Site icon Vistara News

Uttara Kannada News: ಮುಂಡಗೋಡದಲ್ಲಿ ಉದ್ಯೋಗ ಖಾತ್ರಿ ಅಭಿಯಾನ

Employment Guarantee Campaign in Mundagoda

ಕಾರವಾರ: ತೀವ್ರವಾಗಿ ಆವರಿಸಿರುವ ಬೇಸಿಗೆ ಹಾಗೂ ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ (PDO), ಅಧಿಕಾರಿಗಳು, ಸಿಬ್ಬಂದಿ, ಬಿಎಫ್‌ಟಿಗಳು, ಕಾಯಕ ಬಂಧುಗಳು ಕಾರ್ಯಪ್ರವೃತ್ತರಾಗಿ ಗ್ರಾಮೀಣ ಜನರಿಗೆ ಕೆಲಸ ಒದಗಿಸಲು ಮುಂದಾಗಬೇಕು, ಮನೆ-ಮನೆಗೆ ಭೇಟಿ ನೀಡಿ ಕೆಲಸದ ಬೇಡಿಕೆ ಅರ್ಜಿಗಳನ್ನು ಸಂಗ್ರಹಿಸಿ, ಏಪ್ರಿಲ್ 1 ರಿಂದ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಬೇಕು ಎಂದು ಮುಂಡಗೋಡ ತಾ.ಪಂ. ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ (Uttara Kannada News) ಹೇಳಿದರು.

ಇದನ್ನೂ ಓದಿ: Tumkur News: ಶಿರಾದಲ್ಲಿ ಈಜಲು ಹೋದ ವಿದ್ಯಾರ್ಥಿ ಹೊಂಡದಲ್ಲಿ ಮುಳುಗಿ ಸಾವು

ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರು, ಹುನಗುಂದ, ನಂದಿಕಟ್ಟಾ, ಗುಂಜಾವತಿ ಹಾಗೂ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಆಯೋಜಿಸಲಾಗಿದ್ದ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನದ ಭಾಗವಾದ, ಮನೆ ಮನೆ ಭೇಟಿ ಮಾಡಿ ನಮೂನೆ 6ರಲ್ಲಿ ಕೂಲಿ ಬೇಡಿಕೆ ಸಂಗ್ರಹಿಸುವ ಕಾರ್ಯ ಮತ್ತು ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದೇ ವೇಳೆ ಲೋಕಸಭಾ ಚುನಾವಣೆ ಪ್ರಯುಕ್ತ ಗ್ರಾಮಸ್ಥರಿಗೆ ಹಾಗೂ ಮತದಾರರಿಗೆ ಚುನಾವಣೆ ಮಹತ್ವ, ನಿಷ್ಪಕ್ಷಪಾತ ಮತದಾನ, ಮತದಾನ ಪ್ರಕ್ರಿಯೆ ಕುರಿತು ಮತದಾನ ಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ: Karnataka Weather : ಇನ್ನೆರಡು ದಿನ ದಕ್ಷಿಣ ಒಳನಾಡಲ್ಲಿ ಭರ್ಜರಿ ಮಳೆ; ಬೆಂಗಳೂರು ಸಖತ್‌ ಹಾಟ್!

ಈ ಸಂದರ್ಭದಲ್ಲಿ ಇಂದೂರು ಹಾಗೂ ಮೈನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರಿನಿವಾಸ ಮರಾಠೆ, ಮಂಜುನಾಥ, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ, ಬಿಎಫ್‌ಟಿ ಗಳಾದ ಗಣಪತಿ ಪವಾರ, ಹನುಮಂತ ಇಡಗೋಡ, ಯುವರಾಜ್ ಕೆ, ಮಂಜು ಸಾಗರ, ಮಂಜು ಪೂಜಾರ ಸಂತೋಷ ಹಿರೇಮಠ ಮತ್ತು ಜಿಕೆಎಂ ಶಿವಲೀಲಾ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version