

Uttara Kannada News: ಕಡಲಾಮೆಯ ಹೊಟ್ಟೆಯಲ್ಲಿ ಬಿಸ್ಕೆಟ್ ರ‍್ಯಾಪರ್ ಪತ್ತೆ!

Biscuit wrapper found in stomach of dead hawksbill squid

ಕಾರವಾರ: ಮನುಷ್ಯ ಎಲ್ಲೆಂದರಲ್ಲಿ ಬಿಸಾಡುವ ಪ್ಲ್ಯಾಸ್ಟಿಕ್ ತ್ಯಾಜ್ಯ ಇಷ್ಟು ದಿನ ಭೂಮಿಯ ಮೇಲಿನ ಜಾನುವಾರುಗಳ ಹೊಟ್ಟೆಯನ್ನು ಸೇರುವುದು ಮಾತ್ರ ಕಂಡುಬರುತ್ತಿತ್ತು. ಆದರೆ ಇದೀಗ ಸಮುದ್ರದಾಳದ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತಿರುವುದು ಕಂಡುಬರುತ್ತಿದೆ, (Uttara Kannada News) ಕಾರವಾರದ ಕಡಲತೀರವೊಂದರಲ್ಲಿ ಅಪರೂಪದ ಹಾಕ್ಸ್‌ಬಿಲ್ (Hawksbill) ಪ್ರಭೇದದ ಕಡಲಾಮೆಯೊಂದರ ಮೃತದೇಹ ಪತ್ತೆಯಾಗಿದ್ದು, ಅದರ ಮರಣೋತ್ತರ ಪರೀಕ್ಷೆಯಲ್ಲಿ ಆಮೆಯ ಹೊಟ್ಟೆಯೊಳಗೆ ಬಿಸ್ಕತ್‌ ರ‍್ಯಾಪರ್‌ (Biscuit wrapper) ಸಿಕ್ಕಿದೆ!

ತಾಲೂಕಿನ ದೇವಭಾಗ್ ಕಡಲತೀರದಲ್ಲಿ ಶನಿವಾರ ಅರಣ್ಯ ಇಲಾಖೆಯ ಕರಾವಳಿ ಮತ್ತು ಸಾಗರ ಪರಿಸರ ಸಂರಕ್ಷಣಾ ಘಟಕ (CMECC)ದ ಗಸ್ತು ಪಡೆ ಕಡಲಾಮೆಯೊಂದರ ಮೃತದೇಹವನ್ನು ಪತ್ತೆ ಮಾಡಿತ್ತು. ದೇಶದ ಪಶ್ಚಿಮ ಕರಾವಳಿಯಲ್ಲಿ ಅಪರೂಪವಾಗಿರುವ ಹಾಗೂ ಅಳಿವಿನಂಚಿನಲ್ಲಿರುವ ಹಾಕ್ಸಬಿಲ್ ಪ್ರಭೇದಕ್ಕೆ ಸೇರಿದ ಸುಮಾರು 30 ವರ್ಷ ಪ್ರಾಯದ ಕಡಲಾಮೆಯ ಮೃತದೇಹ ಕಂಡ ಗಸ್ತುಪಡೆ ಮೊದಲಿಗೆ ಮೀನುಗಾರಿಕಾ ಬಲೆಗೆ ಸಿಲುಕಿ ಆಮೆ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿತ್ತು. ಆದರೆ ನಂತರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Road Accident : ಬೈಕ್‌-ಕಾರು ಡಿಕ್ಕಿ; ಹಿಂಬದಿ ಕುಳಿತಿದ್ದ ಮಹಿಳೆ ಸಾವು

ಮೃತ ಆಮೆಯ ಹೊಟ್ಟೆಯಲ್ಲಿ ಆಹಾರದ ಜತೆಗೆ ಬಿಸ್ಕತ್‌ ಪ್ಯಾಕ್‌ನ ಪ್ಲಾಸ್ಟಿಕ್ ರ‍್ಯಾಪರ್ ಪತ್ತೆಯಾಗಿದೆ. ಆಮೆಯ ಕಾಲು ಹಾಗೂ ಕುತ್ತಿಗೆಗೆ ಬಲೆಯ ತುಂಡುಗಳು ಸುತ್ತಿಕೊಂಡಿದ್ದು ಇದರಿಂದಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಆಮೆಯ ಹೊಟ್ಟೆಯಲ್ಲಿ ಪತ್ತೆಯಾಗಿರುವ ಪ್ಲಾಸ್ಟಿಕ್ ತ್ಯಾಜ್ಯ ಜೀರ್ಣವಾಗದೇ ಆಮೆಯ ಸಾವಿಗೆ ಕಾರಣವಾಗಿರಬಹುದು ಎಂದು ಕರಾವಳಿ ಮತ್ತು ಸಾಗರ ಪರಿಸರ ಸಂರಕ್ಷಣಾ ಘಟಕದ ಆರ್‌ಎಫ್ಓ ಪ್ರಮೋದ್ ನಾಯಕ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: 100 ಕಿ.ಮೀ ವೇಗದಲ್ಲಿ ಚಲಿಸಿದ ಚಾಲಕ ರಹಿತ ಗೂಡ್ಸ್ ಟ್ರೈನ್! ತಪ್ಪಿದ ಭಾರೀ ಅನಾಹುತ

ಗಾತ್ರದಲ್ಲಿ ಚಿಕ್ಕದಾಗಿರುವ ಹಾಕ್ಸ್‌ಬಿಲ್ ಪ್ರಭೇದದ ಕಡಲಾಮೆಗಳು ಪೆಸಿಫಿಕ್, ಅಟ್ಲಾಂಟಿಕ್ ಮಹಾಸಾಗರ, ಅರಬ್ಬೀ ಸಮುದ್ರದ ಅಂಡಮಾನ್, ಲಕ್ಷದ್ವೀಪದಂತಹ ಹವಳದ ದಂಡೆಗಳಿರುವ ತೀರಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲೂ ಅಪರೂಪವೆಂಬಂತೆ ಆಗಾಗ ಇವುಗಳ ದರ್ಶನವಾಗುತ್ತದೆ. ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪ, ಕಾರವಾರ ಭಾಗದ ಕೂರ್ಮಗಡ ದ್ವೀಪ ಸೇರಿದಂತೆ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಕಾಣಸಿಗುತ್ತವೆ.

Exit mobile version