ಬನವಾಸಿ: ಸಮೀಪದ ಭಾಶಿ ಗ್ರಾಮ ಪಂಚಾಯಿತಿಯ ನರೂರ ಗ್ರಾಮದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ (MP B.Y. Raghavendra) ಹಾಗೂ ಬಿಜೆಪಿ ಪ್ರಮುಖರು ಶುಕ್ರವಾರ ಬರ ಅಧ್ಯಯನ (Drought Study) ನಡೆಸಿದರು.
ಬನವಾಸಿ ಸಮೀಪದ ನರೂರ ಗ್ರಾಮದಲ್ಲಿ ಬೆಂಕಿ ರೋಗಕ್ಕೆ ತುತ್ತಾದ ಭತ್ತದ ಗದ್ದೆಗಳಿಗೆ ತೆರಳಿ ಬರ ಅಧ್ಯಯನ ನಡೆಸಿ, ರೈತರ ಸಮಸ್ಯೆಗಳನ್ನು ಆಲಿಸಿದರು.
ಮಳೆಯ ಕೊರತೆಯಿಂದ ಬೆಳೆ ತೀರಾ ಕಡಿಮೆಯಾಗಿದೆ, ಬಂದ ಮಳೆಯನ್ನೇ ನಂಬಿಕೊಂಡು ಅಲ್ಪ ಭತ್ತವನ್ನು ನಾಟಿ ಮಾಡಿದ್ದೇವು, ಆದರೆ ಈಗ ಬೆಂಕಿ ರೋಗ ತಗುಲಿ ಆ ಬೆಳೆಯೂ ನಾಶವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಸಮಸ್ಯೆಯನ್ನು ಗಮನಿಸಿ, ಸೂಕ್ತ ಪರಿಹಾರ ನೀಡುವಂತೆ ರೈತರು ಸಂಸದರಿಗೆ ಮನವಿ ಮಾಡಿದರು.
ಇದನ್ನೂ ಓದಿ: ‘ಬೆಂಗಳೂರು ನನಗೆ ಎರಡನೇ ತವರು’; ಕರುನಾಡ ಜನರ ಬಗ್ಗೆ ಕೊಹ್ಲಿ ಮನದಾಳದ ಮಾತು
ಈ ಹಿಂದೆ ಮಾಡಲಾಗಿದ್ದ ಸಾಲಮನ್ನಾದ ಹಣ ಸಹ ಇಲ್ಲಿನ ಕೆಲವು ರೈತರಿಗೆ ಬಂದಿಲ್ಲ. ಬೆಳೆ ವಿಮೆ ಸಹ ಬಂದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಬೆಳೆವಿಮೆಯನ್ನಾದರೂ ಜಮಾ ಮಾಡಬೇಕು. ಇಲ್ಲವಾದಲ್ಲಿ ರೈತರು ಜೀವನ ನಡೆಸುವುದೇ ಕಷ್ಟ ವಾಗುತ್ತದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರ ಕುಂಭಕರ್ಣನ ನಿದ್ದೆಯಲ್ಲಿದೆ. ಇಡೀ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಇಂತಹ ಸಂದರ್ಭದಲ್ಲಿ ರೈತರ ಕಣ್ಣೀರು ವರೆಸುವ ಬದಲು ಅವರ ಕಚೇರಿ, ಬಂಗ್ಲೆ, ಕಾರುಗಳು ಬಗ್ಗೆಯೇ ಚಿಂತೆ ಮಾಡುತ್ತಿದ್ದಾರೆ.
ಅವರ ಗ್ಯಾರಂಟಿ ಕಾರ್ಡ್ ಕಟ್ಟಕಡೆಯ ವ್ಯಕ್ತಿಗೂ ತಲುಪಿದೆ ಎಂಬ ಮನೋಭಾವದಲ್ಲಿದ್ದಾರೆ. ಆದರೆ ಅದು ಎಲ್ಲರಿಗೂ ತಲುಪಿಲ್ಲ. ಸಾಕಷ್ಟು ಸಮಸ್ಯೆಗಳಿವೆ ಅದನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Israel Palestine War: ಲೆಬನಾನ್ ಉಗ್ರರ ಮೇಲೆ ಇಸ್ರೇಲ್ ದಾಳಿ; ಗಾಜಾದಲ್ಲಿ 11,000 ದಾಟಿದ ಸಾವಿನ ಸಂಖ್ಯೆ
ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಗುರುಪ್ರಸಾದ್ ಹರ್ತೇಬೈಲ್ ಸೇರಿದಂತೆ ಹಲವರು ಇದ್ದರು.