ಯಲ್ಲಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಜ.28 ರಂದು ಜಿಲ್ಲಾ ಮಟ್ಟದ ವಿಪ್ರ ಸಮಾವೇಶ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಹೇಳಿದರು.
ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಎ.ಕೆ.ಬಿ.ಎಂ.ಎಸ್. ರಾಜ್ಯಾಧ್ಯಕ್ಷ ಅಶೋಕ ಹಾರನಳ್ಳಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಪ್ರ ಸಮುದಾಯದ ಸವಾಲುಗಳು ಹಾಗೂ ಅದರ ಪರಿಹಾರಗಳನ್ನು ಕಂಡುಕೊಳ್ಳಲು, ವಿಚಾರ ವಿನಿಮಯಕ್ಕಾಗಿ ಗೋಷ್ಠಿಯನ್ನು, ಯಕ್ಷಗೆಜ್ಜೆ ತಂಡದಿಂದ ಯಕ್ಷನೃತ್ಯ ಹಾಗೂ ರಾಮಕೃಷ್ಣ ಹೆಗಡೆ ಹಿಲ್ಲೂರು ತಂಡದಿಂದ ಯಕ್ಷವೈಭವ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Weather : ಸಿಲಿಕಾನ್ ಸಿಟಿಯಲ್ಲಿ ದಟ್ಟ ಮಂಜು; ರಾಜ್ಯಾದ್ಯಂತ ನಾಳೆಯೂ ಒಣ ಹವೆ
ಸಮಾರೋಪ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದು, ಸಮುದಾಯದ ಕೆಲ ಹಿರಿಯರನ್ನು ಸನ್ಮಾನಿಸಲಾಗುವುದು. ತದನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ವಿಪ್ರ ಬಾಂಧವರು ಪಾಲ್ಗೊಳ್ಳುವಂತೆ ಅವರು ಕೋರಿದರು.
ಇದನ್ನೂ ಓದಿ: Bangalore University: ವಿದ್ಯಾರ್ಥಿಗಳ ಉನ್ನತೀಕರಣ; ಬೆಂಗಳೂರು ವಿವಿ ಮತ್ತು IIPA – KRB ಒಡಂಬಡಿಕೆ
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ್ ರಾಯ್ಸದ, ರಾಜ್ಯ ಕಾರ್ಯಕಾರಣಿ ಸದಸ್ಯ ನಾರಾಯಣ ಹೆಗಡೆ ಕರಿಕಲ್, ತಾಲೂಕು ಸಂಚಾಲಕ ಟಿ.ಶಂಕರ್ ಭಟ್, ಸಂಘಟನಾ ಪ್ರಮುಖರಾದ ಪ್ರಮೋದ್ ಹೆಗಡೆ, ಕೆ.ಎಸ್. ಭಟ್, ಪ್ರಸಾದ್ ಹೆಗಡೆ, ಚಂದ್ರಕಲಾ ಭಟ್, ಕುಮಾರ್ ಭಟ್ ಹಂಡ್ರಮನೆ, ಗಜಾನನ ಭಟ್ ಬೊಳಗುಡ್ಡೆ, ಡಿ.ಶಂಕರ್ ಭಟ್, ಶ್ರೀರಂಗ ಕಟ್ಟಿ ಮತ್ತಿತರರಿದ್ದರು.