ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ (Uttara Kannada News) ನಡೆಯಿತು.
ವಿಶ್ವದರ್ಶನ ಶಿಕ್ಷಣ ಸಮೂಹದ ಸಿಇಒ ಅಜಯ್ ಭಾರತೀಯ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಮಾಡುವ ಕಾರ್ಯ ಸ್ವಹಿತದ ಜತೆಗೆ ದೇಶದ ಹಿತವನ್ನು ಸಾಧಿಸುವಂತಿರಬೇಕು. ಶಿಕ್ಷಣ ನೀಡಬೇಕಾದ, ಪಡೆಯಬೇಕಾದ ಎಲ್ಲರೂ ರಾಷ್ಟ್ರದ ಘನತೆ, ಗೌರವವನ್ನು ಕಾಪಾಡುವ ಆಲೋಚನೆಯನ್ನು ಸದಾ ಮಾಡುತ್ತಿರಬೇಕು ಎಂದು ಹೇಳಿದರು.
ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ
ಕಾಲೇಜಿನ ಪ್ರಾಚಾರ್ಯ ಡಿ.ಕೆ. ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗಾಗಿ ಸಂಪತ್ತು ಮಾಡುವುದಕ್ಕಿಂತ ಮಕ್ಕಳನ್ನೇ ಸಂಪತ್ತಾಗಿಸುವುದು ಸೂಕ್ತ. ಜ್ಞಾನ ಸಂಪತ್ತಿನಿಂದ ಮಕ್ಕಳನ್ನು ಶ್ರೀಮಂತರಾಗಿಸುವ ಮಾರ್ಗವೇ ಶ್ರೇಷ್ಠವಾದದ್ದು ಆ ಕಾರ್ಯವನ್ನು ವಿಶ್ವದರ್ಶನ ಮಾಡುತ್ತಿದೆ ಎಂದರು.
ಅದಕ್ಕಾಗಿ ನಮ್ಮ ಪಿಯು ಕಾಲೇಜು ಉತ್ತಮ ಮೂಲಸೌಕರ್ಯ ಮತ್ತು ನುರಿತ ಉಪನ್ಯಾಸಕ ವರ್ಗವನ್ನು ಹೊಂದಿದೆ ಎಂದು ಹೇಳಿದರಲ್ಲದೇ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಾಲೇಜಿನ ಉಪನ್ಯಾಸಕ ವರ್ಗವನ್ನು ಪರಿಚಯಿಸಿ, ಕಾಲೇಜಿನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಮಾಜಿ ವಿದ್ಯಾರ್ಥಿಗಳಾದ ಅಪೂರ್ವ ಹಾಗೂ ಶ್ರೀಗೌರಿ ಭಟ್, ಕಾಲೇಜಿನಲ್ಲಿ ತಮ್ಮ ಅನುಭವ ಜೀವನಪೂರ್ತಿ ಸ್ಮರಿಸುವಂತದ್ದು ಎಂದು ಅನಿಸಿಕೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 42 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ಗೌರವಿಸಲಾಯಿತು.
ಇದನ್ನೂ ಓದಿ: Samsung: ಸ್ಯಾಮ್‌ಸಂಗ್‌ನ ʼಬಿಗ್ ಟಿವಿ ಡೇಸ್ʼ ಸೇಲ್; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್!
ಶ್ರಾವ್ಯ ಪ್ರಾರ್ಥಿಸಿದಳು. ಉಪನ್ಯಾಸಕ ಗುರುರಾಜ್ ಭಟ್ ನಿರ್ವಹಿಸಿದರು. ಉಪ ಪ್ರಾಂಶುಪಾಲ ನಾಗರಾಜ ಹೆಗಡೆ ವಂದಿಸಿದರು.